ಡಾ| ಸರ್ಜಿ – ಭೋಜೇಗೌಡರಿಂದ ನಾಮಪತ್ರ ಸಲ್ಲಿಕೆ…
ಮೈಸೂರು :ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಹಾಗೂ ಶಿಕ್ಷಕರ ಕ್ಷೇತ್ರದ ಎಸ್.ಎಲ್. ಭೋಜೇಗೌಡ ಅವರ ಗೆಲುವು ನೂರಕ್ಕೆ ನೂರರಷ್ಟು ಖಚಿತ ಎಂದು ಸಂಸದ ಬಿ.ವೈ.ರಾಘವೇಂದ್ರ ವಿಶ್ವಾಸ ವ್ಯಕತಿಪಡಿಸಿದರು.
ಇಲ್ಲಿನ ನಜರಾಬಾದ್ ವಸಂತ ಮಹಲ್ ರಸೆತಿಯ ವಿಕೆ ಪಂಕ್ಷನ್ ಹಾಲ್ ನಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಮಯಾವಕಾಶ ಕೂಡ ಕಡಿಮೆ ಇರುವುದರಿಂದ ಇಬ್ಬರೂ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಬೇಕು, ಮತದಾರರನ್ನು ವೈಯಕಿತಿಕವಾಗಿ ಭೇಟಿ ಮಾಡುವ ಕೆಲಸವನ್ನು ಮಾಡಬೇಕು. ಜೆಡಿಎಸ್- ಹೊಂದಾಣಿಕೆ ಪಕ್ಷ ಬಲವನ್ನು ಹೆಚ್ಚಿಸಿದೆ, ಇಬ್ಬರ ಗೆಲವು ಗ್ಯಾರಂಟಿ ಎಂದು ಹೇಳಿದರು. ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ಮಂಗಳೂರು, ಉಡುಪಿ, ಚಿಕ್ಕಮ ಗಳೂರು, ದಾವಣಗೆರೆ, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಒಟ್ಟು ೩೦ ಶಾಸಕರಿದ್ದು, ಜೆಡಿಎಸ್ ಮತುತಿ ಬಿಜೆಪಿ ಕಾರ್ಯ ಕರ್ತರು ಕಾರ್ಯ ಕರ್ತರೆಲ್ಲರೂ ಒಟ್ಟಾಗಿ ಅಭ್ಯರ್ಥಿ ಗಳ ಗೆಲುವಿಗೆ ಶ್ರಮಿಸೋಣ ಎಂದು ಕರೆ ನೀಡಿದರು.
ಪದವೀಧರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮಾತನಾಡಿ, ನಿಷ್ಟಾವಂತ ಕಾರ್ಯಕರ್ತರಿರುವ ಪಕ್ಷ ಬಿಜೆಪಿ, ಅಭ್ಯರ್ಥಿಯಾಗಿ ಅವಕಾಶ ಕಲ್ಪಿಸಿದ ಪಕ್ಷದ ಹಿರಿಯರಿಗೆ ಅನಂತ ಧನ್ಯವಾದಗಳು, ಹಾಗೆಯೇ ನನ್ನ ಮತುತಿ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್.ಎಲ್. ಭೋಜೇಗೌಡರ ಗೆಲುವು ಕಾರ್ಯಕರ್ತರ ಗೆಲುವಾಗಬೇಕು, ಈ ನಿಟ್ಟಿನಲ್ಲಿ ತಾವೆಲ್ಲರೂ ಬೆಂಬಲಿಸಿ, ಮತ ನೀಡಬೇಕು ಎಂದು ವಿನಂತಿಸಿದರು.
ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್. ಎಲ್. ಭೋಜೇಗೌಡ್ರು ಮಾತನಾಡಿ, ಈ ಚುನಾವಣೆಯಲ್ಲಿ ಎಲ್ಲಿಯೂ ಪಕ್ಷದ ಚಿಹ್ನೆ ಇರುವುದಿಲ್ಲ, ಸೀರಿಯಲ್ ನಂಬರ್ ಇರುತತಿದೆ, ಮತಗಟ್ಟೆ ಯಲ್ಲಿಯೇ ಇರುವ ಪೆನ್ನು ಬಳಸಿ ಮತದಾನ ಮಾಡಬೇಕು, ಡಾ.ಧನಂಜಯ ಸರ್ಜಿ ಅವರ ಹೆಸರಿನ ಮುಂದೆ ಒಂದು ಎಂದು ಬರೆಯಬೇಕು, ಗೊಂದಲ ಮಾಡಿಕೊಳ್ಳದೇ ಪ್ರಥಮ ಪ್ರಾಶಸತ್ಯಿದ ಮತ ಚಲಾಯಿಸಿ ಇಬ್ಬರೂ ಅಭ್ಯರ್ಥಿಗಳನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ರಾಜಧ್ಯಕ್ಷರೂ ಆದ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ವಿರೋಧ ಪಕ್ಷದ ಆರ್.ಅಶೋಕ್, ಶಿವಮೊಗ್ಗ ಜನಪ್ರಿಯ ಸಂಸದರಾದ ಬಿ.ವೈ.ರಾಘ ಂದ್ರ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹಾಜರಿದ್ದರು.
ಇದಕ್ಕೂ ಮುನ್ನ ಡಾ| ಧನಂಜಯ ಸರ್ಜಿ ಅವರು ತಾಯಿ ರೇಣುಕಮ್ಮ , ಪತ್ನಿ ಸಮಿತಾ ಸರ್ಜಿ ಅವರೊಂದಿಗೆ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು.