ಇಡಿ ದಾಳಿ; ಕೇಂದ್ರ ಸರ್ಕಾರಕ್ಕೆ ಚಟವಾಗಿ ಪರಿಣಮಿಸಿದೆ: ಕಿಡಿ ಕಾರಿದ ಸಚಿವ ಮಧು

mahdu

ಶಿವಮೊಗ್ಗ: ಕೇಂದ್ರ ಸರ್ಕಾರಕ್ಕೆ ಇಡಿ ದಾಳಿ ನಡೆಸುವುದು ಒಂದು ಚಟವಾಗಿ ಪರಿಣಮಿಸಿದೆ ಎಂದು ಜಿ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಕಿಡಿಕಾರಿದರು.
ಮೂಡ ಹಗರಣದ ವಿಚಾರ ದಲ್ಲಿ ಬಿಜೆಪಿಯವರು ಹೋರಾಟ ಮಾಡಿದರೆ ಮಾಡಿಕೊಳ್ಳಲಿ ಆದರೆ ಕಾನೂನಿನ ದುರುಪಯೋಗವಾಗ ಬಾರದು. ಇಡಿ ದಾಳಿಯನ್ನು ಎರಡು ರೀತಿಯಲ್ಲಿ ನೋಡಬೇಕು. ಒಂದು ಕಾನೂನು ರೀತಿಯಲ್ಲಿ ಆದರೆ ಸರಿ, ಆದರೆ ಬೇಕೆಂದೇ ದಾಳಿ ನಡೆಸುವುದು ವಿರೋಧ ಪಕ್ಷದವರನ್ನು ಹೆದುರಿಸುವುದಕ್ಕಾಗಿ ಈ ದಾಳಿ ನಡೆಸಿದರೆ ಇದು ಕಾನೂನಿನ ದುರುಪಯೋಗ ಕೇಂದ್ರ ಸರ್ಕರಕ್ಕೆ ದಾಳಿ ನಡೆಸಿ ಹೆದರಿಸು ವುದು ಒಂದು ಚಟವಾಗಿದೆ. ಆದರೆ ಈ ಬಾರಿ ಕೇಂದ್ರದಲ್ಲಿ ಬಿಜೆಪಿಗೆ ಬಹುಮತ ಇಲ್ಲದ ಕಾರಣ ಮೊದಲಿನ ಹಾಗೆ ದಾಳಿ ನಡೆಸುವುದು ಸ್ವಲ್ಪ ಕಷ್ಟವಾಗಬಹುದು ಎಂದರು.
ಅಧಿಕಾರಿಗಳ ವರ್ಗಾವಣೆ ದಂಧೆ ಇದೆ ಎಂದು ಬಸವರಾಯ ರೆಡ್ಡಿ ಹೇಳಿzರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಹಾಗೆ ಹೇಳಿಲ್ಲ, ಅವರು ಮಾತನಾಡುವಾಗ ನಾನು ಪಕ್ಕದ ಇz. ದಂಧೆ ನಡೆದರೆ ನಿಲ್ಲಬೇಕು, ವರ್ಗಾವಣೆ ದಂಧೆವಾಗಬಾರದು ಎಂದಿzರೆ ಎಂದು ಸಮರ್ಥನೆ ಮಾಡಿಕೊಂಡರು.