ರಾಯಲ್ ಆರ್ಕಿಡ್‌ನಲ್ಲಿ ಬಿಗ್ ಡಿಸ್ಕೌಂಟ್ ಸೇಲ್; ಬಟ್ಟೆ ಖರೀದಿಗೆ ಮುಗಿಬಿದ್ದ ಗ್ರಾಹಕರು…

sale

ಶಿವಮೊಗ್ಗ: ನಗರದ ಬಿ.ಹೆಚ್. ರಸ್ತೆಯ ರಾಯಲ್ ಆಕಿರ್ಡ್ ಸೆಂಟ್ರಲ್‌ನಲ್ಲಿ ಆಯೋಜಿಸಿರುವ ಅತಿ ದೊಡ್ಡ ಲೈಲ್ ಸ್ಟೈಲ್ ಬ್ರ್ಯಾಂಡ್ ಎಕ್ಸ್‌ಪೋನಲ್ಲಿ ನವೀನ ಬಗೆಯ ಉಡುಪುಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಗರದ ಗ್ರಾಹಕರು ಬ್ರಾಂಡೆಡ್ ಬಟ್ಟೆಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಬಿಗ್ ಡಿಸ್ಕೌಂಟ್ ಮೇಳಕ್ಕೆ ಗ್ರಾಹಕರಿಗೆ ಅತ್ಯುತ್ತಮ ಪ್ರತಿಕ್ರಿಯೆ ಬಂದ ಹಿನ್ನಲೆಯಲ್ಲಿ ಗೌರಿ ಹಾಗೂ ಗಣೇಶ ಹಬ್ಬದ ನಿಮಿತ್ತ ಈ ಮೇಳವನ್ನು ಇನ್ನೂ ನಾಲ್ಕುದಿನಗಳ ಕಾಲ ವಿಸ್ತರಿಸಲಾಗಿದೆ.
ಮೇಳದಲ್ಲಿ ಸಿದ್ದ ಉಡುಪುಗಳ ದರ ರೂ.೯೯ರಿಂದ ಆರಂಭವಾಗಲಿದೆ. ೧೯೯ರಿಂದ ೩೯೯ರೂ.ಗಳಿಗೆ ಪುರುಷರ ಟಿ-ಶರ್ಟ್ಸ್, ಶರ್ಟ್, ಜೀನ್ಸ್ ಪ್ಯಾಂಟ್, ಲೋವರ್, ಬರ್ಮುಡಾ ಇತ್ಯಾದಿಗಳು ದೊರೆಯಲಿವೆ.
ಇಂಡಿಯನ್ ಟೆರ್ರನಂ, ಜಾನ್ ಮಿಲ್ಲರ್, ಫ್ಲೈಯಿಂಗ್ ಮಿಷನ್ ವಿವಿಧ ಬ್ರ್ಯಾಂಡ್‌ಗಳ ಮೇಲೆ ಶೇ. ೯೦ರವರೆಗೆ ರಿಯಾಯಿತಿ ನೀಡಲಾಗುತ್ತಿದೆ. ೮ ಸಾವಿರ ರೂ.ಗಳ ವರೆಗಿನ ಉಡುಪುಗಳು ಈ ಮೇಳದಲ್ಲಿವೆ. ಪುರುಷರ ಪ್ರೀಮಿಯಂ ಗಾರ್ಮೆಂಟ್ಸ್‌ಗಳು ಇಲ್ಲಿ ಲಭ್ಯ. ಜೀನ್ಸ್ ಪ್ಯಾಂಟ್, ಕಾಟನ್ ಪ್ಯಾಂಟ್, ಕಾರ್ಗೋ ಪ್ಯಾಂಟ್, ಪ್ರೀಮಿಯಂ ಶರ್ಟ್‌ಗಳು, ಬ್ಲೇಜರ್ ವೇಸ್ಟ್ ಕೋಟ್, ಜಾಕೆಟ್, ಪುಲ್‌ಓವರ್ ರೂ.೪೯೯ಕ್ಕೆ ದೊರೆಯಲಿದೆ. ೧೪೯ರಿಂದ ೫೯೯ರೂ.ವರೆಗೆ ಮಹಿಳೆಯರಿಗೆ ಟಾಪ್, ವೆಸ್ಟರ್ನ್ ಸಜ್ಜು, ಪುಲ್‌ಓವರ್, ಲೇಡಿಸ್ ಪ್ಯಾಂಟ್, ಶರ್ಟ್, ಟಿ-ಶರ್ಟ್, ಬರ್ಮುಡಾ, ಜಾಕೆಟ್ ಮುಂತಾದವುಗಳು ಸಿಗಲಿವೆ. ವಾಹನಗಳ ಪಾರ್ಕಿಂಗ್ ಹಾಗೂ ಪ್ರವೇಶ ಉಚಿತವಿದೆ.