ಮೇ 11: ಇಷ್ಟಲಿಂಗ ಪೂಜೆ – ಧರ್ಮಸಭೆ…
ನ್ಯಾಮತಿ : ತಾಲೂಕಿನ ಚೀಲೂರು ಗ್ರಾಮದ ಶ್ರೀ ಬಸವೇಶ್ವರ ದೇಗುಲದಲ್ಲಿ ಬಸವ ಜಯಂತಿಯ ಅಂಗವಾಗಿ ಶೀಶೈಲ ಪೀಠ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಸಾನಿಧ್ಯದಲ್ಲಿ ಇಷ್ಟಲಿಂಗ ಪೂಜೆ ಹಾಗೂ ಧರ್ಮಸಭೆಯನ್ನು ಮೇ ೧೧ರ ಶನಿವಾರ ಬೆಳಿಗ್ಗೆ ಆಯೋಜಿಸಲಾ ಗಿದೆ ಎಂದು ಶ್ರೀ ಬಸವೇಶ್ವರ ಸ್ವಾಮಿ ದೇಗುಲ ಸೇವಾ ಸಮಿತಿಯ ಪದಾಧಿಕಾರಿಗಳು ತಿಳಿಸಿದರು.
ಅವರು ನ್ಯಾಮತಿ ತಾಲೂಕಿನ ಚೀಲೂರು ಗ್ರಾಮದ ಶ್ರೀ ಬಸವೇಶ್ವರ ದೇಗುಲದಲ್ಲಿ ಗುರುವಾರ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಗೊಳಿಸಿ ಮಾತನಾಡಿದರು.
ಬಸವ ಜಯಂತಿ ನಿಮಿತ್ತ ಶ್ರೀ ಬಸವೇಶ್ವರ ದೇಗುಲದಲ್ಲಿ ಶೀಶೈಲ ಪೀಠ ಡಾ.ಚನ್ನಸಿದ್ದರಾಮ ಪಂಡಿತಾ ರಾಧ್ಯ ಶಿವಾಚಾರ್ಯ ಸ್ವಾಮೀಜಿ ಯವರ ಸಾನಿಧ್ಯದಲ್ಲಿ ಶ್ರೀ ಬಸವೇಶ್ವರ ಸ್ವಾಮಿಯ ಶಿಲಾಮೂರ್ತಿಗೆ ರುದ್ರಾಬೀಷೇಕ , ಮತ್ತು ಸ್ವಾಮೀಜಿಯವರ ಇಷ್ಟಲಿಂಗ ಪೂಜೆ , ಬಿಲ್ವಾರ್ಚನೆ ಮಹಾ ಮಂಗಳಾರತಿ ನಡೆದು ಧರ್ಮ ಸಬೆ ನಡೆಯಲಿದ್ದು ಧರ್ಮಸಭೆಯಲ್ಲಿ ಹೊನ್ನಾಳಿ ಶ್ರೀ ಚನ್ನಪಸ್ವಾಮೀಜಿ ಹಿರೇಕಲ್ಮಠದ ಡಾ.ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ರಾಂಪುರ ಹಾಲ ಸ್ವಾಮೀಜಿ ಮಠದ ಶಿವಕುಮಾರ ಸ್ವಾಮೀಜಿ ಭಾಗವಹಿಸಿಲಿದ್ದು ಇದೇ ಸಂದರ್ಭದಲ್ಲಿ ದೇಗುಲ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಿದ ಧರ್ಮಬಂಧುಗಳಿಗೆ ಗುರುರಕ್ಷೇ ನೀಡಿ ಗೌರವಿಸಲಾಗುವುದು ಎಂದು ಶ್ರೀ ಬಸವೇಶ್ವರ ಸ್ವಾಮಿ ದೇಗುಲ ಸೇವಾ ಸಮಿತಿಯ ಪದಾಧಿಕಾರಿಗಳು ತಿಳಿಸಿzರೆ.
ಆಹ್ವಾನ ಪತ್ರಿಕೆಯನ್ನು ಬಿಡುಗಡೆಯ ಸಂದರ್ಭದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ದೇಗುಲ ಸೇವಾ ಸಮಿತಿಯ ಪದಾಧಿಕಾರಿಗಳಾದ ಕೋರಿ ಯತೀಶ್ ಚಂದ್ರ , ಜವಳಿ ಪ್ರದೀಪ್, ಜವಳಿ ಚಂದ್ರಶೇಖರಪ್ಪ, ಡಿಶ್ ಬಸವರಾಜು , ಗೀರೀಶ್ ಎಚ್.ಬಿ. , ಸಿ.ಕೆ.ಮಲ್ಲಿಕಾರ್ಜುನ, ಎಚ್.ವಿ.ಚೇತನ್ ಸೇರಿದಂತೆ ಇತರರು ಇದ್ದರು.