ಸಂಸ್ಕಾರದ ಕೊರತೆಯೇ ಮಾನವೀಯ ಮಲ್ಯಗಳ ಮಾರಣಹೋಮಕ್ಕೆ ಕಾರಣ…
ಹೂವಿನಹಡಗಲಿ: ಸರ್ವ ಶ್ರೇಷ್ಠನೆಂದು ಹಮ್ಮಿನಿಂದ ಬೀಗುವ ಮನುಜ ಮಾನವೀಯ ಮಲ್ಯ ಅರಿಯದೆ, ಅಮಾನವೀಯ, ಮೃಗೀಯ ರೀತಿಯಲ್ಲಿ ಕ್ರೂರ ಮಗಗಳಿಗಿಂತ ಕೀಳಾಗಿ ನಡೆಯುತ್ತಿರುವುದು ನೋವಿನ ಸಂಗತಿ ಎಂದು ಸಾಹಿತಿ ಎಂಪಿಎಂ ಕೊಟ್ರಯ್ಯ ವಿಷಾದಿಸಿದರು.
ಕರ್ನಾಟಕ ರಾಜ್ಯ ಬರಹಗಾರರ ಸಂಘ(ರಿ) ಇವರು ಹೂವಿನಹಡಗಲಿಯ ಶಿಕ್ಷಕಿ ಶ್ರೀಮತಿ ರೇಣುಕ ಅವರ ಮನೆಯಲ್ಲಿ ಆಯೋಜಿಸಿದ್ದ ಕಾವ್ಯ ಗಾಯನ ಹಾಗೂ ವಿಮರ್ಶೆ ಕಾರ್ಯಕ್ರಮದಲ್ಲಿ ಮಾನವೀಯ ಮಲ್ಯಗಳ ಕುರಿತು ಮಾತನಾಡಿದ ಅವರು, ಪ್ರಸ್ತುತ ದಿನ ಮಾನದಲ್ಲಿ ಸ್ವಾರ್ಥ, ದ್ವೇಷ, ಭ್ರಷ್ಠತೆ, ಅತ್ಯಾಚಾರ ಅನೈತಿಕತೆ ಹೆಚ್ಚುತ್ತಿದ್ದು, ಸಹಾಯ, ಸಹಕಾರ, ಸಹಬಾಳ್ವೆ, ಮಮತೆ, ಪ್ರೀತಿಯಂತಹ ಸದ್ಗುಣಗಳು ಕಣ್ಮರೆಯಾಗಿವೆ. ಪರಿಣಾಮ ಪ್ರಾಕೃತಿಕ ಅಸಮತೋಲನೆಯಿಂದ ಬದುಕು ದುಸ್ಥರವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ರೇಣುಕ ಅವರು ಮಾತನಾಡಿ, ಇದೊಂದು ವಿನೂತನ ಹಾಗೂ ಸಮಾಜಮುಖಿ ಚಿಂತನ ಕಾರ್ಯಕ್ರಮ. ಕವಿ/ ಸಾಹಿತಿಗಳು ತಮ್ಮ ಹರಿತವಾದ ಸಾಹಿತ್ಯದ ಮೂಲಕ ಸಮಾಜದ ಲೋಪ ದೋಷಗಳನ್ನು ತಿದ್ದುವಲ್ಲಿ ಪ್ರಯತ್ನಿಸಬೇಂದರು.
ಬರಹಗಾರರ ಬಳಗದ ವೇದಿಕೆಯ ಅಧ್ಯಕ್ಷ ಮಧು ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ತಮ್ಮ ವೈವಿಧ್ಯಮಯ ಸಾಹಿತ್ಯ ಸಾಧನೆಯಿಂದ ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ಬಿ.ತಾರಾಸಿಂಗ್, ಶ್ರೀಮತಿ ಬಸಮ್ಮ ಹಿರೇಮಠ, ಕು.ಮಾನಸ, ಮಂಜುನಾಥ ಮಾಗಳ, ನಾಗರಾಜ ಸಜ್ಜಿ, ಚಿನ್ನಸ್ವಾಮಿ ಹಾಗೂ ಶ್ರೀಪತಿ ಹವಳದ ಇವರಿಗೆ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕವಿಗಳಾದ ಹೆಚ್ ಎಂ ಕೊಟ್ರಯ್ಯ, ಶ್ರೀಮತಿ ಶೋಭಾ ಮಲ್ಕಿ ಒಡೆಯರ್, ಶ್ರೀಮತಿ ಗೌರಮ್ಮ, ಶ್ರೀಮತಿ ನಯನ ಮಲ್ಲಿನಾಥ, ಚನ್ನವೀರ ಸ್ವಾಮಿ, ಅಶೋಕ ಅರ್ಕಸಾಲಿ ಹಾಗೂ ವೀರಭದ್ರಯ್ಯ ಕವನ ವಾಚಿಸಿದರೆ ಅವುಗಳಿಗೆ ರಾಗ ಸಂಯೋಜನೆ ಯಿಂದ ಮೆರಗುಕೊಟ್ಟವರು ಶ್ರೀಮತಿ ರೇಣುಕಾ ಸಂತೋಷ್, ಹನುಮಾನಾಯ್ಕ , ಬಸವರಾಜ್, ಚಂದ್ರಪ್ಪ ಹಾಗೂ ಕುಮಾರಿ ಮಾನಸ ನೆರವೇರಿಸಿದರು.
ಶ್ರೀ ಶೇಕಪ್ಪ ಲಮಾಣಿ , ಮನೇಶ ಬಡಿಗೇರ, ಚಂದ್ರಶೇಖರ್ ಹೆಚ್, ಕೊಟ್ರಪ್ಪ ಕವನಗಳ ವಿಮರ್ಶಿಸಿದರು.