ಜೆಎನ್‌ಎನ್‌ಸಿಇ: ಸಿಎಸ್ ವಿದ್ಯಾರ್ಥಿಗಳಿಂದ ಕೆರೆಗಳ ಸ್ವಚ್ಚಗೊಳಿಸುವ ‘ಸ್ಮಾರ್ಟ್ ಲೇಕ್ ಕ್ಲೀನಿಂಗ್ ಯಂತ್ರ’

1

ಶಿವಮೊಗ್ಗ: ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ಕೆರೆಗಳು ಪ್ರಮುಖ ಅವಶ್ಯಕತೆಯಾಗಿದ್ದು, ಅಂತಹ ಜಲಮೂಲಗಳಲ್ಲಿ ತೇಲುವ ಪ್ಲಾಸ್ಟಿಕ್ ನಂತಹ ತ್ಯಾಜ್ಯ ವಸ್ತುಗಳನ್ನು ಸ್ವಯಂಚಾಲಿತ ಯಂತ್ರವೊಂದು ಸ್ವಚ್ಚ ಮಾಡುವುದಾದರೆ. ಅಂತಹ ನಾವೀನ್ಯ ಪರಿಕಲ್ಪನೆಯೊಂದಿಗೆ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಅರ್ಜುನ್.ಸಿ, ಮೆಹಮದ್ ಸಾಹಿಲ್, ಜಗತಿ ಬಾಯಿ, ಸುಪ್ರಿತಾ ಪಾಟೀಲ್ ತಂಡ ಸಹ ಪ್ರಾಧ್ಯಾಪಕಿ ಆಯಿಷಾ ಸಿದ್ದಿಕಾ ಮಾರ್ಗದರ್ಶನದಲ್ಲಿ ವಿನ್ಯಾಸಗೊಳಿಸಿದ, ಐಓಟಿ ತಂತ್ರeನದ ಮೂಲಕ ತ್ಯಾಜ್ಯಗಳನ್ನು ಪತ್ತೆ ಮಾಡಿ ಸ್ವಯಂಚಾಲಿತವಾಗಿ ಕೆರೆಗಳನ್ನು ಸ್ವಚ್ಚಗೊಳಿಸುವ ಯಂತ್ರದ ಪ್ರಾತ್ಯಾಕ್ಷಿಕೆ ನೋಡುಗರ ಗಮನ ಸೆಳೆಯಿತು.
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ಗುರುವಾರ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಕಂಪ್ಯೂಟರ್ ಸೈನ್ಸ್ ವಿಷಯಗಳ ನಾವೀನ್ಯಯುತ ಯೋಜನೆಗಳ ಪ್ರಾತ್ಯಕ್ಷಿಕೆ ಪ್ರದರ್ಶನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ನಾವೀನ್ಯ ಯೋಜನೆಗಳನ್ನು ಪ್ರದರ್ಶಿಸಿದರು.
ಸಾರ್ವಜನಿಕ ಪ್ರದೇಶಗಳಲ್ಲಿ ಅಪರಾಧ ಚಟುವಟಿಕೆಗಳು ನಡೆದಾಗ ಕತಕ ಬುದ್ದಿಮತ್ತೆ ಮೂಲಕ ತಕ್ಷಣ ಕಂಟ್ರೋಲ್ ರೂಂಗೆ ಮಾಹಿತಿ ನೀಡುವ ಸಿಸಿ ಕ್ಯಾಮೆರಾಗಳು, ಕ್ಷ-ಕಿರಣದಿಂದ ಸ್ವಯಂಚಾಲಿತ ನ್ಯುಮೋನಿಯಾ ಪತ್ತೆ ಹಚ್ಚುವ ತಂತ್ರeನ, ಸ್ಮಾರ್ಟ್ ಟ್ರಾಫಿಕ್ ಸಿಗ್ನಲ್ ನಿರ್ವಹಣೆ, ಎಐ ತಂತ್ರeನದ ಮೂಲಕ ಅಂಧರಿಗೆ ಸ್ಮಾರ್ಟ್ ಬುಕ್ ರೀಡರ್, ನವೀನ ಆಟಗಳ ಆಧಾರದ ಮೇಲೆ ಮಾಹಿತಿಯನ್ನು ಸುರಕ್ಷಿತಗೊಳಿಸುವ ವ್ಯವಸ್ಥೆ, ಅಕ್ಷನ್ ವೊಕ್ಯಾಲೈಜರ್, ವಿಡಿಯೊ ಸ್ಟೆಗ್ನೊಗ್ರಾಫಿ ಸೇರಿದಂತೆ ಅನೇಕ ನಾವೀನ್ಯ ಯೋಜನೆಗಳು ಪ್ರದರ್ಶನಗೊಂಡವು.
ಕಾರ್ಯಕ್ರಮದಲ್ಲಿ ಲೇಕ್ ಕ್ಲಿನಿಂಗ್ ಸಿಸ್ಟಮ್ (ಪ್ರಥಮ ಬಹುಮಾನ), ವಿದ್ಯಾರ್ಥಿಗಳಾದ ಭಾವನಾ.ಆರ್.ಎಂ, ದತ್ತಾತ್ರಿ ಕಷ್ಣ, ನಿಸರ್ಗ.ಎಸ್, ಪೂಜ.ಬಿ ತಂಡ ವಿಭಾಗದ ಮುಖ್ಯಸ್ಥ ಜಲೇಶ್ ಕುಮಾರ್ ಮಾರ್ಗದರ್ಶನದಲ್ಲಿ ರೂಪಿಸಿದ ಇಂಟಲಿಜೆಂಟ್ ಸಿಸ್ಟಮ್ ಟು ಸೆಕ್ಯೂರ್ ಇನ್ಫಾರ್ಮೇಶನ್ ಬೆಸ್ಡ್ ಆನ್ ಇನೊವೇಟಿವ್ ಗೇಮ್ಸ್ (ದ್ವಿತೀಯ ಬಹುಮಾನ), ರುಚಿತಾ.ಎಸ್.ಆರ್, ಸಿರಿ.ಕೆ, ಸ್ನೇಹ.ಎಸ್.ಆರ್, ವಿಭಾ.ಜಿ.ಎಂ ತಂಡ ಪ್ರಾಧ್ಯಾಪಕಿ ಪೂರ್ಣಿಮಾ.ಕೆ.ಎಂ ಮಾರ್ಗದರ್ಶನದಲ್ಲಿ ನಿರ್ಮಿಸಿದ ರೇಟಿಂಗ್ ಬೆಸ್ಢ್ ಆನ್ ಯುಟ್ಯೂಬ್ ಕಮೆಂಟ್ಸ್ (ತತೀಯ ಬಹುಮಾನ) ಪಡೆದಿದೆ.
ಕಾರ್ಯಕ್ರಮವನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪಿಡ್ಲ್ಯುಸಿ ಕಂಪನಿ ಪ್ರಾಜೆಕ್ಟ್ ಮ್ಯಾನೇಜರ್ ಡಿ.ಆರ್.ರಾಘವೇಂದ್ರ, ಸ್ಯಾಪ್ ಅರೆಬಿಯಾ ಕಂಪನಿ ಪ್ರಾಡಕ್ಟ್ ಎಕ್ಸ್‌ಪರ್ಟ್ ಭರತ್ ಗುಪ್ತಾ, ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ವಿಭಾಗದ ಮುಖ್ಯಸ್ಥರಾದ ಡಾ.ಜಲೇಶ್ ಕುಮಾರ್, ಸಂಯೋಜಕರಾದ ಡಾ.ಪೂರ್ಣಿಮಾ, ಡಾ.ಗಾನವಿ, ಹಿರಿಯಣ್ಣ, ಪುಷ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.