ಗಲ್ಲಿ ಗಲ್ಲಿಯಲ್ಲಿ ಈಶ್ವರಪ್ಪರಿಂದ ಬಿರುಸಿನ ಪ್ರಚಾರ…

kse

ಶಿವಮೊಗ್ಗ : ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಅವರು ಅಬ್ಬರದ ಕ್ಯಾಂಪೇನ್ ಕೈಗೊಂಡಿದ್ದು, ಶಿವಮೊಗ್ಗ ನಗರದ ಪ್ರತಿಷ್ಠಿತ ಕಾರ್ಖಾನೆಗಳಲ್ಲಿ ಒಂದಾದ ಪರ್ಫೆಕ್ಟ್ ಅಲಾಯ್ಸ್ ಕಾರ್ಖಾನೆಗೆ ಭೇಟಿಕೊಟ್ಟು ಅಲ್ಲಿನ ಕಾರ್ಮಿಕರಿಗೆ ತಮಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
ನನಗೆ ಜೋಡಿ ಕಬ್ಬಿನ ಜಲ್ಲೆ ಜೊತೆ ಇರುವ ರೈತನ ಚಿಹ್ನೆ ದೊರಕಿದೆ, ಇಲ್ಲಿಯವರೆಗೂ ಈಶ್ವರಪ್ಪ ಎಂದರೆ ಬಿಜೆಪಿ, ಬಿಜೆಪಿ ಎಂದರೆ ಈಶ್ವರಪ್ಪ ಎಂಬ ಭಾವನೆ ಇದೆ ನೀವುಗಳು ಗೊಂದಲ ಮಾಡಿಕೊಳ್ಳದೆ ರೈತನ ಚಿಹ್ನೆಗೆ ಮತ ಹಾಕಿ ಎಂದು ಮನವಿ ಮಾಡಿದರು.
ನಗರದ ಅನೇಕ ವಾಹನಗಳ ಶೋರೂಮ್‌ಗೆ ತೆರಳಿ ಮತ ಯಾಚಿಸಿದರು ಎಲ್ಲಾ ಶೋ ರೂಮ್ ಗಳ ಮಾಲೀಕರ ಬಳಿ ತೆರಳಿ ನನ್ನ ಪರ ಪ್ರಚಾರ ಮಾಡಲು ಸಿಬ್ಬಂದಿಗಳಿಗೆ ಭಾನುವಾರ ಹೊರತು ಪಡಿಸಿ ಒಂದು ದಿನದ ರಜೆ ನೀಡ ಬೇಕೆಂದು ಮನವಿ ಮಾಡಿದರು. ಈಶ್ವರಪ್ಪನವರ ಮನವಿಗೆ ಕೆಲವು ಶೋರೂಮ್‌ಗಳ ಮಾಲೀಕರು ಸಮ್ಮತಿ ಸೂಚಿಸಿದರು.
ಇಷ್ಟೆ ಅಲ್ಲದೆ ಖಾಸಗಿ ಬಸ್ ನಿಲ್ದಾಣದಕ್ಕೆ ತೆರಳಿದ ಕೆಎಸ್ ಈಶ್ವರಪ್ಪ ಅಲ್ಲಿನ ವ್ಯಾಪಾರಸ್ಥರ ಬಳಿ ತಮ್ಮ ಚಿಹ್ನೆಯನ್ನ ತೋರಿಸಿ ಮತಯಾಚನೆ ಮಾಡಿದ್ದರು.