ಯೋಗಾಸನ ಏಕಾಗ್ರತೆ, ಆತ್ಮವಿಶ್ವಾಸಕ್ಕೆ ಸಹಕಾರಿ:ಸಂಧ್ಯಾ

11sp1

ಸಾಗರ : ಯೋಗಾಸನ ಅಭ್ಯಾಸ ಕೇವಲ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲ, ಅದು ಮನಸ್ಸಿನ ಏಕಾಗ್ರತೆ ಹಾಗೂ ನಮ್ಮ ಆತ್ಮವಿಶ್ವಾಸಕ್ಕೆ ಸಹಕಾರಿ ಯಾಗಿದೆ ಎಂದು ಅಂತರಾಷ್ಟ್ರೀಯ ಯೋಗಪಟು ಸಂಧ್ಯಾ ಎಂ.ಎಸ್. ಹೇಳಿದರು.
ಪಟ್ಟಣದ ದಾಮೋದರ ಹಾರ್ಡ್‌ವೇರ್‌ನ ಸಭಾಂಗಣದಲ್ಲಿ ಚಿಕ್ಕ ಮಕ್ಕಳಿಗಾಗಿ ಆರಂಭಿಸಲಾದ ಶ್ರೀ ಗುರು ಸಹನ ಯೋಗ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿ, ಕ್ರಿಯಾಶೀಲ ಬದುಕಿಗೆ ಯೋಗ ಅತ್ಯಗತ್ಯ ಎಂದರು.
ಮಕ್ಕಳು ಬಾಲ್ಯದ ಯೋಗಾಸನ ಅಭ್ಯಾಸ ಮಾಡಿಕೊಳ್ಳ ಬೇಕು. ಇದು ಅವರ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಯೋಗದಿಂದ ಮನಸ್ಸಿನ ಏಕಾಗ್ರತೆ ಉಂಟಾಗುವುದರಿಂದ ವಿದ್ಯಾಭ್ಯಾಸಕ್ಕೂ ಅನುಕೂಲವಾಗ ಲಿದೆ. ನೆನಪಿನ ಶಕ್ತಿಗೆ ಪ್ರೇರಣೆ ಒದಗಲಿದೆ. ಮಕ್ಕಳು ಈ ಯೋಗ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಉಪನ್ಯಾಸಕ ಎಲ್.ಎಂ. ಹೆಗಡೆ ಮಾತನಾಡಿ, ಯೋಗಗುರು ರಾಜೇಶ್ ಅವರ ನೇತೃತ್ವದಲ್ಲಿ ಆರಂಭಗೊಂಡ ಯೋಗ ಕೇಂದ್ರ ಮುಂದೊಂದು ದಿನ ಪ್ರತಿ ಬಡಾವಣೆಯಲ್ಲೂ ಆರಂಭಗೊಳ್ಳು ವಂತಾಗಲಿ. ಪ್ರತಿಯೊಬ್ಬರೂ ಯೋಗದ ಮಹತ್ವವನ್ನು ಅರಿತು ಕೊಳ್ಳಬೇಕು ಎಂದರು.
ಜೈ ಗುರುದೇವ್ ಯೋಗ ಕೇಂದ್ರದ ಸಂಚಾಲಕ ಜಿ.ಕೆ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಅಂತರ ರಾಷ್ಟ್ರೀಯ ಯೋಗಪಟು ಸಂಧ್ಯಾ ಎಂ.ಎಸ್.ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜೈ ಗುರುದೇವ್ ಯೋಗ ಕೇಂದ್ರದ ಸದಸ್ಯರಾದ ಸಂಧ್ಯಾ, ದಾಕ್ಷಾಯಿಣಿ, ಶಾರದಾ, ದಾಮೋದರ ಹಾರ್ಡ್‌ವೇರ್‌ನ ಸಂಧ್ಯಾ, ಉಪನ್ಯಾಸಕ ರಾಜೇಶ್, ಪ್ರವೀಣ್ ರಾಯ್ಕರ್, ತಿಮ್ಮಪ್ಪ, ಲಕ್ಷ್ಮಣ್ ಮತ್ತಿತರರು ಹಾಜರಿದ್ದರು.
ಯೋಗಗುರು ಸಂಧ್ಯಾ ಅವರ ಶಿಷ್ಯರು ಯೋಗಾಸನ ಪ್ರದರ್ಶಿಸಿದರು.