ನೈರುತ್ಯ ಪದವೀಧರ – ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸಜ್ಜಾದ ಬಿಜೆಪಿ: ದತ್ತಾತ್ರಿ ವಿವರಣೆ

bjp

ಶಿವಮೊಗ್ಗ: ನೈರುತ್ಯ ಪದವೀಧರರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ಜೂ.೩ರಂದು ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ವಿಶೇಷ ಸಿದ್ಧತೆಗಳು ನಡೆದಿವೆ ಎಂದು ಬಿಜೆಪಿ ಪ್ರಕೋಷ್ಠದ ರಾಜ್ಯ ಸಂಚಾಲಕ ಎಸ್.ದತ್ತಾತ್ರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವೈಶಿಷ್ಠ್ಯಪೂರ್ಣ ಪಕ್ಷವಾಗಿದ್ದು, ಕಾರ್ಯಕರ್ತರ ಶಕ್ತಿ ಹಾಗೂ ಆಧಾರದ ಮೇಲಿದೆ ಎಂದರು.
ಇದುವರೆಗೂ ನಡೆದ ನೈರುತ್ಯ ಪದವೀಧರ ಕ್ಷೇತ್ರಕ್ಕೆ ನಡೆದ ೬ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳೇ ಆಯ್ಕೆಯಾಗುತ್ತಿzರೆ. ಅದೇ ರೀತಿ ಶಿಕ್ಷಕರ ಕ್ಷೇತ್ರದಲ್ಲಿ ೪ ಬಾರಿ ಬಿಜೆಪಿ, ಎರಡು ಬಾರಿ ಇತರೆ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗಿzರೆ ಎಂದರು.
ಮೈತ್ರಿಯಿಂದಾಗಿ ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಲಾಗಿದೆ. ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರು ಸಾಮಾಜಿಕ ಸೇವೆಯಲ್ಲಿ ತೊಡಗಿzರೆ. ಅವರು ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಗಳಿಸಿರುವುದರಿಂದ ಅವರಿಗೆ ಟಿಕೇಟ್ ನೀಡಲಾಗಿದೆ ಎಂದರು.
ಪದವೀಧರ ಕ್ಷೇತ್ರದಲ್ಲಿ ಈ ಬಾರಿ ೮೫,೦೯೦ ಮತದಾರರಿzರೆ. ೨೦ಮತದಾರರಿಗೊಬ್ಬರಂತೆ ಪಕ್ಷದ ಘಟನಾಯಕರನ್ನು ನೇಮಕ ಮಾಡಿದ್ದು, ಅವರು ಪ್ರತಿ ಮತದಾರರನ್ನು ಭೇಟಿ ಮಾಡಿ ಮತದಾನ ಮಾಡುವಂತೆ ಮನವಿ ಮಾಡಿಕೊಳ್ಳಲಿzರೆ. ಮತದಾನನಂದು ಮತ ಕೇಂದ್ರಕ್ಕೆ ಬರುವಂತೆ ನೋಡಿಕೊಳ್ಳಲಿzರೆ ಎಂದರು.
ನೈರುತ್ಯ ಕ್ಷೇತ್ರಕ್ಕೆ ಐದೂವರೆ ಜಿಗಳು ಬರಲಿದ್ದು, ಕ್ಷೇತ್ರದಲ್ಲಿ ೧೪ ಬಿಜೆಪಿ ಶಾಸಕರು, ೨ ಎಂಎಲ್‌ಸಿಗಳು ಅದೇ ರೀತಿ ಕಾಂಗ್ರೆಸ್‌ನಲ್ಲಿ ೧೫ ಶಾಸಕರಿzರೆ ಎಂದ ಅವರು, ಪಕ್ಷದ ರಾಜಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರು, ಮೇ ೨೬,೨೭,೨೮ ರಂದು ಕ್ಷೇತ್ರದಲ್ಲಿ ಪ್ರವಾಸ ಮಾಡಲಿದ್ದು, ಅದೇ ರೀತಿ ಜೂ.೧ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಹ ಪ್ರವಾಸ ಮಾಡಲಿzರೆ ಎಂದರು.
ಚುನಾವಣೆಯಲ್ಲಿ ಕಾರ್ಯತಂತ್ರ ಚಟುವಟಿಕೆ ನಡೆಯಲಿದೆ. ಡಾ. ಧನಂಜಯ ಸರ್ಜಿ ಅವರು, ೧೫ ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿzರೆ. ಅದೇ ರೀತಿ ಮೈತ್ರಿ ಅಭ್ಯರ್ಥಿ ಜೆಡಿಎಸ್‌ನ ಬೋಜೇಗೌಡರು ಸಹ ಗೆಲುವು ಖಚಿತ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಋಷಿಕೇಶ್ ಪೈ, ರತ್ನಾಕರ್ ಶೆಣೈ, ಸುರೇಖಾ ಮುರಳೀಧರ್, ಬಿ.ಆರ್. ಮಧುಸೂದನ್, ಪದ್ಮಿನಿರಾವ್, ಸುದೀಂಧ್ರ ಕಟ್ಟೆ, ಸುಬ್ರಹ್ಮಣ್ಯ, ಪ್ರಕಾಶ್, ರಾಘವೇಂದ್ರಾಚಾರ್, ಕೆ.ವಿ.ಕೃಷ್ಣಮೂರ್ತಿ ಉಪಸ್ಥಿತರಿದ್ದರು.