ಉಸಿರು ಹೆಸರಿನ ನಡುವೆ ಜೀವನದಲ್ಲಿ ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡಬೇಕು: ಡಾ. ಸರ್ಜಿ
ಭದ್ರಾವತಿ : ಈ ಭಾರಿ ನಡೆಯಲಿರುವ ವಿಧಾನ ಪರಿಷತ್ ಹಾಗು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುವುದು ಗ್ಯಾರಂಟಿ. ಆದರೆ ಮತ ಗಳಿಕೆಯಲ್ಲಿ ಬಿಜೆಪಿಗಿಂತ ಜೆಡಿಎಸ್ ನವರ ಪಾತ್ರ ಹೆಚ್ಚಿದ್ದು ಕೆಲ ಕ್ಷೇತ್ರ ಗಳಲ್ಲಿ ಅವರ ಪ್ರಚಾರದ ಪರಿಶ್ರಮ ದಿಂದ ಅತಿ ಹೆಚ್ಚಿನ ಮತ ಗಳನ್ನು ಪಡೆದು ಎ ಕ್ಷೇತ್ರಗಳಲ್ಲಿ ಜಯ ಭೇರಿ ಭಾರಿಸುವುದು ಎಂದು ಬಿಜೆಪಿ ರಾಜಧ್ಯಕ್ಷ ವಿಜಯೇಂದ್ರ ವಿಶ್ವಾಸದಿಂದ ತಿಳಿಸಿದರು.
ಬಿಜೆಪಿ ಜೆಡಿಎಸ್ ವತಿಯಿಂದ ನೈರುತ್ಯ ಪದವೀಧರರ ಹಾಗು ಶಿಕ್ಷಕರ ಕ್ಷೇತ್ರದ ಚುನಾವಣೆಯ ಅಂಗವಾಗಿ ಇಲ್ಲಿನ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಮತದಾರರೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದು ಒಂದು ವರ್ಷ ಗಳಾದರೂ ಅಭಿವೃದ್ಧಿ ಕಾರ್ಯಗಳು ಶುನ್ಯವಾಗಿದೆ. ಯಾವುದೆ ಶಂಕು ಸ್ಥಾಪನೆ, ಗುದ್ದಲಿ ಪೂಜೆಯಂತಹ ಕಾರ್ಯಕ್ರಮಗಳು ನಡೆದಿಲ್ಲ. ಶಾಸಕರುಗಳ ಕ್ಷೇತ್ರಗಳಿಗೆ ಯಾವುದೆ ರೀತಿಯ ಅನುದಾನಗಳನ್ನು ಬಿಡುಗಡೆ ಮಾಡಲು ಸಾಧ್ಯವಾ ಗಿಲ್ಲ. ಈ ಮೂಲಕ ರಾಷ್ಟ್ರದ ರಾಜಕೀಯದ ಯಾವುದಾರೂ ರಾಜ್ಯ ತನ್ನ ಜನಪ್ರಿಯತೆಯನ್ನು ಕಳೆದು ಕೊಂಡಿದೆ ಎಂದರೆ ಅದು ಕರ್ನಾಟಕ ರಾಜ್ಯದ ಕಾಂಗ್ರೆಸ್ ಪಕ್ಷದ ಸರ್ಕಾರ ಎಂದು ಲೇವಡಿ ಮಾಡಿದರು.
ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇzಗ ಕಾಲೇಜು ಅಥಿತಿ ಉಪನ್ಯಾಸಕರ ಗೌರವ ಧನವನ್ನು ಹೆಚ್ಚಿಸಿದೆ. ಆದರೆ ಈಗ ಕಾಲೇಜು ಪ್ರಾರಂಭವಾಧರೂ ಉಪನ್ಯಾಕರ ನೇಮಕ ಆಗಿಲ್ಲ. ಶಾಲಾ ಪ್ರಾರಂಭೋತ್ಸವ ಆದರೂ ಸಮಸ್ಯೆ ಗಳು ತಾಂಡವಾಡುತ್ತಿದೆ. ಕೋವಿಡ್ ಸಂದರ್ಭದಲ್ಲಿ ಉಪನ್ಯಾಸಕರ ಯಾವುದೇ ರೀತಿಯು ಸಂಬಳವನ್ನು ನಿಲ್ಲಿಸದೆ ಪಾವತಿ ಮಾಡಲಾಗಿತ್ತು. ಒಂದು ಸಾವಿರ ಶಾಲೆ ೫೦ ಕ್ಕೂ ಹೆಚ್ಚು ಪಾಲಿಟೆಕ್ನಿಕ್‌ಗಳನ್ನು ಪ್ರಾರಂಭ ಮಾಡುವ ಮೂಲಕ ಶೈಕ್ಷಣಿಕವಾಗಿ ಆಮೂಲಾಗ್ರವಾಗಿ ಬದಲಾವಣೆ ಮಾಡಿ ಕ್ರಾಂತಿ ಮಾಡಲಾಗಿತ್ತು. ಆದರೆ ಈಗ ಈಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.
ಪದವೀಧರರ ಕ್ಷೇತ್ರದ ಚುನಾವಣೆಗೆ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಡಾ.ಧನಂಜಯ ಸರ್ಜಿ ಅವರನ್ನು ಆಯ್ಕೆ ಮಾಡಲು ಸೇರಿದ್ದ ಸಭೆಯಲ್ಲಿ ಕೆ.ಎಸ್. ಈಶ್ವರಪ್ಪನವರೇ ಸ್ವತಃ ಡಾ| ಸರ್ಜಿ ಅವರ ಬಗ್ಗೆ ಒಲವು ವ್ಯಕ್ತಪಡಿಸಿ ಅವರ ಹೆಸರನ್ನು ಸೂಚಿಸಿ ಬೆಂಬಲಿಸಿ ದ್ದರು. ಆದರೆ ಈಗ ಯಾಕೆ ಅವರ ಬಗ್ಗೆ ವಿರೋಧ ವ್ಯಕ್ತಪಡಿಸಿ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿ zರೆ ಎಂಬುದು ಗೋತ್ತಾಗುತ್ತಿಲ್ಲ ಎಂದರು.
ಅವರು ನಾಲಿಗೆಯಲ್ಲಿ ಬರುವ ಹೇಳುವ ಮಾತುಗಳು ಅವರ ಹಿನ್ನಲೆ ಏನು ಎಂಬುದು ತಿಳಿಯು ತ್ತದೆ ಎಂದರಲ್ಲದೆ, ಯಡಿಯೂರಪ್ಪ ನವರು ಸಿಎಂ ಆಗಿzಗ ಅವರು ಜಿ ಉಸ್ತುವಾರಿ ಸಚಿವರಾಗಿzಗ ಸಿಎಂ ಜಿಗೆ ಬಂದಾಗ ಅವರನ್ನು ಕನಿಷ್ಟ ಸ್ವಾಗತಿಸಲು ಬರಲಿಲ್ಲ ಎಂದು ಈಶ್ವರಪ್ಪನವರ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಹಾಗು ಅಭ್ಯರ್ಥಿ ಗಳ ಬಗ್ಗೆ ಮಾಧ್ಯಮಗಳಲ್ಲಿ ಬಹಳಷ್ಟು ಆರೋಪ ಪ್ರತ್ಯಾರೋಪ ಗಳು ಬರುತ್ತಿದೆ. ಇದರ ಬಗ್ಗೆ ತಲೆಕೆಡಿಸಿಕೊಳ್ಳ ಬೇಡಿ ಎಂದರಲ್ಲದೆ. ಮುಂದೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದರೆ ಪಕ್ಷದ ಕಾರ್ಯಕರ್ತರು ನಾಯಕರು ಗಳಿಂದ ಪಕ್ಷವನ್ನು ಸಂಘಟಿಸಿ ಅವರ ಪರಿಶ್ರಮದಿಂದ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.
ಇನ್ನು ಮತದಾನದ ಸಮಯ ದಲ್ಲಿ ಪದವೀಧರರು ಹಾಗು ಶಿಕ್ಷಕ ಮತದಾರರು ಮತದಾನ ಮಾಡುವ ಸಮಯದಲ್ಲಿ ಮತ ಪತ್ರದಲ್ಲಿ ಮತಗಟ್ಟೆ ಅಧಿಕಾರಿಗಳು ನೀಡುವ ಪೆನ್ನು ಪಡೆದು ಅಭ್ಯರ್ಥಿಯ ಹೆಸರಿನ ಮುಂದಿರುವ ಬಾಕ್ಸ್‌ನಲ್ಲಿ ಕೇವಲ ೧ ಅಂಕಿಯನ್ನು ಬರೆಯುವ ಮೂಲಕ ಆಶೀರ್ವಾದ ಮಾಡ ಬೇಕೆಂದು ಮನವಿ ಮಾಡಿದರು.
ಪದವೀಧರರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮಾತನಾಡಿ, ಜನಿಸಿದಾಗ ಉಸಿರು ಇರುತ್ತದೆ ಆದರೆ ಹೆಸರು ಇರುವುದಿಲ್ಲ, ಮರಣಿಸಿದಾಗ ಉಸಿರು ಇರುವುದಿಲ್ಲ ಆದರೆ ಹೆಸರು ಇರುತ್ತದೆ. ಈ ಉಸಿರು ಹೆಸರಿನ ನಡುವೆ ಜೀವನದಲ್ಲಿ ಒಳ್ಳೆಯದನ್ನು ಮಾಡಬೇಕು. ಸಮಾಜ ನಮಗೆ ಏನು ಕೊಟ್ಟಿದೆಯೋ ಅದನ್ನು ವಾಪಸ್ ಸಮಾಜಕ್ಕೆ ನೀಡಬೇಕು. ಸ್ವತಃ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದೇನೆ. ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಅಳಿಲು ಸೇವೆ ಮಾಡಿದ್ದೇನೆ. ಆದರೆ ರಾಜಕೀಯ ಕ್ಷೇತ್ರದಲ್ಲಿ ಸೇವೆ ಮಾಡಲು ಪಕ್ಷದ ಹಿರಿಯರು ಅವಕಾಶ ಮಾಡಿ ಕೊಟ್ಟಿದ್ದು ಅದನ್ನು ಪ್ರಾಮಾಣಿಕ ವಾಗಿ ಈಡೇರಿಸುವ ಕಾರಣ ಚುನಾ ವಣಗೆ ಸ್ಪರ್ಧಿಸಿದ್ದೇನೆ ಎಂದರು.
ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಾರ್ಡ್‌ಗೆ ಆಕಸ್ಮಿಕ ಬೆಂಕಿ ಬಿzಗ ಅಲ್ಲಿನ ಮಕ್ಕಳನ್ನು ನನ್ನ ಆಸ್ಪತ್ರೆಗೆ ಕಳಿಸಿದ್ದು ನನ್ನ ಇತರ ವೈದ್ಯರ ಹಾಗು ಸಿಬ್ಬಂದಿಗಳ ಸಹಾಯದಿಂದ ಅವರನ್ನು ಸಂಪೂರ್ಣವಾಗಿ ಗುಣ ಮುಖರಾಗಿಸಿದ್ದು ನನ್ನ ಜೀವನದ ಅವಿಸ್ಮರಣೀಯು ಸಂಗತಿ. ಇದನ್ನು ಅಂದಿನ ಸಿಎಂ ಯಡಿಯೂರಪ್ಪ ನವರು ಮುಕ್ತ ಕಂಠದಿಂದ ಶ್ಲಾಘಿಸಿ ದ್ದರು, ಇದೇ ನನ್ನ ಸೇವೆಗೆ ಮೂಲ ಕಾರಣವಾಯಿತು ಎಂದರು.
ಪದವೀಧರರು ಶಿಕ್ಷಕರು ನೀಡುವ ಪ್ರತಿಯೊಂದು ಮತದದ ಪಾವಿತ್ರ್ಯವನ್ನು ಕಾಪಾಡುವ ಮೂಲಕ ಅವರ ಧ್ವನಿಯಾಗುತ್ತೇನೆ, ಅವರ ನೀರೀಕ್ಷೆಯನ್ನು ಹುಸಿಗೊಳು ವುದಿಲ್ಲ. ಸಮಾಜದಲ್ಲಿ ಏನಾದರೂ ಬದಲಾವಣೆ ತರಲು ನನ್ನ ಕೈಲಾದ ಶ್ರಮ ಹಾಕುತ್ತೇನೆ. ಈ ಕಾರಣ ನನಗೆ ಹಾಗು ಎಸ್.ಎಲ್. ಭೋಜೇಗೌಡರಿಗೆ ಮತ ನೀಡಿ ಆಶೀರ್ವದಿಸಿ ಎಂದು ಮನವಿ ಮಾಡಿದರು.
ಶಿಕ್ಷಕರ ಕ್ಷೇತ್ರದ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಢ ಮಾತನಾಡಿ, ಬಿಜೆಪಿ ನಿಜವಾದ ಜತ್ಯಾತೀತ ಪಕ್ಷವಾಗಿದೆ. ಆ ಕಾರಣ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಇದರ ಫಲ ಏನೋ ಹಿಂದೆ ಸದನ ದಲ್ಲಿ ಕೆಲ ಸಂಗತಿಗಳ ಬಗ್ಗೆ ಒಂದೇ ವಿಚಾರ ವಿಷಯಗಳ ಬಗ್ಗೆ ಇವರ ಜೊತೆಗೆ ಹೋರಾಟ ಮಾಡಿದ್ದೇವೆ ಹಾಗು ನಾನು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ ಎಂದರು.
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರವಾಗಿ ಬದಲಾವಣೆ ತರಲು ಎನ್‌ಇಪಿ ಯನ್ನು ಜರಿಗೆ ತಂದಿತು. ಅದರ ಹಿನ್ನಲೆ ಅದರ ಮಹತ್ವವನ್ನು ಅರಿಯದೆ ಅದರ ಬಗ್ಗೆ ವಿರೋಧ ಮಾಡಬೇಡಿ. ಆ ರೀತಿ ಮಾಡುವುದ ಆಕ್ಷಮ್ಯ ಅಪರಾಧ. ಯಾವುದೋ ದ್ವೇಷಕ್ಕಾಗಿ ಅಸೂಯೆ ಗಾಗಿ, ರಾಜಕೀಯ ಕಾರಣಕ್ಕಾಗಿ ದೇಶದ ಮುಂದಿನ ಜನಾಂಗವಾದ ಮಕ್ಕಳ ಭವಿಷ್ಯವನ್ನು ಹಾಳು ಮಾಡಬೇಡಿ. ಅದು ಮಕ್ಕಳನ್ನು ಕೇವಲ ಶಿಕ್ಷಣವನ್ನು ನೀಡಿ ವಿದ್ಯಾವಂತರನ್ನಾಗಿ ಮಾಡದೆ ಸಂಸ್ಕಾರವಂತರನ್ನಾಗಿ ತಯಾರು ಮಾಡುತ್ತದೆ ಎಂದರು.