ರಾಜ್ಯದಲ್ಲಿ ಗಾಂಜಾ, ಡ್ರಗ್ಸ್ ಅಮಲು ತಪ್ಪಿಸಿ: ಅಧಿವೇಶನದಲ್ಲಿ ಸರ್ಕಾರದ ನಶೆ ಇಳಿಸಿದ ಡಾ| ಸರ್ಜಿ

1

ಬೆಂಗಳೂರು : ರಾಜ್ಯದಲ್ಲಿ ಪೊಲೀಸ್ ಇಲಾಖೆ ಸಕ್ರಿಯವಾಗಿದ್ದರೂ ಕೂಡ ಡ್ರಗ್ಸ್ ವ್ಯಸನಿಗಳ ಸಂಖ್ಯೆ ಹಾಗೂ ಸಾವಿನ ಸಂಖ್ಯೆಯೂ ಹೆಚ್ಚುತ್ತಲೇ ಇದೆ, ಇದನ್ನು ಗೃಹ ಇಲಾಖೆ ಗಂಭೀರವಾಗಿ ತೆಗೆದು ಕೊಂಡು ಅಮಲು ಮುಕ್ತ ಕರ್ನಾಟಕ ವನ್ನಾಗಿ ಮಾಡಬೇಕು ಎಂದು ಗೃಹ ಸಚಿವರಾದ ಜಿ.ಪರಮೇಶ್ವರ್ ಅವರನ್ನು ಶಾಸಕ ಡಾ.ಧನಂಜಯ ಸರ್ಜಿ ಅವರು ಆಗ್ರಹಿಸಿದರು.
ಬೆಂಗಳೂರಿನಲ್ಲಿ ನಡೆಯುತ್ತಿರುವ ೧೫೩ನೇ ವಿಧಾನ ಮಂಡಲ ಅಧಿವೇಶನದಲ್ಲಿ ಇಂದು ಅವರು ಸದನದಲ್ಲಿ ಮಾತನಾಡಿ, ಇಡೀ ಭಾರತದಲ್ಲೇ ನಮ್ಮ ರಾಜ್ಯವೂ ಮಾದಕ ವಸ್ತು ವ್ಯಸನ ಮತ್ತು ಸಾವಿನ ಸಂಖ್ಯೆಯಲ್ಲಿ ೨ನೇ ಸ್ಥಾನದಲ್ಲಿದ್ದು, ಗಾಂಜ, ಡ್ರಗ್ಸ್ ಹಾಗೂ ಅಪೀಮುಗಳ ನಿಯಂತ್ರಣಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ದುಶ್ಚಟಗಳಲ್ಲಿ ಬೀಡಿ, ಸಿಗರೇಟು, ಮನುಷ್ಯನನ್ನು ಬಲಿಪಡೆದರೆ, ಮದ್ಯ ವ್ಯಸನ ಕುಟುಂಬವನ್ನು ಬಲಿ ಪಡೆಯು ತ್ತದೆ, ಡ್ರಗ್ಸ್ ಸಮಾಜವನ್ನು ಬಲಿ ತೆಗೆದುಕೊಳ್ಳುತ್ತದೆ, ಭಾರತದಲ್ಲಿ ೧೬ ಕೋಟಿ ಮದ್ಯವ್ಯಸನಿಗಳಿದ್ದು, ೫.೭ ಕೋಟಿ ಪ್ರಾಬ್ಲಮ್ ಯೂಸರ್ಸ್ ಇದ್ದಾರೆ, ೨.೯ ಕೋಟಿ ಜನ ಡಿಪೆಂಡೆಂಟ್ ಮದ್ಯ ವ್ಯಸನಿಗಳಾಗಿದ್ದು, ಭಾರತದಲ್ಲಿ ಕ್ಯಾನಿಬಿಸ್ ನ್ನು ೩.೧ ಕೋಟಿ ಜನ ಸೇವಿಸಿದರೆ, ೨.೩ ಕೋಟಿ ಜನ ಓಪಿಯಾಡ್ ವ್ಯಸನಿಗಳಿದ್ದಾರೆ, ಈ ಪೈಕಿ ೨೫ರಿಂದ ೨೮ಲಕ್ಷ ಡಿಪೆಂಡೆಂಟ್ ವ್ಯಸನಿಗಳಿದ್ದಾರೆ, ದೇಶದಲ್ಲಿ ೩ ಕೋಟಿಗೂ ಹೆಚ್ಚು ಜನ ಮಾದಕ ವಸ್ತು ವ್ಯಸನಿಗಳಿದ್ದು, ಭಾರತದಲ್ಲಿ ಡ್ರಗ್ಸ್ ಓವರ್ ಡೋಸ್‌ನಿಂದ ೮ ಸಾವಿರ ಜನ ಬಲಿಯಾಗಿದ್ದಾರೆ. ಈ ಪೈಕಿ ೨೦೧೭ರಲ್ಲಿ ಕರ್ನಾಟಕದಲ್ಲಿ ೮೧, ೨೦೧೮ ರಲ್ಲಿ ೯೧ ಜನ, ೨೦೧೯ ರಲ್ಲಿ ೬೭ ಜನ, ಇವುಗಳ ಪ್ರಕಾರ ಡ್ರಗ್ಸ್ ವ್ಯಸನಕ್ಕೆ ಬಲಿಯಾಗಿರುವ ಸಂಖ್ಯೆಯಲ್ಲಿ ರಾಜ್ಯವು ಭಾರತದಲ್ಲಿ ೨ನೇ ಸ್ಥಾನದಲ್ಲಿರುವುದು ನಿಜಕ್ಕೂ ಆತಂಕಕಾರಿಯಾಗಿದೆ, ಈ ನಿಟ್ಟಿನಲ್ಲಿ ನಿಯಂತ್ರಣಕ್ಕೆ ಕ್ರಮ ಯಾವುದು? ಹಾಗೂ ೨೦೨೦ ರಿಂದ ೨೦೨೪ ರವರೆಗೆ ಮಾಹಿತಿಯನ್ನು ನೀಡಬೇಕೆಂದು ಗೃಹ ಸಚಿವರನ್ನು ವಿನಂತಿಸಿಕೊಂಡರು.
ಗೃಹ ಸಚಿವರು, ಪೋಲೀಸ್ ಇಲಾಖೆ ಸಕ್ರಿಯವಾಗಿ ಕೆಲಸ ಮಾಡು ತ್ತಿದೆ ಎಂದು ಉತ್ತರ ನೀಡಿದ್ದಾರೆ, ಆದರೆ ಕಳೆದ ತಿಂಗಳ ೨೭ ರಂದು ಡ್ರಗ್ಸ್ ಸೇವಿಸಿ ಹಣಕ್ಕಾಗಿ ಇಬ್ಬರ ಕೊಲೆ ಹಾಗೂ ಮೇ ೨೨ ರಂದು ರೇವ್ ಪಾರ್ಟಿಯಲ್ಲಿ ೫೦ ಲಕ್ಷ ರೂ ಖರ್ಚು ಮಾಡಿ ೫೦೦ ರೂ. ನೋಟಿನಲ್ಲಿ ಕೆನಬಿಸ್‌ನ್ನು ಇಂಜೆಕ್ಟ್ ಮಾಡಿ ಡ್ರಗ್ಸ್ ಸೇವನೆ ಮಾಡಿದ ಕುರಿತು ಪತ್ರಿಕಾ ವರದಿಗಳ ದಾಖಲೆಗಳನ್ನು ಪ್ರದರ್ಶಿಸಿ ಪೊಲೀಸ್ ಇಲಾಖೆ ವೈಫಲ್ಯವನ್ನು ಪ್ರಶ್ನಿಸಿದರು.
ಡಾರ್ಕ್ ವೆಬ್‌ಸೈಟ್ ಮೂಲಕ ಸಂಪರ್ಕ ಸಾಧಿಸಿ ಕೊರಿಯರ್ ಮೂಲಕ ಡ್ರಗ್ಸ್ ಪಡೆದುಕೊಳ್ಳುತ್ತಿರು ವುದು ಇದು ನಿಜಕ್ಕೂ ಆಶ್ಚರ್ಯ ಮತ್ತು ಆತಂಕಕಾರಿ ಬೆಳವಣಿಗೆ, ಈ ಡಾರ್ಕ್ ವೆಬ್ ಸೈಟ್‌ನಲ್ಲಿ ಯಾರು ಆರ್ಡರ್ ಮಾಡಿದ್ದಾರೆ? ಎಲ್ಲಿಂದ ಬಂತು ? ಎಂಬ ಮಾಹಿತಿ ಎಲ್ಲಿಯೂ ದೊರಕು ವುದಿಲ್ಲ, ಕೊರಿಯರ್ ಮೂಲಕ ಮನೆ ಬಾಗಿಲಿಗೆ ಬರುತ್ತಿದೆ, ಡೆಲಿವರಿ ಸಮಯದಲ್ಲಿ ಸಿಕ್ಕಿ ಬೀಳುತ್ತಾರೆ, ಈ ಬಗ್ಗೆಯೂ ಸಚಿವರು ಕ್ರಮ ಕೈಗೊಳ್ಳಬೇಕು ಹಾಗೂ ಪ್ಲಾಸ್ಟಿಕ್ ಬಳಕೆ ಮಾಡಬೇಡಿ ಎನ್ನುತ್ತಾ ಉತ್ಪಾದನೆ ನಿಲ್ಲುತ್ತಿಲ್ಲ, ಉತ್ಪಾದನೆ ನಿಲ್ಲಿಸದೇ ಅದನ್ನು ತಡೆಯಲು ಸಾಧ್ಯವಿಲ್ಲ, ಹಾಗೆಯೇ ಡ್ರಗ್ಸ್ ನ್ನು ಉತ್ಪಾದನೆಯಲ್ಲೇ ಚಿವುಟಿ ಹಾಕಬೇಕಿದೆ, ರಾಜ್ಯದ ಪಿಎಚ್ ಸಿ ಮತ್ತು ಸಿಎಚ್‌ಸಿ ಸೆಂಟರ್‌ಗಳಲ್ಲಿ ಗಾಂಜ ಟೆಸ್ಟಿಂಗ್ ಕಿಟ್ ಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಹಾಗೆಯೇ ಮಹಿಳೆಯರ ಮಾದಕ ವಸ್ತು ಪುನರ್ವಸತಿ ಕೇಂದ್ರಗಳಿಲ್ಲ, ಆ ಕೇಂದ್ರಗಳು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂಬುದರ ಬಗ್ಗೆ ಅನುಮಾನ ಬರುತ್ತಿದೆ, ಅಲ್ಲದೇ ಕಾಲೇಜು ವಿದ್ಯಾರ್ಥಿಗಳು ಮಾದಕ ವಸ್ತು ಸೇವಿಸಿ ತೂರಾಡುವಂತ ಘಟನೆಗಳು, ವೀಡಿಯೋಗಳು ಸಾಮಾಜಿಕ ಜಲತಾಣದಲ್ಲಿ ವೈರಲ್ ಆಗುತ್ತಿವೆ, ಹಾಗೂ ಕೇಂದ್ರ ಸರ್ಕಾರದ ನಶಾ ಮುಕ್ತ ಭಾರತ ಅಭಿಯಾನದಡಿ ರಾಜ್ಯದಲ್ಲಿ ಮಾದಕ ವಸ್ತು ವ್ಯಸನ ಮುಕ್ತ ಕೇಂದ್ರಗಳನ್ನು ಮಾಡಬೇಕು, ಇದರಡಿಯಲ್ಲಿ ಸುಮಾರು ೮ ಸಾವಿರ ಮಾಸ್ಟರ್ ಸ್ವಯಂ ಸೇವಕರು ಕಾರ್ಯ ನಿರ್ವಹಿಸುತ್ತಿದ್ದಾರೆ, ದೇಶದ ೨೭೨ ಜಿಲ್ಲೆಗಳಲ್ಲಿ ಈ ಅಭಿಯಾನ ನಡೆಯುತ್ತಿದೆ, ವಿಶ್ವ ವಿದ್ಯಾಲಯಗಳು, ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿ ಗಳಿಗೆ ಅರಿವು ಮೂಡಿಸಲಾಗುತ್ತಿದೆ, ನಮ್ಮ ರಾಜ್ಯದಲ್ಲಿಯೂ ಇದು ಶುರು ವಾಗಬೇಕು ಎಂದು ಆಗ್ರಹಿಸಿದರು.
ಗೃಹ ಸಚಿವ ಜಿ.ಪರಮೇಶ್ವರ್ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, ಮಾದಕ ವ್ಯಸನ ಇಡೀ ದೇಶದಲ್ಲಿ ಇದೆ, ನಮ್ಮ ರಾಜ್ಯದಲ್ಲೂ ಇದೆ, ರಾಜ್ಯದಲ್ಲಿ ನಮ್ಮ ಸರ್ಕಾರ ಬಂದ ಮೇಲೆ ಮಾದಕ ವಸ್ತು ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳ ಲಾಗುತ್ತಿದೆ, ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕರ್ನಾಟಕವನ್ನು ಡ್ರಗ್ಸ್ ಮುಕ್ತ ಕರ್ನಾಟಕ ಮಾಡುವು ದಾಗಿ ಘೋಷಣೆ ಮಾಡಿದ್ದರು. ಈಗಾಗಲೇ ೨೬೮ ಮಾದಕ ವಸ್ತು ಮುಕ್ತ ಸೆಂಟರ್ ತೆರೆಯಲಾಗಿದೆ, ಅದರಲ್ಲೇ ಮಹಿಳೆಯರಿಗೂ ವ್ಯವಸ್ಥೆ ಮಾಡಲಾಗಿದೆ, ಜೊತೆಗೆ ಎನ್ ಜಿಒ ಗಳು ಕೈ ಜೋಡಿಸಿವೆ ಎಂದರು.
ಅಲ್ಲದೇ ಅಂಚೆ ಅಥವಾ ಕೊರಿಯರ್ ಮೂಲಕ ರವಾನೆ ಆಗುವಂತ ಡ್ರಗ್ಸ್ ಬಗ್ಗೆ ಗೃಹ ಇಲಾಖೆ ಕಣ್ಣಿಟ್ಟಿದೆ, ನಿರ್ಲಕ್ಯ ಮಾಡಿಲ್ಲ, ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು.
ಪ್ರತಿ ವರ್ಷ ೧೦ ಟನ್ ಗಾಂಜ ಸುಟ್ಟು ಹಾಕಲಾಗುತ್ತಿದೆ, ೨೫೦ ರಿಂದ ೪೦೦ ಸಿಂಥೆಟಿಕ್ ಎಂಡಿಎಂಎ ಡ್ರಗಸ್ ಸುಡಲಾಗಿದೆ, ೧೫೦ ಕೋಟಿ ರೂ .ಮಲ್ಯದ ಮಾದಕ ವಸ್ತು ಸುಟ್ಟು ಹಾಕಲಾಗಿದೆ ಎಂದು ಉತ್ತರಿಸಿದರು.