ಸಿಬಿಎಸ್‌ಸಿ: ಜೈನ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ವಿನೀತ್ ಫಸ್ಟ್

veenith-rao

ಶಿವಮೊಗ್ಗ : ಸಿಬಿಎಸ್‌ಸಿ ೧೦ನೇ ತರಗತಿಯ ಫಲಿತಾಂಶವು ಪ್ರಕಟಗೊಂಡಿದ್ದು, ನಗರದ ಹೊರವಲಯದ ಜೈನ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಕೆ . ಎನ್. ವಿನೀತ ರಾವ್ ಶೇ. ೯೮.೬ ಅಂಕ ಪಡೆಯುವುದರೊಂದಿಗೆ ಜಿಗೆ ಪ್ರಥಮ ಸ್ಥಾನವನ್ನು ಪಡೆದು, ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತಂದಿರುತ್ತಾನೆ.
ಶಿವಮೊಗ್ಗ ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಯಾದ ಜೈನ್ ಪಬ್ಲಿಕ್ ಶಾಲೆ ಸತತ ೫ ವರ್ಷಗಳಿಂದ ಸಿಬಿಎಸ್‌ಸಿ ಪರೀಕ್ಷೆಯಲ್ಲಿ ಶೇ. ೧೦೦ ಫಲಿತಾಂಶ ವನ್ನು ನೀಡುತ್ತಾ ಬಂದಿದ್ದು, ಪ್ರತಿ ವರ್ಷದಂತೆ ೨೦೨೩-೨೪ನೇ ಸಾಲಿನಲ್ಲೂ ಶೇ.೧೦೦ ಫಲಿತಾಂಶ ಪಡೆದಿದೆ.
ಶಿವಮೊಗ್ಗ ಜಿಗೆ ಅತಿ ಹೆಚ್ಚು ಅಂಕಗಳಿಸಿದ ಕೆ.ಎನ್. ವಿನೀತ್ ರಾವ್ ಕನ್ನಡದಲ್ಲಿ ೧೦೦ಕ್ಕೆ ೧೦೦ ಅಂಕ ಗಳಿಸಿರುತ್ತಾನೆ. ಶೇ.೧೦೦ ಫಲಿತಾಂಶಕ್ಕೆ ಕಾರಣಕರ್ತರಾದ ಜೈನ್ ಪಬ್ಲಿಕ್ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲೆ ಪ್ರಿಯದರ್ಶಿನಿ ಎನ್, ಸಿಓಓ ಸುಮಂತ್ ಆರ್ , ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು ಅಭಿನಂದಿಸುತ್ತಾರೆ.