ಡಿಕೆಶಿ ಜನ್ಮದಿನ: ಪ್ರತಿಭಾ ಪುರಸ್ಕಾರ- ಹಿರಿಯ ಕಾಂಗ್ರೆಸ್ಸಿಗರಿಗೆ ಸನ್ಮಾನ…

Mohan

ಶಿವಮೊಗ್ಗ : ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ೬೪ನೇ ಹುಟ್ಟುಹಬ್ಬದವನ್ನು ಮೇ ೧೫ರ ನಾಳೆ ಆಚರಿಸಲಾಗು ವುದು ಎಂದು ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿ ಗಳ ಬಳಗದ ಜಿಧ್ಯಕ್ಷ ಆರ್. ಮೋಹನ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ೨೦೦೧ರಲ್ಲಿ ಅಖಿಲ ಕರ್ನಾಟಕ ಡಿ.ಕೆ. ಶಿವ ಕುಮಾರ್ ಅಭಿಮಾನಿಗಳ ಸಂಘ ಪ್ರಾರಂಭಿಸಿದೆವು. ಅಂದಿನಿಂದ ಸಂಘವನ್ನು ಕ್ರಿಯಾಶೀಲವಾಗಿ ಬೆಳೆಸುತ್ತ ಬಂದಿzವೆ. ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ನಮಗೆ ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹಿ ಸುತ್ತಾ ಬಂದಿz ರೆಂದರು.
ಡಿಕೆಶಿ ಅವರ ಹುಟ್ಟುಹಬ್ಬ ನಿಮಿತ್ತ ಮೇ ೧೫ರ ನಾಳೆ ಬೆಳಿಗ್ಗೆ ೧೦ ಗಂಟೆಗೆ ಜೆಪಿಎನ್ ರಸ್ತೆಯ ಸರ್ವಸಿದ್ದಿ ವಿನಾಯಕ ದೇವಾಲಯ ದಲ್ಲಿ ಶಿವನಿಗೆ ರುದ್ರಾಭಿಷೇಕ, ಗಣಪತಿ ಪೂಜೆ ನೆರವೇರಿಸಲಾಗುವುದು. ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹಕ್ಕಿಪಿಕ್ಕಿ ಕ್ಯಾಂಪಿನ ವಿದ್ಯಾರ್ಥಿಗಳು ಸೇರಿ ದಂತೆ ಸುಮಾರು ೩೫ ವಿದ್ಯಾರ್ಥಿ ಗಳನ್ನು ಸನ್ಮಾನಿಸಲಾ ಗುವುದು. ಈ ವಿದ್ಯಾರ್ಥಿಗಳಿಗೆ ಬ್ಯಾಗ್, ಪುಸ್ತಕ ಮತ್ತು ಇನ್ನಿತರ ಪರಿಕರಗಳನ್ನು ನೀಡಲಾಗುವುದು ಎಂದರು.
ಹಿರಿಯ ಕಾಂಗ್ರೆಸ್ ಮುಖಂಡರಾದ ಎಲ್. ರಾಮೇಗೌಡ, ಎನ್.ಉಮಾಪತಿ, ಎಸ್.ಪಿ. ಶೇಷಾದ್ರಿ, ಎಸ್.ಆರ್. ಸೂರಪ್ಪ, ಸಿದ್ದಪ್ಪ, ಆಫ್ರಿದಿ ಮುಂತಾದವರನ್ನು ಸನ್ಮಾನಿಸಲಾ ಗುವುದು ಎಂದರು.
ಪ್ರಮುಖರಾದ ಭದ್ರಾವತಿ ಗಣೇಶ್, ಪ್ರಕಾಶ್, ಸಿದ್ದಪ್ಪ, ಲೋಕೇಶ್,ಶಂಕರನಾಯಕ, ದೇವೇಂದ್ರಪ್ಪ, ಸತ್ಯನಾರಾಯಣ ಮುಂತಾದವರು ಉಪಸ್ಥಿತರಿ ದ್ದರು.