ಶಿವಮೊಗ್ಗ: ಶಿವಶಕ್ತಿ ಸಮಾಜದಿಂದ ಆ.೩೦ರ ಬೆಳಿಗ್ಗೆ ೭ಕ್ಕೆ ವಿನೋಬನಗರದ ಶಿವಾಲಯ ದೇವಸ್ಥಾನ ಸಭಾಂಗಣದಲ್ಲಿ ಉಚಿತ ಸಾಮೂಹಿಕ ದೀಕ್ಷೆಯನ್ನು ಏರ್ಪಡಿಸಲಾಗಿದೆ ಎಂದು ತಾವರೆಕೆರೆ ಶಿಲಾಮಠದ ಡಾ.ಅಭಿನವ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಸುದ್ದಿಗೋಷ್ಟಿಯಲ್ಲಿ ಹೇಳಿದರು.
ವೀರಶೈವ ಲಿಂಗಾಯಿತ, ಜಂಗಮ ಸಮಾಜದಲ್ಲಿ ದೀಕ್ಷೆ ಎಂಬುದು ಒಂದು ಪವಿತ್ರವಾದ ಸಂಸ್ಕಾರವಾಗಿದೆ. ೮ ವರ್ಷ ಮೇಲ್ಪಟ್ಟ ವಯೋಮಾನದ ಮಕ್ಕಳು ಹಾಗೂ ಪುರುಷರು ಮತ್ತು ಮಹಿಳೆ ಯರು ಲಿಂಗದೀಕ್ಷೆ ಪಡೆಯಬಹುದಾ ಗಿದೆ. ಇದಕ್ಕೆ ಗಂಡು ಹೆಣ್ಣು ಎಂಬ ಬೇಧವಿಲ್ಲ, ದೀಕ್ಷೆ ಸಮಯದಲ್ಲಿ ಪೂಜೆ ಮಾಡುವ ವಿಧಿ ವಿಧಾನಗಳನ್ನು ಹೇಳಿಕೊq ಲಾಗುವುದು ಎಂದರು.
ದೀಕ್ಷೆ ಪಡೆಯುವ ಪುರುಷರು ಮುಡಿ ತೆಗೆಸಿಕೊಳ್ಳಬೇಕು. ಮಹಿಳೆಯರು ಶುಚಿರ್ಭೂತರಾಗಿ ಸೀರೆ ಧರಿಸಿ ಬರಬೇಕು. ಲಿಂಗ ದೀಕ್ಷೆ ಪಡೆಯುವ ವರಿಗೆ ಕರಡಿಗೆಯನ್ನು ಉಚಿತವಾಗಿ ನೀಡಲಾಗುವುದು. ಜಂಗಮ ಸಮಾಜದವರಿಗೆ ಜೋಳಿಗೆ ಮತ್ತು ಬೆತ್ತವನ್ನು ನೀಡಲಾಗುವುದು ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಎಡೆಯೂರು ಕ್ಷೇತ್ರದ ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಸಂಸದ ಬಿ.ವೈ. ರಾಘವೇಂದ್ರ ಭಾಗವಹಿಸುತ್ತಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಶಕ್ತಿ ಸಮಾಜದ ಅಧ್ಯಕ್ಷೆ ಹೆಚ್.ಪಾರ್ವತಮ್ಮ ವಹಿಸುವರು. ಸಮಾಜದ ಬಾಂಧವರು ಇದರ ಪ್ರಯೋಜನ ಪಡೆಯಬೇಕು ಎಂದು ಪೂಜ್ಯರು ಕೋರಿದರು.
ಸಮಾಜದ ಅಧ್ಯಕ್ಷೆ ಹೆಚ್. ಪಾರ್ವತಮ್ಮ, ಪದಾಧಿಕಾರಿಗಳಾದ ರತ್ನಮ್ಮ, ಜಯಂತಿ, ಜ್ಯೋತಿಪ್ರಕಾಶ್, ಉಮೇಶ್ ಹಿರೇಮಠ, ಸಂತೋಷ ಬಳ್ಳೆಕೆರೆ, ಮರುಳೇಶ್ ಇದ್ದರು.