ಆಪ್‌ನಿಂದ ದೆಹಲಿ ಮಾದರಿಯ ಅಭಿವೃದ್ಧಿ ಕುರಿತು ಗ್ಯಾರೆಂಟಿ ಕಾರ್ಡ್ ಬಿಡುಗಡೆ…

ಶಿವಮೊಗ್ಗ: ರಾಜ್ಯದ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಸಮಸ್ತ ಕರ್ನಾಟಕದ ಅಭಿವೃದ್ಧಿಗೆ ಗ್ಯಾರಂಟಿ ನೀಡಲಾಗುವುದು ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಉಪಾಧ್ಯಕ್ಷ ಉಮಾಶಂಕರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಆಪ್ ಕರ್ನಾಟಕ ಗ್ಯಾರಂಟಿ ಕಾರ್ಡ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪಕ್ಷವು ದೆಹಲಿ ಹಾಗೂ ಪಂಜಬ್‌ನಲ್ಲಿ ಅಡಳಿತ ನಡೆಸುತ್ತಿದ್ದು, ಅಲ್ಲಿನ ಮಾದರಿಯಂತೆ ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಅಭಿವದ್ಧಿಪಡಿಸಲಾಗುವುದು ಎಂದ ಅವರು, ದೆಹಲಿಯಲ್ಲಿ ಗ್ಯಾರಂಟಿ ಕಾರ್ಡ್ ವಿತರಣೆಯಿಂದಾಗಿ ೨ನೇ ಬಾರಿಗೆ ಪಕ್ಷ ಅಧಿಕಾರಕ್ಕೆ ಬಂದಿದೆ. ಅಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಜನರು ಮೆಚ್ಚಿಕೊಂಡಿzರೆ. ಅಲ್ಲಿನ ಅಭಿವೃದ್ಧಿ ದೇಶಕ್ಕೆ ಮಾದರಿಯಾಗಿದೆ ಹಾಗೂ ಪಂಜಬ್‌ನಲ್ಲೂ ಸಹ ಆಡಳಿತ ನಡಸುತ್ತಿರುವ ಪಕ್ಷ ಅಲ್ಲಿಯೂ ದೆಹಲಿ ಮಾದರಿಯಂತೆ ಅಭಿವೃದ್ಧಿಯಾಗುತ್ತಿದೆ ಎಂದರು.
ಶಿವಮೊಗ್ಗ ನಗರ ಕ್ಷೇತ್ರದ ಪಕ್ಷದ ಅಭ್ಯರ್ಥಿ ಟಿ. ನೇತ್ರಾವತಿ ಅವರು ಶಿವಮೊಗ್ಗದ ನಗರದ ಪ್ರಣಾಳಿಕೆ ಹಾಗೂ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಿ ಮಾತನಾಡಿ, ಇದೇ ಪ್ರಥಮ ಬಾರಿಗೆ ಚುನಾವಣೆ ಎದುರಿಸುತ್ತಿದ್ದು, ದೆಹಲಿ ಹಾಗೂ ಪಂಜಬ್‌ನಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ದೇಶಾದ್ಯಂತ ಮನೆಮಾತಾಗಿದ್ದು, ಭ್ರಷ್ಟಾಚಾರರಹಿತ ಸರ್ಕಾರ ನಡೆಸುತ್ತಿದ್ದು, ಶಿವಮೊಗ್ಗ ನಗರದ ಮತದಾರರು ತಮಗೆ ಬೆಂಬಲಿಸುವುದರ ಮೂಲಕ ಮತ ನೀಡಿ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಪಕ್ಷದ ಶೂನ್ಯ ಭ್ರಷ್ಟಾಚಾರದ, ವಿದ್ಯುತ್ ಶಕ್ತಿ, ಶಿಕ್ಷಣ, ಆರೋಗ್ಯ, ಉದ್ಯೋಗಗಳು ಮತ್ತು ಉದ್ಯೋಗಕ್ಕಾಗಿ, ನಾಗರಿಕ ಸೇವೆಗಳ, ಸಮಾಜ ಕಲ್ಯಾಣದ, ಯುವಕರಿಗೆ, ಮಹಿಳೆಯರಿಗೆ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡಲಾಯಿತು. ಸಮಾಜವಾದಿ ಹಿರಿಯ ನಾಯಕ ಕಲ್ಲೂರು ಮೇಘರಾಜ್ ರೈತರ ಕಾರ್ಡ್ ಬಿಡುಗಡೆ ಮಾಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಜಿಧ್ಯಕ್ಷ ಕಿರಣ್, ಪ್ರಧಾನ ಕಾರ್ಯದರ್ಶಿ ನಜೀರ್ ಅಹ್ಮದ್, ಪ್ರಮುಖರಾದ ಸುರೇಶ್ ಕೋಟೇಕಾರ್, ಮುಕ್ಬುಲ್ ಅಹ್ಮದ್ ಇನ್ನಿತರರು ಉಪಸ್ಥಿತರಿದ್ದರು.