ಪ್ರತಿಭಟನಾನಿರತ ವಿಧಾನ ಪರಿಷತ್ ಮಾಜಿ ಸದಸ್ಯ ಭಾನುಪ್ರಕಾಶ್ಹಠಾತ್ ಹೃದಯಾಘಾತದಿಂದ ನಿಧನ
ಶಿವಮೊಗ್ಗ : ಮಾಜಿ ವಿಧಾನಪರಿಷತ್ ಸದಸ್ಯ ಭಾನುಪ್ರಕಾಶ್ (೬೮) ಇಂದು ಮಧ್ಯಾಹ್ನ ಹೃದಯಾಘಾತ ದಿಂದ ನಿಧನರಾದರು.
ಬೆಲೆ ಏರಿಕೆ ವಿರುದ್ಧ ನಗರ ಬಿಜೆಪಿ ಗೋಪಿ ವೃತ್ತದಲ್ಲಿ ಹಮ್ಮಿ ಕೊಂಡಿದ್ದ ಪ್ರತಿ ಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಭಾನುಪ್ರಕಾಶ್ ಸಭೆಯ ಬಳಿಕ ಸ್ಥಳದ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ಅವರು ವಂದನಾರ್ಪಣೆ ಮುಗಿದ ನಂತರ ಸುಸ್ತಾ ಗುತ್ತಿದೆ ಎಂದು ಹೇಳಿ ಕಾರಿನಲ್ಲಿ ಕುಳಿತು ಬಿಜೆಪಿ ಜಿ ಕಾರ್ಯಲಯಕ್ಕೆ ಹೋಗು ವಂತೆ ಹೇಳಿದ್ದರು. ಆದರೆ, ಆಗಲೇ ತೀವ್ರ ಹೃದಯಾಘಾತದಿಂದ ಕಾರಿನ ಕುಸಿದು ಬಿದ್ದ ಅವರನ್ನು ಕೂಡಲೇ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟೊತ್ತಿ ಗಾಗಲೇ ಅವರ ಪ್ರಾಣಪಕ್ಷಿ ಹಾರಿತ್ತು.
ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಆಸ್ಪತ್ರೆಯ ಮುಂಭಾಗ ಬಿಜೆಪಿ ಕಾರ್ಯ ಕರ್ತರು ಅಧಿಕ ಸಂಖ್ಯೆಯಲ್ಲಿ ಜಮಾಯಿಸಿ ದ್ದರು. ಅವರ ಸ್ವಗ್ರಾಮವಾದ ಮತ್ತೂರಿಗೆ ಅವರ ಪಾರ್ಥಿವ ಶರೀರವನ್ನು ತೆಗೆದು ಕೊಂಡು ಹೋಗಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು ಸಂಜೆ ೬ಗಂಟೆಗೆ ಸುಮಾರಿಗೆ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಸುಮಾರು ೩೫ ವರ್ಷಗಳಿಗೂ ಬಿಜೆಪಿ ಯಲ್ಲಿ ಸಕ್ರಿಯರಾಗಿದ್ದ ಅವರು, ೧೯೬೯ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿ, ೧೯೭೫ ತುರ್ತು ಪರಿಸ್ಥಿತಿಯಲ್ಲಿ ಜೈಲ್ವಾಸ ಅನು ಭವಿಸಿ, ೧೯೭೭-೧೯೮೩ ಆರ್ಎಸ್ಎಸ್ ನಲ್ಲಿ ವಿವಿಧ ಜವಾಬ್ಧಾರಿ ನಿರ್ವಹಣೆ, ೧೯೮೩- ೧೯೮೭ ರಾಜ್ಯಕಿಸಾನ್ ಸಂಘದ ಪ್ರಧಾನ ಕಾರ್ಯದರ್ಶಿ, ೧೯೮೭-೧೯೯೩ ಬಿಜೆಪಿ ಜಿ ಪ್ರಧಾನ ಕಾರ್ಯದರ್ಶಿ ಯಾಗಿ, ೧೯೯೪-೨೦೦೦ ಬಿಜೆಪಿ ಜಿಧ್ಯಕ್ಷ ರಾಗಿ, ೨೦೦೦-೨೦೦೫ ಜಿಪಂ ಸದಸ್ಯರಾಗಿ ಆಯ್ಕೆಯಾಗಿ, ೨೦೦೩ರಲ್ಲಿ ಮಾಜಿ ಸಿಎಂ ಎಸ್. ಬಂಗಾರಪ್ಪನವರ ವಿರುದ್ದ ಬಿಜೆಪಿ ಯಿಂದ ಶಿವಮೆಗ್ಗ ಲೋಕಸಭಾ ಚುನಾವಣೆಗೆ ಸ್ಪರ್ಧೆ, ೨೦೦೩-೨೦೦೬ ಬಿಜೆಪಿ ಜಿಧ್ಯಕ್ಷರಾಗಿ ಪುನರ್ಆಯ್ಕೆ ಗೊಂಡು, ೨೦೦೭-೨೦೧೦ ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ನಂತರದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ವಿವಿಧ ಪ್ರಕೋಷ್ಠಗಳ ರಾಜ್ಯ ಸಂಯೋಜಕರಾಗಿ, ಪಕ್ಷದ ಸಂಘಟನೆಯಲ್ಲಿ ಮಲೆನಾಡು ಕ್ಲಸ್ಟರ್ ವಿಭಾಗದ ಪ್ರಭಾರಿ ಯಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದ ಇವರು ಪತ್ನಿ, ಮೂವರು ಪುತ್ರರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದ್ಜಾರೆ.
ಸಂತಾಪ: ಆರ್ಎಸ್ಎಸ್ ಕಟ್ಟಾಳು ಹಾಗೂ ಬಿಜೆಪಿ ಮಾರ್ಗದರ್ಶಕರಾಗಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ. ಭಾನುಪ್ರಕಾಶ್ ಅವರ ನಿಧಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಜಿ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಮಾಜಿ ಸಿಎಂ ಯಡಿಯೂರಪ್ಪ, ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್. ಶಂಕರ ಮೂರ್ತಿ, ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಸಚಿವರಾದ ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ, ಆರಗeನೇಂದ್ರ, ಶಾಸಕ ಎಸ್.ಎನ್. ಚನ್ನಬಸಪ್ಪ (ಚೆನ್ನಿ), ವಿಧಾನ ಪರಿಷತ್ ಸದಸ್ಯರಾದ ಭಾರತಿಶೆಟ್ಟಿ, ಎಸ್. ರುದ್ರೇಗೌಡ, ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಮಾಜಿ ಶಾಸಕರಾದ ಸ್ವಾಮಿರಾವ್, ಕೆ.ಜಿ. ಕುಮಾರ ಸ್ವಾಮಿ, ಕೆ.ಬಿ.ಅಶೋಕನಾಯ್ಕ್, ರಘುಪತಿ ಭಟ್, ಕೆ.ಬಿ. ಪ್ರಸನ್ನಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಳ್, ಜಿಲ್ಲಾ ಕಾರ್ಯಾಧ್ಯಕ್ಷ ದಾದಾಪೀರ್, ರಾಮಕೃಷ್ಣ, ಪ್ರಮುಖರಾದ ಆರ್.ಕೆ.ಸಿದ್ದರಾಮಣ್ಣ, ರಾಕೇಶ್ ಡಿಸೋಜ, ಎಸ್.ಎಲ್. ನಿಖಿಲ್, ಎ.ಪಿ.ಪದ್ಮನಾಭಭಟ್, ಗಿರೀಶ್ ಪಟೇಲ್, ಎ.ಎನ್. ನಟರಾಜ್, ಎಸ್. ದತ್ತಾತ್ರಿ, ವಿನ್ಸೆಂಟ್ ರೋಡ್ರಿಗಸ್, ಸಿ.ಹೆಚ್.ಮಾಲತೇಶ್, ಎಂ.ಬಿ. ಹರಿಕೃಷ್ಣ, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ನಗರಸಭೆ ಮಾಜಿ ಅಧ್ಯಕ್ಷ ಎಂ. ಶಂಕರ್ ಸೇರಿದಂತೆ ಅನೇತ ಗಣ್ಯಾತಿಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.