ವಾಲ್ಮಿಕಿ ಸಮಾಜದಿಂದ ಗೀತಾ ಶಿವರಾಜ್‌ಕುಮಾರ್‌ಗೆ ಬೆಂಬಲ…
ಶಿವಮೊಗ್ಗ: ಪರಿಶಿಷ್ಟ ಪಂಗಡಕ್ಕೆ ಕಾಂಗ್ರೆಸ್ ಪಕ್ಷವು ನೀಡಿರುವ ಕೊಡುಗೆ ಮತ್ತು ರಾಜಕೀಯ ಪ್ರಾತಿನಿಧ್ಯ ಪರಿಗಣಿಸಿ ರಾಜ್ಯ ವಾಲ್ಮೀಕಿ ಸಮಾಜವು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ನೀಡಬೇಕಿದೆ ಎಂದು ಕೆಪಿಸಿಸಿ ಎಸ್ಟಿ ಘಟಕದ ರಾಜಧ್ಯಕ್ಷ ಎಂ . ವಿಶ್ವನಾಯಕ್ ಸುದ್ದಿಗೋಷ್ಟಿಯಲ್ಲಿ ಮನವಿ ಮಾಡಿzರೆ.
ರಾಜ್ಯದ ವಾಲ್ಮೀಕಿ ಸಮುದಾಯವು ಅತೀ ಹೆಚ್ಚಾಗಿ ಕಾಂಗ್ರೆಸ್ ಪಕ್ಷದ ಜೊತೆಯಲ್ಲಿ ಗುರುತಿಸಿಕೊಂಡಿದೆ. ಅದೇ ರೀತಿ ಶಿವಮೊಗ್ಗ ಜಿ ವಾಲ್ಮೀಕಿ ಸಮುದಾಯವು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರ ಪರ ಒಲವು ಹೊಂದಿರುವುದಲ್ಲದೆ, ಅವರಿಗೆ ಸಮಾಜದ ಜನರು ಅತೀ ಹೆಚ್ಚು ಮತ ಹಾಕಿಸಲು ಪ್ರಚಾರ ನಡೆಸಲಿದೆ ಎಂದು ಪ್ರಕಟಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ವಾಲ್ಮೀಕಿ ಸಮುದಾಯಕ್ಕೆ ಹೆಚ್ಚಿನ ಅಧ್ಯತೆ ನೀಡಿ, ಸರ್ಕಾರದಲ್ಲಿ ಮೂರು ಮಂತ್ರಿ ಸ್ಥಾನ ನೀಡಿದ್ದು, ಹಾಗೆಯೇ ನಿಗಮಮಂಡಳಿಗಳಿಗೂ ವಾಲ್ಮೀಕಿ ಸಮುದಾಯವರನ್ನು ಅದ್ಯತೆ ಆಗಿ ತೆಗೆದುಕೊಂಡು ಆರು ಮಂದಿ ಶಾಸಕರುಗಳಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿದೆ. ಇದೆಲ್ಲವನ್ನು ಪರಿಗಣಿಸಿ ರಾಜ್ಯ ವಾಲ್ಮೀಕಿ ಸಮಾಜವು ಕಾಂಗ್ರೆಸ್ ಬೆಂಬಲಕ್ಕೆ ನಿಲ್ಲುವುದು ಕರ್ತವ್ಯವೇ ಆಗಿದೆ ಎಂದು ಹೇಳಿದರು.
ಜಿ ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷ ಶ್ರೀಧರ್ ಕೆ.ಆರ್, ಉಪಾಧ್ಯಕ್ಷ ಲೋಕಪ್ಪ ಎನ್ ಟಿ. ನಾಗೀಹಳ್ಳಿ, ಗ್ಯಾರಂಟಿ ಅನುಷ್ಟ್ಟಾನ ಸಮಿತಿ ಉಪಾಧ್ಯಕ್ಷ. ಬಸವರಾಜಪ್ಪ ಎಂ.ಎಸ್, ಕೆಪಿಸಿಸಿ ಎಸ್ಟಿ ವಿಭಾಗದ ಪ್ರಧಾನ ಕಾರ್ಯದರ್ಶಿ ವಿರೇಶ್ ಜೋಗಿ ಹಳ್ಳಿ, ಸಂಜೀವ್ ಸೇರಿದಂತೆ ಮತ್ತಿತರರು ಇದ್ದರು.