ದೇಶ ಕಟ್ಟುವುದು ಎಂದರೆ ಹಳ್ಳಿಗಳನ್ನು ಕಟ್ಟುವುದು ಎಂದರ್ಥ…

111

ಶಿವಮೊಗ್ಗ: ಸಹ್ಯಾದ್ರಿ ಕಲಾ ಕಾಲೇಜಿನ ಎನ್‌ಎಸ್‌ಎಸ್ ಘಟಕ -೧ ಮತ್ತು ೨ರ ವಾರ್ಷಿಕ ವಿಶೇಷ ಶಿಬಿರಕ್ಕೆ ಶಿವಮೊಗ್ಗ ತಾಲೂಕು ದೊಡ್ಡ ಮತ್ತಲಿ ಗ್ರಾಮದಲ್ಲಿ ಚಾಲನೆ ನೀಡಲಾಯಿತು.
ನಿನ್ನೆ ಸಂಜೆ ಮಳೆಯ ಸಿಂಚನದ ನಡುವೆಯೂ ಸಹ್ಯಾದ್ರಿ ಕಲಾ ಕಾಲೇಜಿನ ಎನ್‌ಎಸ್‌ಎಸ್ ಸ್ವಯಂ ಸೇವಕರಾದ ೧೦೦ಕ್ಕೂ ಹೆಚ್ಚು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅತ್ಯಂತ ಸಡಗರ ಸಂಭ್ರಮ ಉತ್ಸಾಹದಿಂದ ಊರಿನ ಪ್ರಮುಖರ ಜೊತೆಗೂಡಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು. ಇದಕ್ಕೂ ಮುನ್ನ ಊರಿನಲ್ಲಿ ಪಥಸಂಚಲನ ನಡೆಸಿದರು. ಗ್ರಾಮಸ್ಥರು ಮಕ್ಕಳನ್ನು ಮತ್ತು ಅಧ್ಯಾಪಕ ವರ್ಗದವರನ್ನು ಮಮತೆಯಿಂದ ಸ್ವಾಗತಿಸಿದರು.


ಶಿಬಿರಕ್ಕೆ ಊರಿನ ಹಿರಿಯರಾದ ಹೊನ್ನಾಚಾರ್ ಚಾಲನೆ ನೀಡಿ, ಒಂದು ವಾರಗಳ ಕಾಲ ನಡೆಯುವ ಈ ಶಿಬಿರ ಯಶಸ್ವಿಯಾಗಲಿ ಎಂದು ಹಾರೈಸಿದರು.
ಪ್ರಾಸ್ತಾವಿಕವಾಗಿ ಶಿಬಿರದ ಉzಶಗಳ ಕುರಿತು ಮಾತನಾಡಿದ ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾ. ಪ್ರಕಾಶ್ ಮರ್ಗನಳ್ಳಿ, ಹಳ್ಳಿಗಳ ಕಡೆ ನಮ್ಮ ಎನ್‌ಎಸ್‌ಎಸ್ ನಡಿಗೆ ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಎಂಬ ಗಾಂಧೀಜಿಯವರ ಮಾತನ್ನು ಎನ್‌ಎಸ್‌ಎಸ್ ಸ್ವಯಂ ಸೇವಕರು ಅರ್ಥ ಮಾಡಿ ಕೊಳ್ಳಬೇಕು. ಮತ್ತು ಅರ್ಥ ಮಾಡಿಸಬೇಕು ಎಂದರು.
ದೇಶ ಕಟ್ಟುವುದು ಎಂದರೆ ಹಳ್ಳಿಗಳನ್ನು ಕಟ್ಟುವುದು. ಅಲ್ಲಿನ ಬದುಕನ್ನು ಅರ್ಥ ಮಾಡಿಕೊಳ್ಳು ವುದು. ಎನ್‌ಎಸ್‌ಎಸ್ ಉzಶವೂ ಇದೇ ಆಗಿದೆ. ವಾರ್ಷಿಕ ಶಿಬಿರಗಳು ಕೊಡುವ ಅನುಭವಗಳು ಹೊಸ ಬದುಕನ್ನು ಕಲಿಸುತ್ತವೆ. ಇಲ್ಲಿ ಕಲಿತಿದ್ದನ್ನು ಜೀವನದಲ್ಲಿಯೂ ಅಳವಡಿಸಿಕೊಳ್ಳ ಬಹುದಾಗಿದೆ. ಸಮುದಾಯದಿಂದ ನಮ್ಮ ವಿದ್ಯಾರ್ಥಿಗಳು ಕಲಿಯುವುದು ಬೇಕಾದಷ್ಟಿದೆ. ಹಳ್ಳಿಗಳ ಬದುಕು, ಕಷ್ಟ, ಸುಖ, ದುಃಖ ದುಮ್ಮಾನಗಳು, ಸಾಮರಸ್ಯ, ಆರೋಗ್ಯ, ಶಿಕ್ಷಣ, ನಿಷ್ಕಲ್ಮತೆ ಇವೆಲ್ಲವನ್ನು ನಮ್ಮ ಮಕ್ಕಳು ಅರಿತುಕೊಳ್ಳಬೇಕು ಎಂದರು.
ವಿದ್ಯಾರ್ಥಿ ಕ್ಷೇಮಾಧಿಕಾರಿ ಹಾಗೂ ಶಿಬಿರದ ಸಲಹೆಗಾರ ಡಾ. ಕೆ.ಎನ್. ಮಂಜುನಾಥ್ ಮಾತನಾಡಿ, ಎನ್‌ಎಸ್‌ಎಸ್ ಎಂಬುದು ವಿದ್ಯಾರ್ಥಿಗಳ ಪಾಲಿಗೆ ಅತ್ಯಂತ ಮುಖ್ಯವಾದ ಘಟ್ಟ ವಾಗಿದೆ. ಪುಸ್ತಕಗಳು eನವನ್ನು ಹೆಚ್ಚಿಸಿದರೆ ಇಂತಹ ಶಿಬಿರಗಳು ಜೀವನದ ಅನುಭವವನ್ನೇ ನೀಡುತ್ತವೆ. eನವನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುದನ್ನು ತಿಳಿಸುತ್ತದೆ ಎಂದರು.
ಕುವೆಂಪು ವಿವಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆ ಮಾತನಾಡಿ, ಕತ್ತಲಿನಿಂದ ಬೆಳಕಿನೆಡೆಗೆ ಸಾಗುವುದೇ ಶಿಬಿರದ ಮುಖ್ಯ ಉzಶವಾಗಿದೆ. ಎನ್‌ಎಸ್‌ಎಸ್ ನಂತಹ ಶಿಬಿರ ಗಳು ಅರಿವನ್ನು ವಿಸ್ತರಿಸುತ್ತವೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಚಾರ್ಯ ಡಾ. ಸೈಯದ್ ಸನಾವು, ಶಿಬಿರವು ೭ ದಿನಗಳ ಕಾಲ ನಡೆಯಲಿದ್ದು, ಮಕ್ಕಳು ಆರೋಗ್ಯದ ಕಡೆ ಗಮನ ಹರಿಸಿ ಸ್ವಚ್ಛತೆ ಕಾಪಾಡಿ ಎಂದರು.
ಸಹ ಶಿಬಿರಾರ್ಥಿಗಳಾದ ಉಪನ್ಯಾಸಕಿ ಡಾ. ಪ್ರೇಮಾ ಜಿ.ಕೆ., ಹರ್ಷ ಸಿ.ಎಂ., ಸಹ ನಿರ್ದೇಶಕಿ ಡಾ. ಕೃಪಾಲಿನಿ ಹೆಚ್.ಎಸ್., ಪ್ರಮುಖರಾದ ಸಂದೀಪ, ನಿರಂಜನ್, ಶರತ್, ತರುಣ್, ಮನೋಜ್, ಭರತ್, ರಾಜು ಮುಂತಾದವರಿದ್ದರು. ಕಾರ್ಯಕ್ರಮಾಧಿಕಾರಿ ಮುದುಕಪ್ಪ ವಂದಿಸಿದರು.