ದೇವೇಗೌಡರ ಕನಸು ಯುವಜನತಾದಳದಿಂದ ನನಸು…
ಶಿವಮೊಗ್ಗ: ಯಾವುದೇ ಒಂದು ಸಂಘಟನೆಯಿರಲಿ, ರಾಜಕೀಯ ಪಕ್ಷವಿರಲಿ ಅವುಗಳಿಗೆ ಬಲ ತುಂಬುವುದು ಸಂಘಟನೆಯ ಸಕ್ರೀಯ ಕಾರ್ಯಕರ್ತರು. ಇಂದು ರಾಜ್ಯದಲ್ಲಿ ಮತ್ತೊಂಮ್ಮೆ ಶಕ್ತಿಯುತ ಪ್ರಾದೇಶಿಕ ಪಕ್ಷವಾಗಿ ಜೆಡಿಎಸ್ ಹೊರಹೊಮ್ಮಲು ಪಕ್ಷದ ಯುವ ಕಾರ್ಯಕರ್ತರೇ ಕಾರಣ ಎಂದು ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್ ಹೇಳಿದರು.
ನಗರದ ನೆಹರೂ ರಸ್ತೆಯ ಗಾಂಧಿ ಮಂದಿರದಲ್ಲಿರುವ ಜಿಲ್ಲಾ ಜೆಡಿಎಸ್ ಕಛೇರಿ ಸಭಾಂಗಣದಲ್ಲಿ ಜೆಡಿಎಸ್ ಯುವ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಯುವ ಕಾರ್ಯಕರ್ತರ ಸಭೆ, ಸದಸ್ಯತ್ವ ಅಭಿಯಾನ ಹಾಗೂ ವಿವಿಧ ತಾಲೂಕು ಯುವ ಘಟಕದ ಪದಾಧಿಕಾರಿಗಳ ನೇಮಕ ಕಾರ್ಯಕ್ರಮವನ್ನು ಯುವಕರಿಗೆ ಸಾಂಕೇತಿಕವಾಗಿ ಸದಸ್ಯತ್ವ ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದ ಮಾತನಾಡಿದ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳೂ, ಹಾಲಿ ಕೇಂದ್ರ ಸಚಿವರು ಹಾಗೂ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರಾದ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಯುವಕರ ಕಣ್ಮಣಿ, ನಟ ಹಾಗೂ ಯುವ ಜೆಡಿಎಸ್ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರ ಕರೆಯ ಮೇರೆಗೆ ರಾಜ್ಯದಾದ್ಯಂತ ಜೆಡಿಎಸ್ ಸದಸ್ಯತ್ವ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮತ್ತು ಮಹಿಳೆಯರು ಪಕ್ಷದ ಸದಸ್ಯರಾದಾಗ ಮಾತ್ರ ಪಕ್ಷಕ್ಕೆ ಭೀಮಬಲ ಬಂದಂತಾಗುತ್ತದೆ. ಪ್ರತಿಯೊಬ್ಬ ಕಾರ್ಯಕರ್ತನೂ ಪಕ್ಷದ ಅಮೂಲ್ಯ ಆಸ್ತಿಯಾಗಿದ್ದು, ಸಂಘಟನೆ ಸದೃಢವಾಗುವುದು ವಿಶೇಷವಾಗಿ ಯುವ ಕಾರ್ಯಕರ್ತ ರಿಂದ ಮಾತ್ರ ಎಂದರು.
ದೇವೇಗೌಡರ ಕನಸು ಯುವಜನತಾದಳದಿಂದ ನನಸು ಎಂದು ಘೋಷಿಸಿದ ಅವರು, ಜಿಲ್ಲೆಯ ಪ್ರತಿಯೊಂದು ಬೂತ್ ಮಟ್ಟದಿಂದ ಕನಿಷ್ಟ ೧೦ ಸದಸ್ಯರಂಕೆ ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಕನಿಷ್ಟ ೨ರಿಂದ ೩ಸಾವಿರ ಸಕ್ರಿಯ ಯುವಕರ ತಂಡ ರಚಿಸಲು ನಿರ್ಧರಿಸಿದ್ದು, ಹಳ್ಳಿಯಿಂದ ದಿಲ್ಲಿಗೆ ಎಂಬಂತೆ ಜೆಡಿಎಸ್ ವರಿಷ್ಠ ದೇವೇಗೌಡರು ಮುಂಬರುವ ಚುನಾವಣೆಗಳಲ್ಲಿ ಯುವಕರಿಗೆ ಪಕ್ಷದಿಂದ ಶೇ. ೫೦ ಮೀಸಲಾತಿ ನೀಡಲು ನಿರ್ಧರಿಸಿದ್ದು, ಜೆಡಿಎಸ್ ಪಕ್ಷವನ್ನು ಬಲಿಷ್ಟಗೊಳಿಸುವ ಮೂಲಕ ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯ ಯುವಕರು ಸ್ಪರ್ಧೆಗೆ ಮುಂದೆ ಬರುವಂತೆ ಪ್ರೋತ್ಸಾಹಿಸಿದರು.
ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರ ಸೂಚನೆಯ ಮೇರೆಗೆ ತಾವು ಈಗಾಗಲೇ ಜಿಲ್ಲೆಯಲ್ಲಿ ಒಂದು ಸುತ್ತು ಪ್ರವಾಸ ಮುಗಿಸಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳ ಪಕ್ಷದ ಮುಖಂಡರು, ಹಿರಿಯರು, ಯುವಕರು ಹಾಗೂ ಮಹಿಳೆಯ ರಿಂದ ಪಕ್ಷ ಸಂಘಟನೆ ಕುರಿತು ಉತ್ತಮ ಸ್ಪಂದನೆ ದೊರೆತಿದೆ ಎಂದರು.
ಯುವ ಘಟಕಕ್ಕೆ ಇಂದು ಜಿಲ್ಲೆಯ ಎಲ್ಲಾ ತಾಲೂಕುಗಳ ಯುವ ಅಧ್ಯಕ್ಷರನ್ನು ನೇಮಕ ಮಾಡಲಾಗಿದ್ದು, ಪಕ್ಷ ಸಂಘಟನೆ ಹಾಗೂ ಸದಸ್ಯತ್ವ ನೋಂದಣಿಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ. ಯುವ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಆಯಾ ತಾಲೂಕು, ನಗರ ಹಾಗೂ ಜಿಲ್ಲಾ ಘಟಕದ ಮುಖಂಡರ ಸಲಹೆ- ಸಹಕಾರ ಹಾಗೂ ಮಾರ್ಗದರ್ಶನ ಪಡೆದು ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗ ಬೇಕೆಂದು ಮನವಿ ಮಾಡಿದರು.
ಶಾಸಕಿ ಶಾರದಾ ಪೂರ್ಯಾನಾಯ್ಕ ಅವರು ಮಾತನಾಡಿ, ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಅನೇಕ ಹಿರಿಯರ ಪರಿಶ್ರಮವಿದೆ. ಮುಂದಿನ ದಿನಗಳಲ್ಲಿ ಯುವಕರು, ಹಿರಿಯ ಸಲಹೆ ಮತ್ತು ಮಾರ್ಗದರ್ಶನ ಪಡೆದು ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಭವಿಷ್ಯದ ನಾಯಕರಾಗಿ ಬೆಳೆಯಬೇಕೆಂದು ಆಶಿಸಿದರಲ್ಲದೇ, ರಾಜ್ಯದಲ್ಲಿ ಜೆಡಿಎಸ್ ಹೆಮ್ಮರವಾಗಿ ಬೆಳೆಯುತ್ತಿರುವುದು ಕಾರ್ಯಕರ್ತರ ನಿಸ್ವಾರ್ಥ ಪರಿಶ್ರಮದಿಂದ. ಶಾಸಕರಾಗಿ ನಾವು ಮಾಡುವ ಪ್ರತಿಯೊಂದು ಒಳ್ಳೆಯ ಕಾರ್ಯಕ್ರಮಗಳ ಯಶಸ್ಸು ಪಕ್ಷದ ಕಾರ್ಯಕರ್ತರ ಯಶಸ್ಸು ಎಂದರು.
ರಾಜ್ಯ ಮುಖಂಡರಾದ ಭದ್ರಾವತಿಯ ಶಾರದಾ ಅಪ್ಪಾಜಿಗೌಡ ಅವರು ಮಾತನಾಡಿ, ಜಿಲ್ಲೆಯಲ್ಲಿ ಜೆಡಿಎಸ್ ಯುವ ಘಟಕಕ್ಕೆ ಕ್ರಿಯಾಶೀಲ ಅಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರು ದೊರೆತಿದ್ದು, ನಿವೇಲ್ಲರೂ ಇಂದು ಒಟ್ಟಾಗಿ ಸೇರಿ ಸಭೆ ಮಾಡಿರುವುದು ಸಂಸತವಾಗಿದೆ. ಜೆಡಿಎಸ್ ಎಂದರೆ ಕೇವಲ ಭದ್ರಾವತಿ ಮತ್ತು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಮಾತ್ರವಲ್ಲ, ಶಿವಮೊಗ್ಗ ಜಿಲ್ಲೆಯಾದ್ಯಂತ ಪಕ್ಷ ಸಂಘಟನೆಗೆ ಒತ್ತು ನೀಡಿದರೆ ಮತ್ತೊಮ್ಮೆ ಕುಮಾರಣ್ಣ ಸಿಎಂ ಆಗಲು ಸಾಧ್ಯ ಸಾಧ್ಯವಾಗುತ್ತದೆ ಅಷ್ಟೇ ಅಲ್ಲದೆ ಈ ಮೂಲಕ ರಾಜ್ಯದ ಅಭಿವೃದ್ಧಿಯನ್ನು ಸುವರ್ಣಾಕ್ಷರಗಳಲ್ಲಿ ಬರೆಯಲು ಸಾಧ್ಯ ಎಂದರು.
ಜಿಲ್ಲೆಯ ಎಲ್ಲಾ ನಾಯಕರು ಯುವಕರ ಬೆಂಬಲಕ್ಕೆ ನಿಲ್ಲುತೇತವೆ ಎಂದ ಅವರು, ಈ ಸಭೆ ಇಂದಿಗೆ ಮಾತ್ರ ಸೀಮಿತವಾಗದೆ, ಜಿಲ್ಲೆಯಾದ್ಯಂತ ಯುವಕರು ಕ್ರಿಯಾಶೀಲರಾಗಿ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಭವಿಷ್ಯದ ಯುವ ನಾಯಕರಾಗಿ ಬೆಳೆಯಲು ಇಂದಿನಿಂದಲೇ ಮುನ್ನಡೆಯಿರಿ ಎಂದರು.
ಮಾಜಿ ಶಾಸಕ ಹಾಗೂ ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಅವರು ಮಾತನಾಡಿ, ಯುವಜನತಾದಳದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರಲ್ಲದೇ, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಛೇರಿಗೆ ಬಂರುವಂತಾಗಬೇತು. ಯುವಕರು ದೇಶದ ಬೆನ್ನೆಲುಬು, ಅದೇ ರೀತಿ ಯಾವುದೇ ವ್ಯಕ್ತಿಗೆ ಬೆನ್ನು ಮೂಳೆ ಮುರಿದರೆ ಆತ ಯಾವುದೇ ಕೆಲಸ ನಿರ್ವಹಿಸಲು ಸಾಧ್ಯವಿಲ್ಲ. ಅಂತೆಯೇ ಯುವಕರಿಲ್ಲದೇ ರಾಜಕೀಯವೇ ಇಲ್ಲ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್, ಕಾರ್ಯಾಧ್ಯಕ್ಷರಾದ ದಾದಾಪೀರ್, ರಾಮಕೃಷ್ಣ, ಜೆಡಿಎಸ್ ರಾಜ್ಯ ರಾಜ್ಯ ಕಾರ್ಯದರ್ಶಿ ಅ.ರಾಕೇಶ್ ಡಿಸೋಜ, ಜೆಡಿಎಸ್ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಗೀತಾ ಸತೀಶ್, ರೈತ ಘಟಕದ ಜಿಲ್ಲಾಧ್ಯಕ್ಷ ದ್ಯಾನೇಶಪ್ಪ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮೊಹಮದ್ ಯೂಸುಫ್ , ಪ್ರಮುಖರಾದ ಸುರೇಶ್, ಸಿದ್ದಪ್ಪ, ದೀಪಕ್ ಸಿಂಗ್, ತಾಲೂಕು ಘಟಕದ ಅಧ್ಯಕ್ಷರುಗಳು, ಪದಾಧಿಕಾರಿಗಳು, ಉಪಸ್ಥಿತರಿದ್ದರು.
ಜೆಡಿಎಸ್ ಯುವಘಟಕದ ಜಿಲ್ಲಾ ಕಾರ್ಯಾಧ್ಯಕ್ಷ ಎಸ್.ಎಲ್. ನಿಖಿಲ್ ಸರ್ವರನ್ನೂ ಸ್ವಾಗತಿಸಿದರು. ಜೆಡಿಎಸ್ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ತ್ಯಾಗರಾಜ್ ಕಾರ್ಯಕ್ರಮ ನಿರೂಪಿಸಿದರು.