19ನೇ ರಾಜ್ಯ ಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ..
ಶಿವಮೊಗ್ಗ : ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮತ್ತು ಜಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಜೂ.೧೧ರ ನಾಳೆ (ಮಂಗಳವಾರ) ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ೧೯ನೇ ರಾಜ್ಯಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಲಾಗಿದೆ ಎಂದು ಕಸಾಸಾಂ ವೇದಿಕೆ ಅಧ್ಯಕ್ಷ ಡಿ. ಮಂಜುನಾಥ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಅಂದು ಬೆಳಗ್ಗೆ ೧೦ ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಗಳಾದ ಪೂಜ್ಯ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ಸಾನಿಧ್ಯ ವಹಿಸಲಿದ್ದು, ಸಾಗರದ ಕರೂರು ಗ್ರಾಮದವರಾದ ಮೂಡಬಿದರೆಯ ವೈಬ್ರೆಂಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಮಾನ್ವಿ ಕರೂರು ಅವರ ಸರ್ವಾ ಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದೆ. ಉಡುಪಿ ಜಿ ಗಂಗೊಳ್ಳಿಯ ಸರಸ್ವತಿ ವಿದ್ಯಾ ಲಯದ ಪಿಯು ವಿದ್ಯಾರ್ಥಿನಿ ಪವಿತ್ರಾ ಎನ್. ದೇವಾಡಿಗ ಸಮ್ಮೇಳನ ಉದ್ಘಾಟಿಸಲಿದ್ದು, ಕಸಾಸಾಂ ವೇದಿಕೆ ಅಧ್ಯಕ್ಷ ಡಿ. ಮಂಜುನಾಥ ಆಶಯ ಮಾತುಗಳನ್ನಾಡಲಿzರೆ ಎಂದರು.
ಇದೇ ಸಂದರ್ಭದಲ್ಲಿ ಲೇಖಕಿ ಭವ್ಯ ಸುಧಾಕರ ಜಗಮನಿ ಬರೆದಿರುವ ಪುಟಾಣಿ ಸಂಜೆ ಪುಸ್ತಕ ಲೋಕಾರ್ಪಣೆಯಾಗಲಿದೆ. ಶ್ರೀ ರಾಮಕೃಷ್ಣ ವಿದ್ಯಾ ಸಂಸ್ಥೆ ಕಾರ್‍ಯದರ್ಶಿ ಶೋಭಾ ವೆಂಕಟರಮಣ, ಅನನ್ಯ ಶಿಕ್ಷಣ ಸಂಸ್ಥೆ ಸಂಸ್ಥಾಪಕರಾದ ಅನನ್ಯ ಗಿರೀಶ್, ಆಕ್ಸ್‌ಫರ್ಡ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಿ.ಆರ್. ಶೀನಿವಾಸ್, ಬಿ.ಜಿ.ಎಸ್. ಶಿಕ್ಷಣ ಟ್ರಸ್ಟ್ ನಿರ್ದೇಶಕ ಡಿ.ವಿ. ಸತೀಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿzರೆ ಎಂದರು.
ಮೊದಲ ವಿಚಾರಗೋಷ್ಠಿ ಯಲ್ಲಿ ಆದಿಚುಂಚನಗಿರಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಮಧು ಸೂದನ್ ಜಿ.ಕೆ ಅಧ್ಯಕ್ಷತೆ ವಹಿಸಲಿದ್ದು, ನಂತರ ನಡೆಯುವ ಕವಿಗೋಷ್ಠಿ ದಾವಣಗೆರೆ ಜಿಯ ಹೊನ್ನಾಳಿಯ ವಿದ್ಯಾರ್ಥಿ ದಿಗಂತ್ ಪ್ರಸಾದ್ ಅಧ್ಯಕ್ಷತೆ ವಹಿಸಲಿzರೆ. ಮಕ್ಕಳು ಕಥೆ ಹೇಳುತ್ತಾರೆ ಗೋಷ್ಠಿಯಲ್ಲಿ ಸಾಗರದ ಅಂಕಿತಾ ಸಾಗರ ಅಧ್ಯಕ್ಷತೆ ವಹಿಸಲಿದ್ದು, ಪಾಂಡವಪುರದ ಅಪೇಕ್ಷಾ ಅಧ್ಯಕ್ಷತೆ ಯಲ್ಲಿ ಪ್ರಬಂಧ ಗೋಷ್ಠಿ ನಡೆಯಲಿದೆ. ಶಿಗ್ಗಾವಂನ ಅನುಷಾ ಕೆ. ಹಿರೇಮಠ ಸಮಾರೋಪ ನುಡಿಗಳನ್ನಾಡಲಿzರೆ ಎಂದರು.
ರಾಜ್ಯದ ವಿವಿಧ ಜಿಗಳ ಸುಮಾರು ೪೦೦ಕ್ಕೂ ಹೆಚ್ಚು ಪ್ರತಿಭಾವಂತ ಸಾಹಿತ್ಯಾಸಕ್ತ ವಿದ್ಯಾರ್ಥಿಗಳು ವಿವಿಧ ಗೋಷ್ಟಿಗಳಲ್ಲಿ ಭಾಗವಹಿಸಲಿದ್ದು, ವಿವಿಧ ಶಾಲೆಗಳ ಒಂದು ಸಾವಿರ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಲಿzರೆ ಎಂದು ಡಿ. ಮಂಜುನಾಥ ವಿವರಿಸಿದರು.
ಸಾಹಿತ್ಯ ಹುಣ್ಣಿಮೆ
೨೨೫ನೇ ತಿಂಗಳ ಸಂಭ್ರಮ:
ಅಂದು ಸಂಜೆ ೬ ಗಂಟೆಗೆ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಏರ್ಪಡಿಸಿದ್ದು, ಪೂಜ್ಯಶ್ರೀ ಪ್ರಸನ್ನನಾಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿzರೆ. ಡಿ. ಮಂಜುನಾಥ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಾಹಿತಿ ಡಾ. ಬಿ. ಶಿವಶಂಕರ್ (ಶೃಂಗೇರಿ ಶಿವಣ್ಣ) ಅವರು ಭಾಗವಹಿಸಲಿzರೆ. ಕುವೆಂಪು ವಿ.ವಿ. ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ಡಾ. ಶುಭಾ ಮರವಂತೆ ಹಾಸ್ಯ ಕಾರ್ಯಕ್ರಮ ನಡೆಸಿಕೊಡಲಿದ್ದು, ರಂಗಕರ್ಮಿ ಡಾ.ಜಿ.ಆರ್. ಲವ ಮತ್ತು ಸಾಹಿತಿಗಳಾದ ಪರಮೇಶ್ವರ ಕರೂರು ಕಥೆ ಹೇಳುತ್ತಾರೆ. ಶೃಂಗೇರಿ ಸುಬ್ರಹ್ಮಣ್ಯ ಮತ್ತು ತಂಡದವರು ಹಾಡು ಹೇಳುತ್ತಾರೆ. ಸಾಹಿತಿಗಳಾದ ಹೊಸನಗರದ ತಿರುಪತಿ ನಾಯ್ಕ, ಬಿಜಿಎಸ್ ಉಪನ್ಯಾಸಕ ಶ್ರೀಕಾಂತ್, ಕವಯತ್ರಿ ಬಿ. ಟಿ. ಅಂಬಿಕಾ, ಬಿಜಿಎಸ್ ವಸತಿ ಶಾಲಾ ಉಪನ್ಯಾಸಕ ಎಸ್. ರುದ್ರೇಶ್ ಆಚಾರ್ ಕ್ಯಾತನಕೊಪ್ಪ, ಬಿಜಿಎಸ್ ಪಿ.ಯು. ಕಾಲೇಜು ಉಪನ್ಯಾಸಕ ಕುಪ್ಪೇರಾವ್ ಕವನ, ಹನಿಗವನ ವಾಚಿಸಲಿzರೆ ಎಂದರು.
ಬಿಜಿಎಸ್ ಆಂಗ್ಲ ಮಾಧ್ಯಮ, ಕನ್ನಡ ಮಾಧ್ಯಮ, ರಾಮಕೃಷ್ಣ ವಿದ್ಯಾಸಂಸ್ಥೆ, ಅನನ್ಯ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು ಹಾಡು, ನೃತ್ಯ ಕಾರ್ಯಕ್ರಮ ನಡೆಸಿಕೊಡಲಿzರೆ. ಒಂದೇ ವೇದಿಕೆಯಲ್ಲಿ ಹಾಡು, ಹಾಸ್ಯ, ಹನಿಗವನ, ಕವನ, ಕಥೆ, ವಿಚಾರ ಎಲ್ಲವನ್ನೂ ಉಣಬಡಿಸುವ ಈ ಕಾರ್ಯಕ್ರಮದಲ್ಲಿ ಸಾಹಿತ್ಯ ಸಾಂಸ್ಕೃತಿಕ ಮನಸ್ಸುಗಳು ಭಾಗವಹಿಸಲು ಡಿ. ಮಂಜುನಾಥ ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಯು. ಮಧುಸೂದನ್ ಐತಾಳ್, ಜಿ. ಕುಬೇರಪ್ಪ, ಭಾರತಿ ರಾಮಕೃಷ್ಣ, ಸುಶೀಲಾ ಷಣ್ಮುಗಂ, ಎಸ್. ನಾರಾಯಣ, ಕೆ.ಎಸ್. ಮಂಜಪ್ಪ ಉಪಸ್ಥಿತರಿದ್ದರು.