dvs-1

ಶಿವಮೊಗ್ಗ : ಚಂದ್ರಯಾನ-೩ರ ಯಶಸ್ಸು ನಮ್ಮ ದೇಶದ ಹೆಮ್ಮೆಯಾಗಿದ್ದು ಈ ಮೂಲಕ ನಮ್ಮ ಹಿರಿಯ ವಿಜನಿಗಳ ಕನಸು ನನಸಾಗಿದೆ ಎಂದು ಇಸ್ರೋ/ಯುಆರ್‌ಎಸ್‌ಸಿ ಜಿಸ್ಯಾಟ್-೭ ಮಿಷನ್‌ನ ಮಾಜಿ ವಿಜನಿ ಮತ್ತು ಯೋಜನಾ ನಿರ್ದೇಶಕ ಜಿ.ಶಿವಣ್ಣ ಹೇಳಿದರು.
ವಿಜನ ಮತ್ತು ತಂತ್ರಜನ ಇಲಾಖೆ, ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಕರ್ನಾಟಕ ರಾಜ್ಯ ವಿಜನ ಮತ್ತು ತಂತ್ರಜನ ಮಂಡಳಿ ಬೆಂಗಳೂರು ಹಾಗೂ ಜಿಪಂ, ದೇಶೀಯ ವಿದ್ಯಾಶಾಲಾ ಸಮಿತಿ ಶಿವಮೊಗ್ಗ ಇವರ ಆಶ್ರಯದಲ್ಲಿ ಇಂದು ನಗರದ ಡಿವಿಎಸ್ ಪಿಯು ಸ್ವತಂತ್ರ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಹ್ಯಾಕಾಶ ವಿಜನಿ ವಿಕ್ರಂ ಸಾರಾಬಾಯಿ ಸೇರಿದಂತೆ ಅನೇಕ ವಿಜನಿಗಳು ಚಂದ್ರನ ಮೇಲೆ ಉಪಗ್ರಹ ಕಳುಹಿಸುವ ಬಗ್ಗೆ ಸಾಕಷ್ಟು ಸಂಶೋಧನೆಗಳನ್ನು ಮಾಡುತ್ತಾ ಬಂದಿದ್ದು, ಚಂದ್ರಯಾನ-೩ರ ಯಶಸ್ಸು ಅವರ ಕನಸಿನ ಫಲವಾಗಿದೆ ಎಂದರು.
ದೇಶದ ರಕ್ಷಣಾ ವ್ಯವಸ್ಥೆಗಾಗಿ ಇಸ್ರೋದಿಂದ ಮೊದಲ ಉಪಗ್ರಹ ಉಡಾವಣೆ ಮಾಡಲಾಯಿತು. ನಂತರ ನೌಕಾ ಪಡೆಗಳಲ್ಲಿ ಸಂವಹಿಸಲು ಸೂಕ್ತ ಮಾಧ್ಯಮ ಇರಲಿಲ್ಲ ಅದಕ್ಕಾಗಿ, ಇನ್ಸಾಟ್-೦೭ನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಇಂದು ಇದನ್ನು ಭಾರತೀಯ ಮೂರು ಸೇನೆಗಳೂ ಬಳಸುತ್ತಿದ್ದಾರೆ. ಚಂದ್ರಯಾನ-೦೧ ಮತ್ತು ಚಂದ್ರಯಾನ-೦೨ ರಲ್ಲಿನ ಸೂಕ್ಷ್ಮ ವಿಚಾರಗಳನ್ನು ಅಧ್ಯಯನ ನಡೆಸಿ ಚಂದ್ರಯಾನ -೩ ರಲ್ಲಿ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿ ಅದ್ಭುತ ಸಾಧನೆ ತೋರಲಾಗಿದ್ದು, ದಕ್ಷಿಣ ಧೃವದಲ್ಲಿ ಲ್ಯಾಂಡಿಂಗ್ ಮಾಡಿದ ಮೊದಲ ದೇಶವಾಗಿ ಹೊರಹೊಮ್ಮಿದ್ದೇವೆ. ಈ ಮೂಲಕ ಚಂದ್ರನ ಮೇಲೆ ಇತರೆ ಎರಡು ದೇಶಗಳೊಂದಿಗೆ ನಮಗೂ ಹಕ್ಕಿದೆ ಎಂದು ತಿಳಿಸಿದ ಅವರು, ಪಿಪಿಟಿ ಪ್ರದರ್ಶನದ ಮೂಲಕ ಚಂದ್ರಯಾನ-೩ ರ ಸಂಪೂರ್ಣ ಪ್ರಕ್ರಿಯೆ, ವಿಜನಿ ವಿಕ್ರಮ್ ಸಾರಾಬಾಯಿ ಅವರ ಸಾಧನೆಗಳು, ಇತರೆ ಬಾಹ್ಯಾಕಾಶದ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು.
ಜಿಪಂ ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ ಮಾತನಾಡಿ, ಚಂದ್ರಯಾನ-೩ ಮಿಷನ್ ಯಶಸ್ಸನ್ನು ಆಚರಿಸಲು ಭಾರತ ಸರ್ಕಾರ ಪ್ರತಿ ವರ್ಷ ಆಗಸ್ಟ್ ೨೩ನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಿಸಿದ್ದು, ಇದರ ಅಂಗವಾಗಿ ರಾಜ್ಯ ವಿಜನ ಮತ್ತು ತಂತ್ರಜನ ಮಂಡಳಿಯು ಬಾಹ್ಯಾಕಾಶ ವಿಜನದ ಕುರಿತು ಆಸಕ್ತಿ ಮೂಡಿಸಲು ಗಗನಯಾತ್ರಿ ಹಾಗೂ ಬಾಹ್ಯಾಕಾಶ ವಿಜನಿಗಳ ಕೊಡುಗೆಗಳ ಬಗ್ಗೆ ವಿಜನ ಚಟುವಟಿಕೆಗಳನ್ನು ಆಯೋಜಿಸಿದೆ ಎಂದವರು ಹೇಳಿದರು.
ಡಿಡಿಪಿಯು ಚಂದ್ರಪ್ಪ ಎಸ್. ಗುಂಡಪಲ್ಲಿ ಮಾತನಾಡಿ, ಚಂದ್ರಯಾನ-೩ ಮಿಷನ್‌ನಲ್ಲಿ ದಕ್ಷಿಣ ದೃವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿರುವುದು ಒಂದು ದೊಡ್ಡ ಸಾಧನೆಯೇ ಸರಿ. ಜಗತ್ತೇ ನಮ್ಮ ದೇಶದತ್ತ ನೋಡುವಂತೆ ಮಾಡಿರುವ ಇಸ್ರೋದ ವಿಜನಿಗಳು ಮತ್ತು ತಂಡಕ್ಕೆ ಅಭಿನಂದನೆಗಳು ಎಂದರು.
ದೇಶೀಯ ವಿದ್ಯಾ ಶಾಲಾ ಸಮಿತಿ ಕಾರ್ಯದರ್ಶಿ ರಾಜಶೇಖರ ಎಸ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಎ.ಈ.ರಾಜಶೇಖರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವಾರ್ತಾ ಇಲಾಖೆಯ ವಾರ್ತಾ ಸಹಾಯಕಿ ಭಾಗ್ಯ ಎಂ.ಟಿ, ಶಿಕ್ಷಕ ಪ್ರತಿನಿಧಿ ಉಮೇಶ್ ಹೆಚ್.ಸಿ, ಜಿ.ಪಂ ಜಿಲ್ಲಾ ಯೋಜನಾ ಸಂಯೋಜಕ ಶಂಕರ ಪಿ. ಇನ್ನಿತರರಿದ್ದರು.