ಕಳೆದ 5 ವರ್ಷಗಳಿಂದ ಶೇ.100 ಫಲಿತಾಂಶ: ಜೈನ್ ಪಬ್ಲಿಕ್ ಸ್ಕೂಲ್ ಸಾಧನೆ…

pm

ಶಿವಮೊಗ್ಗ: ನಗರದ ಪ್ರತಿಷ್ಠಿತ ಜೈನ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಕೆ.ಎನ್. ವಿನೀತ್ ರಾವ್ ಸಿಬಿಎಸ್‌ಇ ೧೦ನೇ ತರಗತಿಯಲ್ಲಿ ಜಿಗೆ ಪ್ರಥಮ ಸ್ಥಾನ ಪಡೆದು ಕೀರ್ತಿ ತಂದಿzರೆ ಎಂದು ಪ್ರಾಂಶುಪಾಲೆ ಪ್ರಿಯದರ್ಶಿನಿ ಎನ್. ಅವರು ಸುದ್ದಿಗೋಷ್ಟಿಯಲ್ಲಿ ವಿವರಿಸಿದರು.
ನಮ್ಮ ಶಾಲೆ ಆರಂಭವಾಗಿ ೧೧ ವರ್ಷಗಳಾಗಿವೆ. ಕಳೆದ ೫ ವರ್ಷ ದಿಂದ ೧೦ನೇ ತರಗತಿಯಲ್ಲಿ ಶೇ. ೧೦೦ರಷ್ಟು ಫಲಿತಾಂಶ ಬಂದಿದೆ. ಈ ಬಾರಿ ನಮ್ಮ ಶಾಲೆಗೆ ಕೆ.ಎನ್. ವಿನೀತ್ ರಾವ್ ಶೇ. ೯೮.೬ರಷ್ಟು ಅಂಕ ಪಡೆಯುವುದರೊಂದಿಗೆ ಜಿಗೆ ಪ್ರಥಮ ಸ್ಥಾನ ಪಡೆದಿzರೆ ಎಂದರು.


ಈ ವಿದ್ಯಾರ್ಥಿ ಕನ್ನಡದಲ್ಲಿ ೧೦೦, ವಿeನ ೯೯, ಇಂಗ್ಲಿಷ್ ೯೮, ಸಮಾಜ ವಿeನ ೯೮, ಗಣಿತ ೯೮, ಐಟಿ ೯೮ ಅಂಕ ಪಡೆದಿzರೆ. ಅದೇ ರೀತಿ ಶ್ರೇಯಾ ಎಂ.ಎನ್. ಶೇ. ೯೩, ನಂದಿನಿ ಶೇ. ೮೯ ಅಂಕ ಪಡೆದು ಶಾಲೆಗೆ ಕೀರ್ತಿ ತಂದಿzರೆ ಎಂದ ಅವರು, ಪರೀಕ್ಷೆಗೆ ಕುಳಿತಿದ್ದ ೩೧ ವಿದ್ಯಾರ್ಥಿಗಳು ಉತ್ತೀರ್ಣ ರಾಗಿzರೆ ಎಂದರು.
ಸಾಮಾನ್ಯವಾಗಿ ಕೆಲವು ಶಾಲೆಗಳು ಕಡಿಮೆ ಅಂಕ ಬಂದರೆ ಟಿಸಿ ಕೊಟ್ಟು ಕಳಿಸುತ್ತಾರೆ. ಅದು ತಪ್ಪು ಎಂದ ಅವರು, ಒಬ್ಬ ವಿದ್ಯಾರ್ಥಿಯನ್ನು ಹೀಗೆ ತಿರಸ್ಕರಿಸುವುದು ಸರಿಯಲ್ಲ. ಆದರೆ ನಮ್ಮ ಶಾಲೆಯಲ್ಲಿ ಕಡಿಮೆ ಅಂಕ ಬಂದವರನ್ನೂ ಕೂಡ ಸೂಕ್ತ ಮಾರ್ಗದರ್ಶನ ಪಾಠ ಮಾಡಿ ಅವರಲ್ಲಿ ಆತ್ಮ ವಿಶ್ವಾಸ ತುಂಬಿ ಹೆಚ್ಚಿನ ಅಂಕ ಪಡೆಯುವಂತೆ ಮಾಡಿzವೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶಾಲೆ ಪ್ರಯತ್ನಿಸುತ್ತಿದೆ ಎಂದರು.
ವಿನೀತ್ ರಾವ್ ಮಾತನಾಡಿ, ಶ್ರದ್ಧೆ ಆತ್ಮವಿಶ್ವಾಸವಿದ್ದರೆ ಎಂತಹ ಪರೀಕ್ಷೆಗಳನ್ನಾದರೂ ಎದುರಿಸ ಬಹುದಾಗಿದೆ. ನನ್ನ ಈ ಸಾಧನೆಗೆ ಪ್ರಮುಖವಾಗಿ ನನ್ನ ತಂದೆ, ತಾಯಿ ಹಾಗೂ ಶಾಲೆಯ ಉಪಾಧ್ಯಾಯರು ಮತ್ತು ಸಿಬ್ಬಂದಿ ಕಾರಣರಾಗಿzರೆ. ಉಪಾಧ್ಯಾಯರು ಉತ್ತಮವಾಗಿ ಪಾಠ ಮಾಡಿzರೆ. ನಮ್ಮ ಸಂದೇಹಗಳನ್ನು ಸಮರ್ಥವಾಗಿ ಪರಿಹರಿಸಿzರೆ. ಈ ಎ ಕಾರಣಗಳಿಂದ ನಾನು ಈ ಸಾಧನೆ ಮಾಡಿzನೆ. ನನ್ನ ಸಾಧನೆಗೆ ಕಾರಣರಾದ ಎಲ್ಲರಿಗೂ ಅಭಿನಂದನೆಗಳು. ಐಎಎಸ್ ಮಾಡುವ ಗುರಿ ಹೊಂದಿzನೆ ಎಂದರು.
ಶ್ರೇಯಾ ಮಾತನಾಡಿ, ಎಲ್ಲರೂ ಶಾಲೆಯಲ್ಲಿ ಆತ್ಮವಿಶ್ವಾಸ ನೀಡಿ ಪ್ರೋತ್ಸಾಹಿಸಿzರೆ. ಮತ್ತು ಶಿಕ್ಷಕರು ಉತ್ತಮ ಮಾರ್ಗದರ್ಶನ ನೀಡಿ ಧೈರ್ಯ ತುಂಬಿzರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿನೀತ್ ರಾವ್ ಪೋಷಕರಾದ ನಾಗೇಶ್, ವಾರಿಜ, ಶಾಲೆಯ ಸೌಲಭ್ಯ ವ್ಯವಸ್ಥಾಪಕ ವಿಜಯಕುಮಾರ್, ಆರ್. ಸುಮಂತ್ ಉಪಸ್ಥಿತರಿದ್ದರು.