ಅನಿಕೇತನ ಸೇವಾ ಟ್ರಸ್ಟ್‌ನಿಂದ ವಿಭಿನ್ನ ಶೈಲಿಯ ಕನ್ನಡ ನಾಟಕ…

ramesh-babu

ಶಿವಮೊಗ್ಗ : ಮೇ ೧೯ರ ಭಾನುವಾರ ಸಂಜೆ ೫.೩೦ಕ್ಕೆ ನಗರದ ಕುವೆಂಪು ರಂಗ ಮಂದಿರದಲ್ಲಿ ಅನಿಕೇತನ ಸೇವಾ ಟ್ರಸ್ಟ್ ವತಿಯಿಂದ ಶಿವದೂತ ಗುಳಿಗ ವಿಭಿನ್ನ ಶೈಲಿಯ ಕನ್ನಡ ನಾಟಕವನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ರಮೇಶ್ ಬಾಬು ಹೇಳಿzರೆ.
ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ೨೦೦೯ರಲ್ಲಿ ಜಿಯ ಜನತೆಗೆ ಏನಾದರೂ ವಿನೂತನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಬೇಕೆನ್ನುವ ಉzಶದಿಂದ ಹುಟ್ಟಿಕೊಂಡ ಅನಿಕೇತನ ಸೇವಾ ಟ್ರಸ್ಟ್ ಮೊದಲು ವಾಯ್ಸ್ ಆಫ್ ಕರ್ನಾಟಕ ಆಫ್ ಶಿವಮೊಗ್ಗ, ಛತ್ರಪತಿ ಶಿವಾಜಿ ಮಹಾರಾಜ್ ನಾಟಕ, ಸರಿಗಮಪದ ವಿಜೇತರಿಗೆ ಸನ್ಮಾನ, ಕತಕ್ ಕಾರ್ಯಕ್ರಮ, ಅಪ್ಪು ಗಾಯನ, ಗೀತನಮನ ಕಾರ್ಯಕ್ರಮ, ೨೦೨೩ರಲ್ಲಿ ಶಾಸ್ತ್ರೀ ಯ ಸಂಗೀತ ಆಧಾರಿತ ಚಲನಚಿತ್ರ ಗೀತೆಗಳ ಕಾರ್ಯಕ್ರಮ ಹಮ್ಮಿ ಕೊಂಡಿತ್ತು ಎಂದರು.
ಅದು ಅಭೂತಪೂರ್ವ ಯಶಸ್ಸು ಕಂಡಿತ್ತು. ಈಗ ಗಿನ್ನೆಸ್ ದಾಖಲೆಯತ್ತ ದಾಪುಗಾಲು ಹಾಕುತ್ತಿರುವ ೬೩೬ನೇ ಪ್ರದರ್ಶ ನವನ್ನು ನೀಡುತ್ತಿರುವ ಒಂದು ಸಾವಿರ ಪ್ರದರ್ಶನಕ್ಕೆ ಹಣಿಯಾಗಿ ರುತ್ತಿರುವ ನಾಟಕವಾದ ಸುಮಾರು ೩೦ ಜನ ನುರಿತ ಕಲಾವಿದ ರೊಂದಿಗೆ ಕಾಂತಾರ ಚಲನಚಿತ್ರದ ಗುರುವ ಪಾತ್ರದಾರಿ ಸ್ವರಾಜ್ ಶೆಟ್ಟಿಯವರು ಮುಖ್ಯ ಭೂಮಿಕೆ ಯಲ್ಲಿರುವ ಪ್ರಖ್ಯಾತ ನಿರ್ದೇಶಕರಾದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ರವರ ನಿರ್ದೇಶನದ ಶಿವದೂತ ಗುಳಿಗ ನಾಟಕ ಪ್ರದರ್ಶನವಾ ಗಲಿದೆ. ಖ್ಯಾತ ಕಲಾವಿದರು ಮತ್ತು ವಿಶೇಷ ರಂಗ ಸಜ್ಜಿಕೆ, ಸಂಗೀತ ಈ ನಾಟಕದ ಪ್ರಮುಖ ಅಂಶಗಳಾಗಿದ್ದು, ಭೂತರಾ ಧನೆಯ ವೈಶಿಷ್ಟ್ಯವನ್ನು ಮತ್ತು ತುಳುನಾಡಿನ ದೈವವಾದ ಗುಳಿಗ ದೈವದ ಮಹಿಮೆಯನ್ನು ಕೂಡ ಈ ನಾಟಕದಲ್ಲಿ ಕಾಣಬಹುದಾಗಿದೆ ಎಂದರು.
ಪ್ರವೇಶ ಶುಲ್ಕ ೨೦೦ ಮತ್ತು ೫೦೦ ರೂ.ಗಳನ್ನು ನಿಗಧಿಪಡಿಸಿ ದ್ದು, ಟಿಕೇಟ್ ಅನಿಕೇತನ ವಿದ್ಯಾಲ ಯ, ೧ನೇ ತಿರುವು, ಬಸವನಗುಡಿ ಇಲ್ಲಿ ಲಭ್ಯವಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ವಿಶ್ವೇಶ್ವರಯ್ಯ ಮತ್ತು ಸತೀಶ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.