ನನಗೆ ಹೋರಾಟದ ಛಲವಿದೆ; ನನ್ನನ್ನು ಬೆಂಬಲಿಸಿ…
ಶಿವಮೊಗ್ಗ :ವಿಧಾನಪರಿಷತ್ನ ಪದವೀಧರ ಕ್ಷೇತ್ರದ ಚುನಾವಣೆಯ ಪಾವಿತ್ರ್ಯತೆ ಯನ್ನೇ ಹಾಳುಮಾಡುತ್ತಿರುವ ದುಷ್ಟ ಪರಂಪರೆಗೆ ಕಡಿವಾಣ ಹಾಕಲೇ ಬೇಕಾಗಿದೆ ಎಂದು ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಸುದ್ದಿಗೋಷ್ಟಿಯಲ್ಲಿ ಹೇಳಿದರು.
ಬಿಜೆಪಿಯ ಅಭ್ಯರ್ಥಿ ಪದವೀಧರರ ಪಾವಿತ್ರ್ಯತೆಯನ್ನೇ ಹಾಳುಮಾಡಲು ಹೊರಟಿದ್ದಾರೆ. ವಿದ್ಯಾವಂತರ ಮತಗಳನ್ನು ಖರೀದಿಸುತ್ತಿದ್ದಾರೆ ಎಂದು ದೂರಿದ ಅವರು, ಕಳೆದ ೪೦ ವರ್ಷ ಗಳಿಂದ ನಾನು ಹಲವು ಚುನಾವಣೆಗಳನ್ನು ಮಾಡಿದ್ದೇನೆ. ಆದರೆ, ಈ ಪರಿಷತ್ನ ಚುನಾವಣೆ ಇಷ್ಟೊಂದು ಹೀನವಾಗಿರುವುದನ್ನು ನಾನು ಕಂಡಿರಲಿಲ್ಲ ಎಂದರು.
ನಾನು ಮತಕ್ಕೆ ಮಲ್ಯ ನೀಡುವೆ, ಬಿಜೆಪಿ ಈ ಹಿಂದೆ ಕೆಸರಿನಲ್ಲಿ ಕಮಲ ಅರಳಿತು. ಆದರೆ ಈಗ ಅರಳಿದ ಕಮಲ ಕೆಸರಿನಲ್ಲಿ ಮುಳುಗುತ್ತಿದೆ, ಅವರಲ್ಲಿ ಹಣವಿದೆ. ನನಗೆ ಛಲವಿದೆ. ನಾನು ಎಂದು ಭ್ರಷ್ಟಚಾರ ಮಾಡಲಿಲ್ಲ. ಆದರೆ ಹೋರಾಟವನ್ನೇ ಮಾಡಿಕೊಂಡು ಬಂದಿದ್ದೇನೆ. ಯಾವುದೇ ಸಂದರ್ಭದಲ್ಲಿ ನಾನು ಹೋರಾಟವನ್ನು ಬಿಟ್ಟುಕೊಟ್ಟಿಲ್ಲ. ನಿಷ್ಕಳಂಕದಿಂದ ರಾಜಕಾರಣವನ್ನು ಹೋರಾಟವನ್ನು ಮಾಡಿಕೊಂಡು ಬಂದಿದ್ದೇನೆ. ಮತದಾರರಿಗೆ ನನ್ನ ಬಗ್ಗೆ ನಂಬಿಕೆ ವಿಶ್ವಾಸವಿದೆ. ಎದುರಾಳಿಗಳಿಗೆ ಯಾವ ಹೋರಾಟ ಹಿನ್ನಲೆಯೂ ಇಲ್ಲ. ವಾತಾವರಣ ಕಾಂಗ್ರೆಸ್ ಪರವಾಗಿದೆ. ನಾನು ಗೆದ್ದೇ ಗೆಲ್ಲುತ್ತೇನೆ ಎಂದರು.
ಪ್ರಮುಖರಾದ ಡಾ.ಶ್ರೀನಿವಾಸ ಕರಿಯಣ್ಣ, ವೈ.ಹೆಚ್.ನಾಗರಾಜ್, ಡಾ.ಟಿ.ನೇತ್ರಾವತಿ, ಶಾಂತ ವೀರನಾಯಕ, ದೀರರಾಜ್, ಹಿರಣ್ಣಯ್ಯ, ಶಿ.ಜು. ಪಾಶ, ಜಿ.ಪದ್ಮನಾಬ್, ಸೈಯ್ಯದ್ ಅಡ್ಡು, ಸುರೇಶ್ ಕೋಟೇಕರ್, ಚಾಮರಾಜ್, ಲಕ್ಷ್ಮಣಪ್ಪ ಇದ್ದರು.