4NMT2a

ನ್ಯಾಮತಿ: ಲೋಕಸಭಾ ಚುನಾವಣೆ ನಿಮಿತ್ತ ಸಾರ್ವಜನಿಕರು ನಿರ್ಭಿತದಿಂದ ಮತಚಲಾವಣೆಗಾಗಿ ಮತ್ತು ಅಹಿತಕರ ಘಟನೆ ಜರುಗದಂತೆ ಮುಂಜಗ್ರತ ಕ್ರಮವಾಗಿ ನ್ಯಾಮತಿ ಪಟ್ಟಣದಲ್ಲಿ ಪೊಲೀಸ್ ಸಿಬ್ಬಂದಿ ಗಳು ಪಟ್ಟಣದಲ್ಲಿ ಪಥ ಸಂಚಲನ ನಡೆಸಿದರು.
ನ್ಯಾಮತಿ ಪಟ್ಟಣದ ಪೊಲೀಸ್ ಠಾಣೆಯಿಂದ ಪ್ರಾರಂಭಗೊಂಡ ಪಥ ಸಂಚಲನವು ಸುರಹೊನ್ನೆ , ತಾಲೂಕು ಕಚೇರಿಯ ರಸ್ತೆ , ಕಿತ್ತೂರು ರಾಣಿ ಚನ್ನಮ್ಮ ವತ್ತ , ಕೋಡಿಕೊಪ್ಪ ರಸ್ತೆ, ಕಲ್ಮಠ ರಸ್ತೆ , ಅರಳಿಕಟ್ಟೆ ವತ್ತ , ವೀರಭದ್ರೇಶ್ವರ ರಸ್ತೆ , ಕುಂಬಾರ ಬೀದಿ , ಮಹಂತೇಶ್ವರ ರಸ್ತೆ , ನೆಹರು ರಸ್ತೆಯ ಮೂಲಕ ಮರಳಿ ಪೊಲೀಸ್ ಠಾಣೆ ತಲುಪಿ ಮುಕ್ತಾಯಗೊಂಡಿತು.
ಈ ವೇಳೆ ಮಾತನಾಡಿದ ನ್ಯಾಮತಿ ಪೊಲೀಸ್ ಠಾಣಾ ಪಿಎಸ್‌ಐ ಬಿ.ಎಲ್. ಜಯಪ್ಪ ನಾಯ್ಕ, ಮೇ ೭ ರಂದು ನಡೆಯುವ ಚುನಾವಣೆಯ ನಿಮಿತ್ತ ಪಟ್ಟಣದಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಮತದಾರರು ನಿರ್ಭಿತಿಯಿಂದ ಮತದಾನ ಮಾಡಬೇಕು ಚುನಾವಣಾ ಸಂದರ್ಭದಲ್ಲಿ ಯಾವುದೇ ರೀತಿ ಅಹಿತಕರ ಘಟನೆ ಗಳು ಜರುಗದಂತೆ ಮುಂಜಗ್ರತ ಕ್ರಮ ವಹಿಸಲಾಗಿದೆ ಎಂದರು.
ನ್ಯಾಮತಿ ಪೊಲೀಸ್ ಠಾಣಾ ಪಿಎಸ್‌ಐ ಪ್ರವೀಣ ಸೇರಿದಂತೆ ರೈಲ್ವಿ ಪೊಲೀಸ್ ಸಿಬ್ಬಂದಿಗಳಿದ್ದರು.