ಬಿಜೆಪಿಯಿಂದ ಹಗಲು-ರಾತ್ರಿ ಪಕ್ಷಕ್ಕಾಗಿ ದುಡಿದವರ ಕಡೆಗಣನೆ: ಆಕ್ರೋಶ

pm-1

ಶಿವಮೊಗ್ಗ: ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಿ ಹೊಸಬರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ನಾಯಕರು ಮಣೆ ಹಾಕಿzರೆ. ಇದು ನಮಗೆ ಅಸಮಾಧಾನ ತಂದಿದೆ ಎಂದು ಸಾಗರದ ವಕೀಲ ಹಾಗೂ ಜಿ ಬಿಜೆಪಿ ಕಾನೂನು ಪ್ರಕೋಷ್ಠದ ಉಪಾಧ್ಯಕ್ಷ ಪ್ರವೀಣ್ ಸಾಗರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ವಕೀಲರನ್ನು ಕಡೆಗಣಿಸುತ್ತಿದೆ. ನೈರುತ್ಯ ಪದವೀಧರ ಕ್ಷೇತ್ರಕ್ಕೆ ಸಾಕಷ್ಟು ಆಕಾಂಕ್ಷಿಗಳಿದ್ದರು. ಅಂತೆಯೇ ನಾನು ಕೂಡ ಆಕಾಂಕ್ಷಿಯಾಗಿz. ಆದರೆ, ಯಾರನ್ನೂ ಸೌಜನ್ಯ ಕ್ಕಾಗಿಯೂ ಕೇಳಲಿಲ್ಲ. ಹೋಗಲಿ ಪಕ್ಷದ ಅಭ್ಯರ್ಥಿಯಾದ ಡಾ| ಧನಂಜಯ ಸರ್ಜಿಯವರು ನಾಮಪತ್ರ ಸಲ್ಲಿಸುವ ವಿಷಯವನ್ನೂ ಹೇಳಲಿಲ್ಲ. ಮಾತೇ ಆಡಲಿಲ್ಲ. ನಿನ್ನೆಯವರೆಗೂ ಕಾದೆವು. ಈಗ ಬೇಸತ್ತು ನಮ್ಮ ಅಸಮಾಧಾನ ಹೊರಹಾಕುತ್ತಿzವೆ. ಹಾಗಂತ ಪಕ್ಷದ ವಿರುದ್ಧ ನಡೆದು ಕೊಳ್ಳುವುದಿಲ್ಲ ಎಂದರು.
ಬಿಜೆಪಿಯಲ್ಲಿ ಹಗಲು, ರಾತ್ರಿ ದುಡಿದ ಕಾರ್ಯಕರ್ತರನ್ನು ಅದೇಕೋ ಕಡೆಗಣಿಸಲಾಗುತ್ತಿದೆ. ನಿನ್ನೆ ಮೊನ್ನೆ ಬಂದವರಿಗೆ ಮಣೆ ಹಾಕಲಾಗುತ್ತಿದೆ. ಅದರಲ್ಲೂ ವಕೀಲರು ಇವರಿಗೆ ಬೇಡವಾಗಿ zರೆ. ಜತಿ, ದುಡ್ಡಿನ ಮೇಲೆ ಅಭ್ಯರ್ಥಿಗಳ ಆಯ್ಕೆ ನಡೆಯುತ್ತಿದೆ ಎಂದು ದೂರಿದರು.
ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಂತೂ ಒಬ್ಬ ಮಹಾನ್ ಭ್ರಷ್ಟರಾಗಿzರೆ. ಬಿಜೆಪಿಯ ಸಿ.ಟಿ. ರವಿ ಅವರನ್ನು ಸೋಲಿಸಿದವನು ಆತ. ಅವರಿಗಂತೂ ನಮ್ಮ ಬೆಂಬಲ ಇಲ್ಲವೇ ಇಲ್ಲ. ಮೇ ೨೧ರ ನಂತರ ನಮ್ಮ ಬೆಂಬಲ ಯಾರಿಗೆ ಎಂಬುದನ್ನು ಬಹಿರಂಗಪಡಿಸು ತ್ತೇವೆ ಎಂದು ಏಕವಚನದಲ್ಲಿ ಹರಿಹಾಯ್ದರು.
ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ಎನ್. ದೇವೇಂದ್ರಪ್ಪ, ಮಹೇಂದ್ರ ಕುಮಾರ್, ವಾಗೀಶ್ ಇದ್ದರು.