ದೇಶ ಕಾಯುವ ಕಾಯಕ ಸೈನಿಕನದ್ದು; ದೇಶ ಕಟ್ಟುವ ಕೆಲಸ ಮತದಾರರದ್ದು…

sveep-sharada-andhara-kendr

ಶಿವಮೊಗ್ಗ : ಭಾರತೀಯ ಸಂವಿಧಾನ ನಮಗೆ ಮತದಾನ ಮಾಡುವ ಹಕ್ಕನ್ನು ನೀಡಿದ್ದು, ನಾವೆಲ್ಲರೂ ಮತದಾನ ವನ್ನು ನಮ್ಮ ಕರ್ತವ್ಯ ಎಂದು ಭಾವಿಸಿ ಮತದಾನ ಮಾಡೋಣ ಎಂದು ಜಿಪಂ ಮುಖ್ಯ ಯೋಜನಾ ಧಿಕಾರಿ ಗಾಯತ್ರಿ ಕರೆ ನೀಡಿದರು.
ಗೋಪಾಳದ ಶಾರದಾದೇವಿ ಅಂಧರ ವಿಕಾಸ ಶಾಲೆಯಲ್ಲಿ ವಿಶೇಷ ಚೇತನರು ಮತ್ತು ಹಿರಿಯ ನಾಗರೀಕರ ಇಲಾಖೆ, ಶಿವಮೊಗ್ಗ ಜಿ ಜಾಗೃತ ಮತದಾರರ ವೇದಿಕೆ ಹಾಗೂ ಜಿ ಸ್ವೀಪ್ ಸಮಿತಿ ಯಿಂದ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮ ಉಧ್ಘಾಟಿಸಿ ಅವರು ಮಾತನಾಡಿದರು.


ಪ್ರಜಪ್ರಭುತ್ವ ವ್ಯವಸ್ಥೆಯಲ್ಲಿ ಯಾವ ರೀತಿಯ ಸರ್ಕಾರ ರಚಿಸ ಬೇಕು ಎಂಬ ಅಧಿಕಾರ ಪ್ರಜೆಗಳಿಗೆ ಇರುತ್ತದೆ. ದೇಶವನ್ನು ಕಾಯುವ ಕೆಲಸ ಸೈನಿಕ ಮಾಡುತ್ತಾನೆ. ಆದರೆ ದೇಶವನ್ನು ಕಟ್ಟುವ ಕೆಲಸ ಮತದಾನದ ಮೂಲಕ ಆಗಬೇಕು. ಅದಕ್ಕಾಗಿ ೫ ವರ್ಷಕ್ಕೆ ಒಮ್ಮೆ ಬರುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಿ ಸದೃಢ ದೇಶ ಕಟ್ಟುವ ಕೆಲಸವನ್ನು ಮತ ಚಲಾಯಿಸುವ ಮೂಲಕ ನಾವೆಲ್ಲ ಮಾಡಬೇಕು ಎಂದರು.
ಈ ಬಾರಿ ಚುನಾವಣೆಯಲ್ಲಿ ವಿಶೇಷಚೇತನರು ಮತ್ತು ಹಿರಿಯ ನಾಗರೀಕರಿಗೆ ಅನುಕೂಲ ಆಗು ವಂತೆ ವ್ಹೀಲ್ ಚೇರ್, ರ್‍ಯಾಂಪ್ , ಬ್ರೈಲ್ ಲಿಪಿ ಬ್ಯಾಲೆಟ್ ಪೇಪರ್ , ಬ್ಯಾಲೆಟ್ ಬಗ್ಗೆ ಮಾಹಿತಿ ನೀಡುವ ಧ್ವನಿವರ್ಧಕ, ಸನ್ನೆ ಭಾಷೆಯಲ್ಲಿ ಮಾತನಾಡುವವರು ಅಥಾವ ಸನ್ನೆ ಭಾಷೆಯ ವಿಡಿಯೊ ಮೂಲಕ ಮತಗಟ್ಟೆಗಳಲ್ಲಿ ಮತ ಚಲಾಯಿ ಸಲು ಸಹಾಯ ಮಾಡುತ್ತಾರೆ ಹಾಗು ಈ ಭಾರಿ ಪ್ರತಿ ಮತಗಟ್ಟೆ ಯಲ್ಲಿ ವಿಶೇಷ ಚೇತನ ಮತ್ತು ಹಿರಿಯ ನಾಗರಿಕರಿಗೆ ಸಹಾಯ ಮಾಡಲು ಒಬ್ಬ ವಿಶೇಷ ಚೇತನ ಸಿಬ್ಬಂದಿ ನೇಮಕ ಮಾಡಲಾಗಿರು ತ್ತದೆ ಎಂದ ಅವರು ಎಲ್ಲರೂ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸುವಂತೆ ಮನವಿ ಮಾಡಿದರು.
ಸ್ವೀಪ್ ಐಕಾನ್ ದೀಕ್ಷಿತ್ ಮಾತನಾಡಿ, ನಗರ ಭಾಗದಲ್ಲಿ ಮತದಾನ ಮಾಡುವವರ ಸಂಖ್ಯೆ ಯಲ್ಲಿ ಹೆಚ್ಚಳ ಆಗಬೇಕಿದ್ದು, ಪ್ರe ವಂತ ಮತದಾರರೆಲ್ಲರೂ ಮತ ಚಲಾಯಿಸಿ ಎಂದು ಮನವಿ ಮಾಡಿದರು.
ಸ್ವೀಪ್ ಐಕಾನ್ ಜ್ಯೋತಿ ಮಾತನಾಡಿ, ಮತದಾರರು ಯಾವುದೇ ಆಸೆ, ಆಮಿಶಗಳಿಗೆ ಒಳಗಾಗದೆ ಮತ ಚಲಾಯಿಸ ಬೇಕು, ಮತ ಚಲಾಯಿಸುವ ಮೂಲಕ ದೇಶದ ಅಭಿವೃದ್ದಿಯಲ್ಲಿ ಪಾಲ್ಗೊಳ್ಳಬೇಕು ಎಂದರು.
ರಾಜ್ಯ ಮಟ್ಟದ ಸ್ವೀಪ್ ತರಬೇತುದಾರ ನವೀದ್ ಅಹ್ಮದ್ ಪರ್ವೀಜ್ ಮಾತನಾಡಿ, ವಿಶೇಷ ಚೇತನರು ಮತ್ತು ಹಿರಿಯ ನಾಗರೀಕರಿಗೆ ಮತ ಚಲಾಯಿಸಲು ಮೊದಲ ಆದ್ಯತೆ ನೀಡಿ, ಚುನಾವಣಾ ಆಯೋಗ ವಿಶೇಷ ಚೇತನರಿಗೆ ಅನೇಕ ಸವಲತ್ತು ನೀಡಿದೆ. ಅದನ್ನು ಸದುಪಯೋಗ ಪಡಿಸಿಕೊಂಡು ಮತದಾನ ಮಾಡ ಬೇಕು. ವೋಟರ್ ಹೆಲ್ಪ್‌ಲೈನ್ ಆಪ್ ಮೂಲಕ ಚುನಾವಣೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದರು.
ಜಿ ಅಂಗವಿಕಲರ ಕಲ್ಯಾಣಧಿಕಾರಿ ಶಶಿರೇಖಾ ಮಾತನಾಡಿ, ಸಮರ್ಥ ಅಭ್ಯರ್ಥಿ ಯನ್ನು ಆಯ್ಕೆ ಮಾಡಿ ದೇಶದಲ್ಲಿ ಉತ್ತಮ ಸರ್ಕಾರ ನಿರ್ಮಿಸುವ ಕರ್ತವ್ಯ ನಮ್ಮದಾಗಿದ್ದು ಮತದಾನದ ಮೂಲಕ ಈ ಕರ್ತವ್ಯ ನಿರ್ವಹಿಸೋಣ ಎಂದರು.
ಕಾರ್ಯಕ್ರಮದಲ್ಲಿ ವಿಶೇಷಚೇತನ ಮತ್ತು ಹಿರಿಯ ನಾಗರೀಕರಿರು ನೃತ್ಯ ಮತ್ತು ಸನ್ನೆ ಭಾಷೆ ಮೂಲಕ ಮತದಾನ ಕುರಿತು ಜಾಗೃತಿ ಮೂಡಿಸಿದರು. ಪ್ರತಿ ಮತಗಟ್ಟೆಯಲ್ಲಿ ವಿಶೇಷಚೇತನರು ಮತ್ತು ಹಿರಿಯ ನಾಗರೀಕರಿಗೆ ಸಹಾಯ ಮಾಡಲು ನೇಮಿಸಲಾಗಿರುವ ವಿಶೇಷ ಚೇತನ ಮತ್ತು ಹಿರಿಯ ನಾಗರೀಕ ಸಿಬ್ಬಂದಿಗೆ ಇದೇ ಸಂದರ್ಭದಲ್ಲಿ ಗುರುತಿನ ಚೀಟಿ ನೀಡಲಾಯಿತು.
ಈ ಸಂಧರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಕೃಷ್ಣಪ್ಪ , ಕಾರ್ಯದರ್ಶಿ ಪರಮೇಶ್ವರಪ್ಪ, ಜಿಯ ಎಂಆರ್‌ಡಬ್ಲೂ ಮತ್ತು ಬಿಆರ್‌ಡಬ್ಲೂಗಳು , ವಿಶೇಷಚೇತನ ಶಾಲೆಯ ಸಿಬ್ಬಂದಿಗಳು ಹಾಜರಿದ್ದರು.