ಪ್ರಜ್ಞಾವಂತ ಮತದಾರರೇ ಮತ ನೀಡಿ ಆಶೀರ್ವದಿಸಿ: ಡಾ. ಸರ್ಜಿ ಮನವಿ
ಶಿವಮೊಗ್ಗ : ಜೂ.೩ರಂದು ನಡೆಯಲಿರುವ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ನಾನು ಬಿಜೆಪಿ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸುತ್ತಿದ್ದು, ವಿದ್ಯಾವಂತ -ಪ್ರeವಂತ ಮತದಾರರು ಮತ ನೀಡುವ ಮೂಲಕ ಆಶೀರ್ವದಿಸಿ ತಮ್ಮ ಗೆಲುವಿಗೆ ಕಾರಣರಾಗಬೇಕು ಎಂದು ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ| ಧನಂಜಯ ಸರ್ಜಿ ಮನವಿ ಮಾಡಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವೈದ್ಯ ಶಿಕ್ಷಣ ಮುಗಿದ ತಕ್ಷಣ ನಾನು ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ, ನಂತರ ಚಿಕ್ಕದಾಗಿ ಒಂದು ಕ್ಲಿನಿಕ್ ಆರಂಭಿಸಿದ್ದು, ಇದೀಗ ೧೦೦೦ ಸಿಬ್ಬಂದಿ ಹಾಗೂ ೧೦೦ ವೈದ್ಯರು ತಮ್ಮ ಆಸ್ಪತ್ರೆಯಲ್ಲಿ ಸೇವೆಸಲ್ಲಿಸುತಿ zರೆ, ವಿವಿಧ ಹಂತಗಳಲ್ಲಿ ಪಧವೀದರರ ಸಮಸ್ಯೆಗಳನ್ನು ಹತ್ತಿರದಿಂದ ಅರಿತುಕೊಂಡಿzನೆ, ನೈರುತ್ಯ ಪದವೀಧರ ಕ್ಷೇತ್ರವು ೧೪ ಮೆಡಿಕಲ್ ಕಾಲೇಜು, ೩೦ ಎಂಜಿನಿಯರಿಂಗ್ ಕಾಲೇಜು, ೧೦೦ ಕ್ಕಿಂತ ಹೆಚ್ಚು ದೊಡ್ಡ ದೊಡ್ಡ ವಿದ್ಯಾ ಸಂಸ್ಥೆಗಳನ್ನು ಹೊಂದಿದ ಸುಶಿಕ್ಷಿತರ ಕ್ಷೇತ್ರ. ಈ ಕ್ಷೇತ್ರವು ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉಡುಪಿ, ಮಂಗಳೂರು, ದಕ್ಷಿಣ ಕನ್ನಡ ಹಾಗೂ ದಾವಣಗೆರೆ ಜಿಯ ಹೊನ್ನಾಳಿ, ನ್ಯಾಮತಿ, ಚನ್ನಗಿರಿ ತಾಲ್ಲೂಕುಗಳನ್ನು ಒಳಗೊಂಡಿದೆ. ಈ ಕ್ಷೇತ್ರದಲ್ಲಿ ೮೫ ಸಾವಿರ ಮತದಾರರಿದ್ದು, ಈ ಪೈಕಿ ಶಿವಮೊಗ್ಗ ಜಿಯಲ್ಲಿ ೨೭ ಸಾವಿರ ಮತದಾರರಿzರೆ ಎಂದು ವಿವರಿಸಿದ ಅವರು, ಪಕ್ಷದ ನಿಷ್ಟಾವಂತ ಕಾರ್ಯಕರ್ತರು ತಮ್ಮ ಗೆಲುವಿಗಾಗಿ ಶ್ರಮಿಸಲಿzರೆ ಎಂದು ಹೇಳಿದರು.
೧೦ನೇ ವಯಸ್ಸಿನಿಂದ ಆರ್ಎಸ್ಎಸ್ ಸ್ವಯಂ ಸೇವಕ ನಾಗಿ ಸೇವೆ ಸಲ್ಲಿಸಿzನೆ. ಐಟಿಸಿ, ಒಟಿಸಿ ಮುಗಿಸಿ ಮುಖ್ಯ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದು, ವೈದ್ಯ ವೃತ್ತಿ ಯೊಂದಿಗೆ ಸಂಘದ ಅನೇಕ ಜವಾಬ್ದಾರಿಗಳನ್ನು ನಿರ್ವಹಸಿzನೆ. ವಿಕಾಸ ಟ್ರಸ್ಟ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಿzನೆ. ಕಳೆದ ಎರಡು ವರ್ಷ ಗಳ ಹಿಂದೆ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೂಂಡು ಈಗ ಶಿವಮೊಗ್ಗ ಜಿ ಉಪಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿzನೆ ಎಂದರು.
ಪಕ್ಷದ ಹಿರಿಯರು ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದು, ಅವರೆಲ್ಲರಿಗೂ ಅನಂತ ಧನ್ಯವಾದಗಳು, ಈ ಚುನಾವಣೆಯಲ್ಲಿ ತಮ್ಮೆಲ್ಲರ ಸಹಕಾರ, ಬೆಂಬಲದೊಂದಿಗೆ ಗೆಲುವು ಸಾಧಿಸಿ ಪದವೀದರರ ಸಮಸ್ಯೆಗಳಿಗೆ ಪ್ರಾಮಣಿಕವಾಗಿ ಸ್ಪಂದಿಸುವೆ ಎಂದು ಭರವಸೆ ನೀಡಿದರು.
ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಎಸ್.ಎನ್. ಚನ್ನಬಸಪ್ಪಅವರು ಮಾತನಾಡಿ, ಪಕ್ಷದ ಹಿರಿಯರು ತೀರ್ಮಾನ ಕೈಗೊಂಡು ಡಾ| ಧನಂಜಯ ಸರ್ಜಿ ಅವರಿಗೆ ಸ್ಪರ್ಧೆಗೆ ಅವಕಾಶ ನೀಡಿzರೆ. ಬಿಜೆಪಿಯ ಎಲ್ಲ ಕಾರ್ಯಕರ್ತರು ಸೇರಿ ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಬಿಜೆಪಿ ರಾಜ್ಯ ಸಂಚಾಕ ಎಸ್.ದತ್ತಾತ್ರಿ, ಬಿಜೆಪಿ ನಗರಾಧ್ಯಕ್ಷ ಮೋಹನ್ ರೆಡ್ಡಿ, ಜಿ ಪ್ರಧಾನ ಕಾರ್ಯದರ್ಶಿ ಮಾಲತೇಶ್, ಸೂಡಾ ಮಾಜಿ ಅಧ್ಯಕ್ಷ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.