ಜೂ.೨: ಶಿವಮೊಗ್ಗದಲ್ಲಿ ಶೆಟ್ಟರ ಸಂತೆ

shetty

ಶಿವಮೊಗ್ಗ : ಆರ್ಯವೈಶ್ಯ ಮಹಾಜನ ಸಮಿತಿಯು ಈ ವರ್ಷ ಶತಮಾನೋತ್ಸವವನ್ನು ಆಚರಿಸುತ್ತಿದ್ದು, ಇದರ ಭಾಗವಾಗಿ ಜೂ.೨ರಂದು ವಿನಾಯಕ ನಗರದ ನವ್ಯಶ್ರೀ ಸಭಾಂಗಣದಲ್ಲಿ ಶೆಟ್ಟರ ಸಂತೆ ಎಂಬ ವಿಶಿಷ್ಟ ಕಾರ್ಯಕ್ರಮ ವನ್ನು ಸಾರ್ವಜನಿಕರಿಗಾಗಿ ಹಮ್ಮಿ ಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಭೂಪಾಳಂ ಶಶಿಧರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಜೂ.೨ರ ಬೆಳಿಗ್ಗೆ ೧೦.೩೦ಕ್ಕೆ ಶಾಸಕ ಎಸ್.ಎನ್.ಚನ್ನಬಸಪ್ಪನವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಶೆಟ್ಟರ ಸಂತೆ ಸಮಿತಿಯ ಅಧ್ಯಕ್ಷೆ ಪ್ರತಿಭಾ ಅರುಣ್ ಮಾತನಾಡಿ, ಈ ಶೆಟ್ಟರ ಸಂತೆಯಲ್ಲಿ ಶೆಟ್ಟರ ಬ್ಯ್ರಾಂಡ್ ಪದಾರ್ಥಗಳಾದ ಚಕ್ಕುಲಿ, ಕೋಡುಬಳೆ, ಕಟ್ಲೆಟ್, ನಿಪ್ಪಟ್ಟು, ಮಸಾಲ ಮಂಡಕ್ಕಿ, ಬೋಂಡಾ ಮಸಾಲೆ, ಪಾನಿಪೂರಿ ಸೇರಿದಂತೆ ರುಚಿರುಚಿಯಾದ ಹೋಂಮೇಡ್ ಕೇಕ್ ಇತ್ಯಾದಿ ಹತ್ತು ಹಲವಾರು ಕುರುಕು ತಿಂಡಿಗಳು ಒಂದೇ ಸೂರಿನಡಿ ದೊರೆಯಲಿವೆ ಎಂದರು.
ಪ್ರತ್ಯೇಕ ಹಾಲ್‌ನಲ್ಲಿ ಸೀರೆಗಳು, ಡ್ರೆಸ್, ಮೆಟೆರಿಯಲ್ಸ್, ಮಕ್ಕಳ ರೆಡಿಮೇಡ್ ಉಡುಪುಗಳು, ವಸ್ತ ವಿನ್ಯಾಸಕರ ವಿಶಿಷ್ಟತೆಗಳ ಕರಕುಶಲ ವಸ್ತುಗಳು, ಜೂಟ್ ಬ್ಯಾಗ್‌ಗಳು, ಬ್ಯೂಟಿ ಅಸೆಸರೀಸ್ ಇತ್ಯಾದಿ ಗಳೊಂದಿಗೆ ಸಾರ್ವಜನಿಕರು ಪಾಲ್ಗೊಳ್ಳ ಬಹುದಾದ ಮನೋರಂಜನೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಇರಲಿದ್ದು, ಕಾರ್ಯಕ್ರಮವು ಬೆಳಿಗ್ಗೆ ೧೦ರಿಂದ ರಾತ್ರಿ ೮ರವರೆಗೆ ನಡೆಯಲಿದೆ ಎಂದರು.
ಸಮಿತಿಯ ಉಪಾಧ್ಯಕ್ಷ ಎಂ.ಜಿ. ಮಂಜುನಾಥ್ ಮಾತನಾಡಿ, ಈ ವಿಶಿಷ್ಟ ಕಾರ್ಯಕ್ರಮಕ್ಕೆ ಶತಮಾ ನೋತ್ಸವ ಸಮಿತಿಯ ಅಧ್ಯಕ್ಷ ಡಿ.ಎಸ್.ಅರುಣ್ ಹಾಗೂ ಅವರ ಪತ್ನಿ ಪ್ರತಿಭಾ ಡಿ.ಎಸ್.ಅರುಣ್ ಚಾಲನೆ ನೀಡಲಿದ್ದು, ಕುರುಕು ತಿಂಡಿ ವಿಭಾಗವನ್ನು ಪರಿಸರ ಪ್ರೇಮಿ ಎಂ.ವಿ. ನಾಗೇಶ್, ಶಶಿಕಲಾ ದಂಪತಿ ಹಾಗೂ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳ ವಿಭಾಗವನ್ನು ಶಾಸಕ ಎಸ್.ಎನ್. ಚನ್ನಬಸಪ್ಪ ದಂಪತಿ ಉದ್ಘಾಟಿಸಲಿದ್ದಾರೆ. ಆರ್ಯವೈಶ್ಯ ಚಾರಿಟಬಲ್ ಟ್ರಸ್ಟ್‌ನ ಟಿ.ಆರ್. ಅಶ್ವತ್ಥನಾರಾಯಣ್ ಶೆಟ್ಟಿ ದಂಪತಿ ಉಪಸ್ಥಿತರಿರುವರು ಎಂದರು.
ಎಸ್.ಜೆ. ಅಶ್ವಥನಾರಾಯಣ್, ಕೆ.ಜಿ.ರಮೇಶ್, ಶ್ರೀನಾಥ್, ನರೇಶ್,ವಿದ್ಯಾ, ಶಂಕರ ನಾರಾಯಣ, ಸಿ.ಆರ್. ಶ್ರೀನಿವಾಸ್, ರಾಧಿಕಾ ಮಾಲತೇಶ್ ಇನ್ನಿತರರಿದ್ದರು.