ಹೊಸನಗರದಲ್ಲಿ ಕುಡಿಯುವ ನೀರಿಗೆ ಬರ !

ಹೊಸನಗರ: ಹೆಸರಿಗೆ ಮಾತ್ರ ಮಲೆನಾಡು ಪ್ರದೇಶವಾಗಿದ್ದು ತಾಲ್ಲೂಕಿಗೆ ಮಳೆ ಬಂದು ಒಂದು ತಿಂಗಳಾಗಿದೆ. ಬಾವಿಯ ನೀರು ತಳ ಮಟ್ಟಕ್ಕೆ ತಲುಪಿದೆ ಹೊಸನಗರ ಪಟ್ಟಣ ಪಂಚಾಯತಿಯವರು ನಲ್ಲಿಯ ನೀರು ಕಡಿಮೆಯಾಗುತ್ತದೆ. ಇನ್ನೂ ಒಂದು ವಾರ ಹೊಸನಗರ ತಾಲ್ಲೂಕಿಗೆ ಮಳೆ ಬಾರದಿದ್ದರೆ ಹಳ್ಳಿಯ ಜನರಿಗೆ ಹಳ್ಳ- ಕೊಳ್ಳಗಳಿಂದ ಅಲ್ಪ-ಸ್ವಲ್ಪ ನೀರು ಸಿಗುತ್ತದೆ. ಆದರೆ ಪಟ್ಟಣದ ನಿವಾಸಿಗಳು ನೀರಿನ ಬರ ಎದುರಿಸುವಲ್ಲಿ ಯಾವುದೇ ಅನುಮಾನ ಬೇಡ. ಇಂದಿನಿಂದಲೇ ನಲ್ಲಿಯ ನೀರನ್ನು ಮಿತವಾಗಿ ಬಳಸಿ ಸಂಗ್ರಹಿಸಿದರೆ ಸೂಕ್ತ. ಇಲ್ಲವಾದರೆ ಮಳೆ ಬರುವವರೆಗೆ ನೀರಿನ ಬರ ಎದುರಿಸುವುದು ಗ್ಯಾರಂಟಿ. ಆದಷ್ಟು ಪಟ್ಟಣ ಪಂಚಾಯತಿಯ ಸಾರ್ವಜನಿಕರು ತಮ್ಮ ಸುತ್ತ- ಮುತ್ತಲಿನ ಬಾವಿಗಳನ್ನು ಹುಡುಕಿಕೊಳ್ಳುವುದು ಒಳ್ಳೆಯದು.
ಈ ವರ್ಷ ಶರಾವತಿ ಹಿನ್ನೀರು ಬಹಳ ಬೇಗ ಬತ್ತಿದೆ ಇಷ್ಟು ವರ್ಷಗಳು ಮೇ ತಿಂಗಳಲ್ಲಿ ಶರಾವತಿ ನೀರಿಗೆ ಬರವಾಗುತ್ತಿತ್ತು ಆದರೆ ಈ ವರ್ಷ ಏಪ್ರಿಲ್ ತಿಂಗಳಲ್ಲಿಯೇ ನೀರಿಗೆ ಬರ ಎದುರಾಗಿದೆ. ಶರಾವತಿ ಹಿನ್ನೀರನ್ನು ಸಿಗಂದೂರು ಸೇತುವೆ ಕಟ್ಟಲು ಉಪಯೋಗಿಸುತ್ತಿರುವುದರಿಂದ ನಮ್ಮ ತಾಲ್ಲೂಕಿಗೆ ನೀರು ಅಭಾವ ವಾಗಿದೆ ಎಂದು ಹೇಳಲಾಗುತ್ತಿದೆ. ಸೇತುವೆ ನಿರ್ಮಾಣ ಮಾಡಲು ಶರಾವತಿ ಹಿನ್ನೀರನ ಗೇಟ್ ಓಪನ್ ಮಾಡುತ್ತಿರುವುದರಿಂದಲೇ ಶರಾವತಿ ನೀರು ತಳ ಮಟ್ಟ ತಲುಪಿದೆ ಎಂದು ಹೇಳಲಾಗಿದೆ. ಅಧಿಕಾರಿಗಳ ಹರ ಸಾಹಸ : ಸುಮಾರು ಹದಿನೈದು ದಿನಗಳಿಂದ ಶರಾವತಿ ಹಿನ್ನೀರಿಲ್ಲದೇ ಪಟ್ಟಣ ಪಂಚಾಯತಿಯ ಸಾರ್ವಜನಿಕರಿಗೆ ನಲ್ಲಿ ನೀರನ್ನು ಕೊಡಲು ಪಟ್ಟಣ ಪಂಚಾಯಿತಿ ಅಧಿಕಾರಿಗಳ ವರ್ಗ, ಪಟ್ಟಣ ಪಂಚಾಯತಿ ಪೌರ ನೌಕರ ವರ್ಗ ಹಾಗೂ ಆಡಳಿತ ವರ್ಗ ಹರ ಸಾಹಸ ನಡೆಸುತ್ತಿದ್ದು ಜೆಸಿಬಿ ಯಂತ್ರಗಳ ಮೂಲಕ ಶರಾವತಿಯ ನದಿಯ ಮಧ್ಯ ಭಾಗದಲ್ಲಿ ಹಾಗೂ ಸುತ್ತ-ಮುತ್ತ ಭಾಗದಲ್ಲಿ ನೀರು ಬರುವ ಸ್ಥಳದಲ್ಲಿ ಅಗೆದು ನೀರು ಕೊಡುವ ಕೆಲಸ ನಡೆಯುತ್ತಿದ್ದು ಎಲ್ಲಿಯವರೆಗೆ ಶರಾವತಿ ನದಿಯಲ್ಲಿ ನೀರು ಸಿಗುವವರೆಗೆ ಈ ಕೆಲಸ ನಡೆಸುತ್ತೇವೆ ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಬಾಲಚಂದ್ರಪ್ಪ ಹಾಗೂ ಸಿಬ್ಬಂದಿಗಳು ಹೇಳುತ್ತಿದ್ದು ಹೊಸನಗರ ಪಟ್ಟಣ ಪಂಚಾಯತಿ ಸಾರ್ವಜನಿಕರಿಗೆ ನಲ್ಲಿ ನೀರು ಕೊಡಲು ಹರಸಾಹಸ ಮಾಡುತ್ತಿzರೆ.
ಪಟ್ಟಣದ ಸಾರ್ವಜನಿಕರು ನಲ್ಲಿ ನೀರನ್ನು ನಂಬಿಕೊಳ್ಳದೇ ನೀರಿಗಾಗಿ ತುರ್ತು ವ್ಯವಸ್ಥೆ ಇಂದಿನಿಂದಲೇ ಮಾಡಿಕೊಂಡರೆ ಒಳ್ಳೆಯದು ಇಲ್ಲವಾದರೆ ಮುಂದಿನ ದಿನದಲ್ಲಿ ಕಷ್ಟ ಅನುಭವಿಸುವುದು ನೀವೆ.