ಮೋಕ್ಷವಾಹಿನಿ ವಾಹನ ಸದ್ಭಳಕೆಗೆ ಮನವಿ…

pm

ಶಿವಮೊಗ್ಗ : ಶಿವಮೊಗ್ಗದ ಬಾಹುಸಾರ ಕ್ಷತ್ರಿಯ ಮಹಾಜನ ಸಮಾಜದಿಂದ ಶಿವಮೊಗ್ಗದ ನಾಗರಿಕರ ಅನುಕೂಲ ಕ್ಕಾಗಿ ಮೋಕ್ಷವಾಹಿನಿ ವಾಹನವನ್ನು ಇತ್ತೀಚೆಗೆ ಲೋಕಾರ್ಪಣೆ ಮಾಡ ಲಾಗಿದ್ದು, ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳು ವಂತೆ ಸಮಾಜದ ಅಧ್ಯಕ್ಷ ಟಿ.ವಿ. ಗಜೇಂದ್ರ ನಾಥ್ ಮನವಿ ಮಾಡಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೋಕ್ಷವಾಹಿನಿಯನ್ನು ನಗರದ ಆದಿಶಕ್ತಿ ಕಾರ್‍ಸ್ ಮಾಲೀಕರಾದ ನಾರಾಯಣರಾವ್ ತಾತುಸ್ಕರ್ ಅವರು ಸಾರ್ವಜನಿಕರ ಅನುಕೂಲ ಕ್ಕಾಗಿ ಬಾಹುಸಾರ ಕ್ಷತ್ರೀಯ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಸದರಿ ಮೋಕ್ಷವಾಹಿನಿ ನಗರದ ರೋಟರಿ ಚಿತಾಗಾರದಲ್ಲಿ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದ್ದು ಹಾಗೂ ರೋಟರಿ ಚಿತಾಗಾರದ ಲ್ಲಿಯೇ ಮೋಕ್ಷ ವಾಹಿನಿ ಕಾಯ್ದಿರಿ ಸಲು ವ್ಯವಸ್ಥೆ ಮಾಡಲಾಗಿದೆ. ನಗರದ ೫೦ ಕಿ.ಮೀ. ಒಳಗೆ ಬಳಸ ಬಹುದಾಗಿದೆ. ೬೦೦ ರೂ. ಶುಲ್ಕ ನಿಗದಿಪಡಿಸಲಾಗಿದೆ ಎಂದರು.
ಬಾಹುಸಾರ ಕ್ಷತ್ರಿಯ ಸಮಾಜ ಚಿತಾಗಾರ ಆವರಣದಲ್ಲಿ ಸಮಾಜದ ಯುವ ಘಟಕವು ಬೋರ್ ವೆಲ್ ಅಳವಡಿಸಿದ್ದಲ್ಲದೇ, ಹರಿಶ್ಚಂದ್ರ ಹಾಗೂ ಶಿವನ ಪ್ರತಿಮೆ ನಿರ್ಮಿಸಲಾಗಿದೆ. ಅದೇ ರೀತಿ ಚಿತಾಗಾರದ ಅಭಿವೃದ್ಧಿಗೂ ಸಹ ಗಮನ ನೀಡಲಾಗುತ್ತಿದೆ ಎಂದರು.
ಮಾಹಿತಿಗಾಗಿ ೯೪೪೮೧ ೩೯೪೮೫, ೭೨೦೪೫ ೬೩೦೭೪ ಅಥವಾ ೬೩೬೧೯ ೫೭೨೭೧ ರಲ್ಲಿ ಸಂಪರ್ಕಿಸಿ ಎಂದರು.
ಪ್ರಮುಖರಾದ ಶಿರೀಶ್, ಸತ್ಯನಾರಾ ಯಣ, ಗೋಪಾಲ, ನವೀನ್ ಸಾಕ್ರೆ, ಸಂತೋಷ್ ಸಾಕ್ರೆ, ಮೋಹನ್ ಇದ್ದರು.