ಜೂ.9: ಬೊಮ್ಮನಕಟ್ಟೆ ಶ್ರೀ ಅನ್ನಪೂರ್ಣೇಶ್ವರಿ ದೇವಳದ ವಾರ್ಷಿಕೋತ್ಸವ…

3

ಶಿವಮೊಗ್ಗ: ಬೊಮ್ಮನಕಟ್ಟೆಯ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನದ ೧೨ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಜೂ. ೯ರಂದು ನಡೆಯಲಿದೆ ಎಂದು ಶ್ರೀ ಅನ್ನಪೂರ್ಣೇಶ್ವರಿ ಸೇವಾ ಸಮಿತಿ, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಜಿ.ಕೆ. ಮಾಧವಮೂರ್ತಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಶ್ರೀ ಕ್ಷೇತ್ರ ಹರಿಹರಪುರದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಈ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಶ್ರೀಗಳು ಬೆಳಗ್ಗೆ ೧೦ ಗಂಟೆಗೆ ಎಂ.ಆರ್.ಎಸ್. ವತ್ತಕ್ಕೆ ಬರುವರು. ಅಲ್ಲಿಂದ ಅವರನ್ನು ಬೈಕ್ ರ್‍ಯಾಲಿಯ ಮೂಲಕ ದೇವಸ್ಥಾನದ ಆವರಣಕ್ಕೆ ಕರೆತರಲಾಗುವುದು. ಅಲ್ಲಿ ಪೂರ್ಣಕುಂಭದೊಂದಿಗೆ ಅವರನ್ನು ಸ್ವಾಗತಿಸಲಾಗುವುದು ಎಂದರು.
ಕುಂಭಾಭಿಷೇಕ, ಚಂಡಿಕಾ ಹೋಮ, ಕಲಾತತ್ವ, ಮಹಾ ಮಂಗಳಾರತಿ, ನಡೆದ ನಂತರ ಶ್ರೀಗಳು ಆಶೀರ್ವಚನ ನೀಡುವರು. ನಂತರ ಮಹಾಪ್ರಸಾದ ಇರುತ್ತದೆ ಎಂದರು.
ಅಂದು ಸಂಜೆ ೫ ಗಂಟೆಗೆ ಶ್ರೀಗಳ ಅಮೃತ ಹಸ್ತದಿಂದ ಶ್ರೀ ಚಕ್ರ ನವವರಣ ಪೂಜೆ, ನಂತರ ಅನುಗ್ರಹದ ಫಲ ಮಂತ್ರಾಕ್ಷತೆ ವಿತರಿಸಲಾಗುವುದು. ಭಕ್ತಾದಿಗಳು ಈ ಎ ಕಾರ್ಯಕ್ರಮಗಳಿಗೆ ಆಗಮಿಸಿ ದೇವಿಯ ಕಪೆಗೆ ಪಾತ್ರರಾಗಬೇಕು ಎಂದ ಅವರು, ಸುಮಾರು ೫೦ ಲಕ್ಷ ರೂ. ವೆಚ್ಚದಲ್ಲಿ ೫೧ ಅಡಿ ಎತ್ತರದ ರಾಜಗೋಪುರದ ನಿರ್ಮಾಣ ಕೆಲಸ ನಡೆಯುತ್ತಿದ್ದು, ಭಕ್ತರು ಸಹಾಯ ಮಾಡುವಂತೆ ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ದೇವಳ ಸಮಿತಿ ಪ್ರಮುಖರಾದ ಬಿ.ಕೆ. ಬೆನಕಪ್ಪ, ಎನ್. ಹೆಚ್. ಪ್ರಭಾಕರ್, ಎಂ. ಆರ್. ಬಸವರಾಜ್, ಬಿ.ಜಿ. ಧನರಾಜ್, ಎಂ.ಆರ್. ಶಿವಕುಮಾರ್ ಉಪಸ್ಥಿತರಿದ್ದರು.