ಇತರೆ ಜನಾಂಗದವರ ಶೈಕ್ಷಣಿಕ ಪ್ರಗತಿ ನೋಡಿ ಜಾಗೃತರಾಗಿ…
ಶಿಕಾರಿಪುರ : ತಾಲೂಕಿನ ಬೆಂಡೆಕಟ್ಟೆ ತಾಂಡಾ ದಲ್ಲಿನ ಬಂಜರ ನೌಕರರ ಸೌಹಾರ್ದ ಸಹಕಾರಿ ಸಂಘದ ೬ನೇ ವರ್ಷದ ವಾರ್ಷಿಕ ಮಹಾಸಭೆ ಪಟ್ಟಣದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.
ಸಾಲೂರು ಮಠದ ಸೈನಾ ಭಗತ್ ಮಹಾರಾಜ್ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಜನಾಂಗದಲ್ಲಿ ಏಕತೆ, ಒಗ್ಗಟ್ಟಿನ ಕೊರತೆ ಇದ್ದು, ಸಮಾಜದ ಪ್ರತಿಯೊಬ್ಬರೂ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿದೆ. ಇತರೆ ಜನಾಂಗದವರು ಶೈಕ್ಷಣಿಕ ವಾಗಿ ಪ್ರಗತಿ ಹೊಂದಿರುವುದನ್ನು ನೋಡಿ ಸಮುದಾಯದ ಪ್ರತಿಯೊ ಬ್ಬರೂ ಜಾಗೃತರಾಗಬೇಕು ಎಂದ ಅವರು, ನೌಕರರು ಸಮಾಜದ ಹಿತಾಸಕ್ತಿಯನ್ನು ಅರಿತು ತೊಡಕು ಗಳನ್ನು ತಿದ್ದಿ ಸರಿಪಡಿಸುವ ಜವಾ ಬ್ದಾರಿ ನಿರ್ವಹಿಸುವಂತೆ ಕರೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಸ್ಥಾಪಕ ಅಧ್ಯಕ್ಷ ಪರಮೇಶ್ ನಾಯ್ಕ ಅವರು ಮಾತನಾಡಿ, ಸೊಸೈಟಿಯಲ್ಲಿ ಎಫ್ಡಿ, ಆರ್ಡಿ, ಪಿಗ್ಮಿ ಹಾಗೂ ಬೇಟಿ, ಬೇಟಾ ಪಡಾವೋ ಘರ್ ಬಡಾವೋ ಈ ರೀತಿಯ ಹಲವು ಯೋಜನೆಗಳು ಇವೆ. ಈ ಯೋಜನೆಯಲ್ಲಿ ಆರ್ಥಿಕ ವಹಿವಾಟು ನಡೆಸಿ ತಾಲೂಕಿನಲ್ಲಿ ಸಂಘವನ್ನು ಹೆಮ್ಮರವಾಗಿ ಬೆಳೆ ಸೋಣ. ಸಂಘದಿಂದ ಮುಂದಿನ ದಿನಗಳಲ್ಲಿ ಷೇರುದಾರರಿಗೆ ರೂ.೨ ಲಕ್ಷದವರೆಗೆ ಸಾಲ ಸೌಲಭ್ಯ ನೀಡಲಾಗುವುದು ಎಂದರು.
ಉಪನ್ಯಾಸಕ ಡಾ.ಎಚ್ ಓಂಕಾರ್ ನಾಯ್ಕ್ ಮಾತನಾಡಿ, ತಾಲೂಕಿನಲ್ಲಿ ಬಂಜರ ಜನಾಂಗ ಜನಸಂಖ್ಯೆಯಲ್ಲಿ ದೊಡ್ಡದಾಗಿದ್ದು ಜನಾಂಗದ ನೌಕರರ ಸಹಾಯ ದಿಂದ ನೌಕರರ ಸಂಘ ಪ್ರಾರಂಭಿಸಿ ೬ವರ್ಷ ಕಳೆದಿದೆ. ೨೦೨೩-೨೪ನೇ ಸಾಲಿನಲ್ಲಿ ಅಂದಾಜು ರೂ.೮೦ ಲಕ್ಷ ಆರ್ಥಿಕ ವಹಿವಾಟು ನಡೆಸಿ ಜನಾಂಗದ ಗೌರವವನ್ನು ಹೆಚ್ಚಿಸ ಲಾಗಿದೆ. ನಮ್ಮಿಂದ ಸಂಘ, ಸಂಘ ದಿಂದ ನಾವು ಈ ಸಹಕಾರಿ ತತ್ವದಡಿ ನಾವೆಲ್ಲರೂ ಸಂಘದಲ್ಲಿ ಬಂಡವಾಳ ತೊಡಗಿಸಿ ಮುಂದಿನ ದಿನಗಳಲ್ಲಿ ಅತ್ಯುತ್ತಮ ಸಾಧನೆ ಮೂಲಕ ಸಂಘ ಗುರುತಿಸಿಕೊಳ್ಳುವಂತೆ ಆಗಲಿ ಎಂದರಲ್ಲದೇ, ಆಡಳಿತ ಮಂಡಳಿ ಸದಸ್ಯರು ನಿಷ್ಠೆ ಪ್ರಾಮಾಣಿಕತೆ ವಿಶ್ವಾಸದಿಂದ ಕರ್ತವ್ಯ ನಿರ್ವಹಿಸಿ ದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು.
ಉಪನ್ಯಾಸಕ ಡಾ.ವಸಂತ ನಾಯ್ಕ ಮಾತನಾಡಿ, ಶಿಕ್ಷಣ ಸರ್ವರ ಸ್ವತ್ತು. ಶಿಕ್ಷಣದಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಪರಿಶ್ರಮದಿಂದ ಅಭ್ಯಾಸ ಮಾಡಿ ಯುವಪೀಳಿಗೆ ಉನ್ನತ ಸ್ಥಾನವನ್ನು ಪಡೆಯಬೇಕು. ಜನಾಂಗದ ಅಭಿವೃದ್ಧಿ ಯುವಪೀಳಿಗೆಯಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಪ್ರಾಂಶುಪಾಲ ಠಾಕ್ರ್ಯಾನಾಯ್ಕ ಮಾತನಾಡಿ, ದೀಪಾವಳಿ ಹಬ್ಬದಲ್ಲಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವುದರ ಮೂಲಕ ಸಣ್ಣ ಪ್ರಮಾಣದಲ್ಲಿ ಆರಂಭವಾದ ಸಂಘ ನಂತರದಲ್ಲಿ ತಾಲೂಕಿನ ನೌಕರರನ್ನು ಸೇರಿಸಿಕೊಂಡು ಇದೀಗ ಅಂದಾಜು ೬೦ ಜನರಿಗೆ ಆರ್ಥಿಕ ಸೌಲಭ್ಯವನ್ನು ನೀಡಿ ಎಸ್ಎಸ್ಎಲ್ಸಿ, ಪಿಯುಸಿ ಮಕ್ಕಳಿಗೆ ಅವರ ಪ್ರತಿಭೆಯನ್ನು ಗುರುತಿಸಿ ಸನ್ಮಾನಿಸುವುದರ ಜೊತೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಸಾಧನೆಗೈದ ಜನಾಂಗದ ನೌಕರರನ್ನು ಗುರುತಿಸಿ ಗೌರವಿಸುವಂತಹ ಕೆಲಸ ಮಾಡುತ್ತಿzರೆ ಎಂದು ಪ್ರಶಂಶಿಸಿದರು.
ಈ ಸಂದರ್ಭದಲ್ಲಿ ಹಿಮಾಲಯ ಪರ್ವತ ಶಿಖರ ಏರಿದ ಹೊನ್ನಾಳಿ ತಾಲೂಕಿನ ಚಿಕ್ಕಬಾಸೂರು ತಾಂಡಾದ ವೀರ ವಿಕ್ರಂ, ದೇಶ ಸೇವೆಯೇ ಈಶ ಸೇವೆ ಎಂದು ದೇಶದ ಗಡಿ ರಕ್ಷಣೆ ಮೂಲಕ ನಿವೃತ್ತರಾದ ತಾಲೂಕಿನ ಎಳನೀರುಕೊಪ್ಪ ತಾಂಡಾದ ವೀರಯೋಧ ಮಂಜನಾಯ್ಕ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ವಯೋ ನಿವೃತ್ತಿಯಾದ ಹುಣೇಂದ್ರ ನಾಯ್ಕ್ ಅವರನ್ನು ಸನ್ಮಾನಿಸ ಲಾಯಿತು. ಸಂಘದ ಲೀಲಾ ಬಾಯಿ ಲಮಾಣಿ, ಡಾ ರಾಜು ನಾಯ್ಕ, ಎಸ್. ರಾಮಚಂದ್ರಪ್ಪ ಸಹಿತ ಹಲವರು ಹಾಜರಿದ್ದರು. ಲಕ್ಷ್ಮಿ ಬಾಯಿ ಪ್ರಾರ್ಥಿಸಿ, ನಾಗರಾಜ್ ನಾಯ್ಕ್ ಸ್ವಾಗತಿಸಿ, ಸುರೇಶ್ ನಿರೂಪಿಸಿದರು.