ಸಿದ್ದಗಂಗಾ ಶಾಲೆಗೆ ಶೇ. 100 ಫಲಿತಾಂಶ: ಗಾನವಿ ಜಿಲ್ಲೆಗೆ ಟಾಪರ್…

siddaganga

ದಾವಣಗೆರೆ : ೨೦೨೩-೨೪ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ನಗರದ ಶ್ರೀ ಸಿದ್ಧಗಂಗಾ ಪ್ರೌಢ ಶಾಲೆಗೆ ಶೇ.೧೦೦ ಫಲಿತಾಂಶ ಲಭಿಸಿದೆ.
ಪರೀಕ್ಷೆಗೆ ಹಾಜರಾದ ೩೦೬ ವಿದ್ಯಾರ್ಥಿಗಳೂ ಉತ್ತೀರ್ಣರಾ ಗಿದ್ದು, ೬೨೫ಕ್ಕೆ ೬೨೦ ಅಂಕಗಳನ್ನು ಪಡೆದ ಗಾನವಿ ಹೆಚ್.ಜಿ. ಜಿ ಮಟ್ಟದಲ್ಲಿ ಪ್ರಥಮ ಸ್ಥಾನ ಹಾಗೂ ರಾಜ್ಯಮಟ್ಟದಲ್ಲಿ ೬ನೇ ಸ್ಥಾನ ಗಳಿಸಿzಳೆ. ನಗರದ ಗಿರೀಶ್ ಹೆಚ್.ಎನ್. ಮತ್ತು ಜ್ಯೋತಿ ಡಿ.ಎಸ್. ದಂಪತಿಗಳ ಪುತ್ರಿಯಾದ ಪ್ರತಿಭಾನ್ವಿತೆ ಗಾನವಿ ಕನ್ನಡ ೧೨೪, ಇಂಗ್ಲೀಷ್ ೯೮, ಹಿಂದಿ ೧೦೦, ಗಣಿತ ೧೦೦, ವಿeನ ೯೮, ಸಮಾಜ ೧೦೦, ಒಟ್ಟು ಶೇ. ೯೯.೨೦ಗಳಿಸಿzಳೆ.
ಇನ್ನುಳಿದಂತೆ ವರುಣ್ ಆರ್. ೬೧೧, ಸನಾ ಅಜೀಂ ೬೧೦, ಉಮ್ಮೆಹಫ್ಸಾ ೬೦೭, ಚಂದನ್ ಎಂ.ಡಿ. ಮತ್ತು ಚೇತನ ಎಂ. ೬೦೬, ದೀಪಾ ಬಿ.ಜೆ., ಸನತ್ ಟಿ., ಸಿಂಚನ ಕೆ., ಸಿರಿ ಮತ್ತು ಯಜ್ಞಶ್ರೀ ೬೦೪ ಅಂಕಗಳನ್ನುಗಳಿಸಿzರೆ.
೧೧ ವಿದ್ಯಾರ್ಥಿಗಳು ೬೦೦ಕ್ಕಿಂತ ಹೆಚ್ಚು ಅಂಕ ಗಳಿದರೆ, ೪೭ ವಿದ್ಯಾರ್ಥಿಗಳು ಶೇ.೯೦ಕ್ಕಿಂತ ಅಧಿಕ, ೮೩ ವಿದ್ಯಾರ್ಥಿಗಳು ಶೇ. ೮೫, ೧೯೦ ವಿದ್ಯಾರ್ಥಿಗಳು ಶೇ. ೬೦, ೩೩ ವಿದ್ಯಾರ್ಥಿಗಳು ಶೇ೫೦ ಅಂಕಗಳನ್ನು ಪಡೆದಿzರೆ.
೧೨ ವಿದ್ಯಾರ್ಥಿಗಳು ಕನ್ನಡದಲ್ಲಿ ೧೨೫ಕ್ಕೆ ೧೨೫ಅಂಕ, ೨೮ ವಿದ್ಯಾರ್ಥಿಗಳು ಹಿಂದಿಯಲ್ಲಿ, ಓರ್ವ ವಿದ್ಯಾರ್ಥಿ ಗಣಿತದಲ್ಲಿ, ನಾಲ್ವರು ವಿದ್ಯಾರ್ಥಿಗಳು ಸಮಾಜದಲ್ಲಿ ೧೦೦ಕ್ಕೆ ೧೦೦ ಅಂಕಗಳನ್ನು ಪಡೆದಿzರೆ.
ಪೂರ್ಣಅಂಧ ವಿದ್ಯಾರ್ಥಿ ನಿಯುಕ್ತಿ ಪಿ. ೫೯೩ ಅಂಕಗಳನ್ನು, ಕೈಕಾಲುಗಳ ಬೆಳವಣಿಗೆ ಇಲ್ಲದ ಗೋವರ್ಧನನಾಯ್ಕ ಎಂಬ ವಿದ್ಯಾರ್ಥಿ ೩೭೨ ಅಂಕಗಳನ್ನು ಪಡೆದು ಉತ್ತೀರ್ಣರಾಗಿರುವುದು ಈ ಬಾರಿಯ ವಿಶೇಷ.
೧೦೦ಕ್ಕೆ ೧೦೦ ಫಲಿತಾಂಶ ನೀಡಿರುವ ಎಲ್ಲ ೩೦೬ ವಿದ್ಯಾರ್ಥಿ ಗಳ ಅಭೂತಪೂರ್ವ ಸಾಧನೆಗಾಗಿ ಮಕ್ಕಳ ಪಾಲಕರಿಗೆ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಆಡಳಿತ ಮಂಡಳಿ ಯವರು ಅಭಿನಂದಿಸಿzರೆ.