ನೇಹಾ ಹತ್ಯೆ ಪ್ರಕರಣ ತನಿಖೆ ಸಿಐಡಿಗೆ; ಶೀಘ್ರ ನ್ಯಾಯ ಒದಗಿಸಲು ಕ್ರಮ: ಸಿಎಂ…
ಶಿವಮೊಗ್ಗ: ಹುಬ್ಬಳ್ಳಿಯ ನೇಹಾ ಹತ್ಯೆ ಘಟನೆಯನ್ನು ಸಿಒಡಿ ತನಿಖೆಗೆ ಒಪ್ಪಿಸಿ, ವಿಶೇಷ ನ್ಯಾಯಾಲಯ ಸ್ಥಾಪಿಸುವ ಮೂಲಕ ಶೀಘ್ರ ನ್ಯಾಯ ಒದಗಿಸ ಲಾಗುವುದು ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು.
ಅವರು ತರಿಕೆರೆಗೆ ತೆರಳುವಾಗ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹುಬ್ಬಳ್ಳಿಯ ಘಟನ ಅತ್ಯಂತ ಘೋರವಾದುದು. ಈ ಘಟನೆ ಯನ್ನು ಸಂಪೂರ್ಣವಾಗಿ ತನಿಖೆ ಮಾಡಲಾಗುವುದು. ಇದಕ್ಕಾಗಿ ಯೇ ಶೀಘ್ರ ನ್ಯಾಯಾಲಯ ಸ್ಥಾಪಿಸಲಾ ಗುವುದು ಮತ್ತು ಘಟನೆಯನ್ನು ಸಿಒಡಿ ತನಿಖೆಗೆ ಒಪ್ಪಿಸಲಾಗು ವುದು. ನಮ್ಮ ಸಚಿವ ಸಂಪುಟದ ಸಚಿವರು ಈಗಾಗಲೇ ನೇಹಾ ಮನೆಗೆ ಹೋಗಿ ಅವರ ತಂದೆ, ತಾಯಿಗೆ ಸಾಂತ್ವನ ಹೇಳಿzರೆ. ನಾನು ಕೂಡ ಹೋಗುತ್ತೇನೆ ಎಂದರು.
ಕಾಂಗ್ರೆಸ್‌ನ ಚೊಂಬುಗೆ ಉತ್ತರವಾಗಿ ಬಿಜೆಪಿಯವರು ಡೇಂಜರ್ ಎಂದು ಕರೆದಿzರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಈ ಬಿಜೆಪಿಯವರಿಗೆ ಯಾವುದು ಡೇಂಜರ್ ಎಂದು ಗೊತ್ತಿಲ್ಲ. ಹೆಣ್ಣು ಮಕ್ಕಳಿಗೆ ಎರಡು ಸಾವಿರ ರೂ. ಕೊಡುವುದು ಡೇಂಜರಾ? ಉಚಿತ ಬಸ್ ಪ್ರಯಾಣ, ೨೦೦ ಯುನಿಟ್ ಉಚಿತ ವಿದ್ಯುತ್, ಅನ್ನಭಾಗ್ಯ ಡೇಂಜರಾ ಎಂದು ಹೇಳಬೇಕ ಎಂದರು.
ಡೇಂಜರ್ ಎಂದರೆ ಸಮಾಜ ವನ್ನು ಒಡೆಯುವುದು. ಶ್ರೀಮಂತರ ಪರ ಇರುವುದು. ಭ್ರಷ್ಟಾಚಾರಿ ಗಳನ್ನು ರಕ್ಷಿಸುವುದು, ಸಮ ಸಮಾಜವನ್ನು ವಿರೋಧಿಸುವುದು. ಭಾವನಾತ್ಮಕ ಸಂಬಂಧ ಗಳನ್ನು ಸೃಷ್ಟಿಸುವುದು, ಇದು ಡೇಂಜರ್. ಹಾಗೆ ನೋಡಿದರೆ ಇಡೀ ಬಿಜೆಪಿಯೇ ಒಂದು ಡೇಂಜರ್ ಎಂದರು.
ಕಾಂಗ್ರೆಸ್ ಭ್ರಷ್ಟಾಚಾರದ ಪಕ್ಷ ಎನ್ನುತ್ತಾರಲ್ಲ ಎಂಬ ಪ್ರಶ್ನೆಗೂ ಉತ್ತರ ನೀಡಿದ ಅವರು ಬಿಜೆಪಿ ಯಲ್ಲಿ ಶ್ರೀಮಂತರಿಲ್ಲವೇ? ಅವರು ಭ್ರಷ್ಟಾಚಾರಿಗಳಲ್ಲವೇ ಯಡಿಯೂರಪ್ಪ, ವಿಜಯೇಂದ್ರ ಭ್ರಷ್ಟಾಚಾರ ಮಾಡಿಲ್ಲವೇ? ಅವರ ಮನೆಗಳ ಮೇಲೆ ಏಕೆ ರೇಡ್ ಆಗುವುದಿಲ್ಲ. ಬೊಮ್ಮಾಯಿ, ಅಶೋಕ್, ಶೋಭಾ ಕರಂದ್ಲಾಜೆ, ಇವರೆಲ್ಲರ ಮನೆಗಳ ಮೇಲೂ ರೇಡ್ ಆಗಬೇಕಲ್ಲವೇ? ಕಾಂಗ್ರೆಸ್ ಮುಖಂಡರ ಮನೆಗಳ ಮೇಲೆ ಮಾತ್ರವೇಕೆ ರೇಡ್ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾನ ಹಂಚಿಕೆ ಸಮ ಸಮಾಜ ವನ್ನು ಸೃಷ್ಟಿಸುತ್ತೇವೆ ಎಂಬುದು ನಮ್ಮ ಧ್ಯೇಯವಾಗಿದೆ. ಈ ದೇಶದ ಸಂಪತ್ತು ಕೆಲವೇ ಕೆಲವರ ಕೈಯಲ್ಲಿದೆ. ಅಸಮಾನತೆ ಸಲ್ಲದು. ಎಲ್ಲರಿಗೂ ಸಮಪಾಲು ಸಮ ಬಾಳು ಎನ್ನುವುದೇ ಅಂಬೇಡ್ಕರ್ ಧ್ಯೇಯ. ಅಂಬೇಡ್ಕರ್ ಆಶಯವೇ ಕಾಂಗ್ರೆಸ್ ನ ಆಶಯ ಕೂಡ ಎಂದರು.
ನಿಮ್ಮ ಚೊಂಬು ಪದಕ್ಕೆ ಚಿಪ್ಪು ಎಂದು ಬಿಜೆಪಿಯವರು ಕರೆದಿ zರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಕೇಂದ್ರದ ಮೋದಿ ಸರ್ಕಾರ ಕರ್ನಾಟಕಕ್ಕೆ ಚೊಂಬು ಕೊಟ್ಟಿದೆ ಎಂಬುದನ್ನು ಹಳ್ಳಿಯ ಸರಳವಾದ ಭಾಷೆಯಲ್ಲಿ ಜನರಿಗೆ ಅರ್ಥವಾಗು ವಂತೆ ನಾವು ಹೇಳಿ zವೆ ಅಷ್ಟೇ. ಕೇಂದ್ರ ಸರ್ಕಾರ ರಾಜ್ಯಕ್ಕೆ ಏನು ಕೊಟ್ಟಿತು? ಬರಗಾ ಲದ ಪರಿಹಾರದ ಅನುದಾನ ವನ್ನೂ ಬಿಡುಗಡೆ ಮಾಡಲಿಲ್ಲ. ಕೇಂದ್ರ ಸಮೀಕ್ಷೆ ಮಾಡಿ ಒಂದು ತಿಂಗಳೊಳಗೆ ಹಣ ಬಿಡುಗಡೆ ಮಾಡಬೇಕೆಂಬ ನಿಯಮವಿದ್ದರೂ ಬಿಡುಗಡೆ ಮಾಡಲಿಲ್ಲ. ೧೭ನೇ ಹಣಕಾಸಿನ ಯೋಜನೆ ಯಲ್ಲೂ ನೆರವು ನೀಡಲಿಲ್ಲ. ರಾಜ್ಯಕ್ಕೆ ಬರಬೇಕಾದ ಹಣ ಕೇಳಲು ಕೋರ್ಟ್‌ನ ಮೊರೆ ಹೋಗಬೇಕೆ ಎಂದರು.ಕಪ್ಪುಹಣ ತರುವುದಿರಲಿ, ಅದು ಮತ್ತಷ್ಟು ಹೆಚ್ಚಾಗುತ್ತಿದೆ. ಉದ್ಯೋಗ ಸೃಷ್ಟಿಯಾಗಲಿಲ್ಲ. ರೈತರ ಆದಾಯ ಹೆಚ್ಚಲಿಲ್ಲ. ಬೆಲೆ ಏರಿಕೆ ತಪ್ಪಲಿಲ್ಲ. ಕನಿಷ್ಟ ಬೆಂಬಲ ಬೆಲೆಯೂ ರೈತರಿಗೆ ಸಿಗಲಿಲ್ಲ. ಎಲ್ಲಿ ಹೋದವು ಅಚ್ಛೇ ದಿನಗಳು ಇದು ಖಾಲಿ ಚೊಂಬು ಅಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ಅವರು ರಾಜ್ಯದ ಖಜನೆ ಖಾಲಿಯಾಗಿದೆ ಎಂದು ಹೇಳುತ್ತಾರಲ್ಲ ಎಂಬ ಪ್ರಶ್ನೆಗೆ ಉತ್ತರ ನೀಡಿದ ಅವರು, ಯಾವ ಆಧಾರದಲ್ಲಿ ಹೇಳುತ್ತೀರಿ ಎಂದು ಪತ್ರಕರ್ತರು ಕೇಳಬೇಕಿತ್ತು. ಅವರಿಗೆ ರಾಜ್ಯದ ಬಜೆಟ್‌ನ ಬಗೆಯೇ ಗೊತ್ತಿಲ್ಲ. ಮೊದಲು ಬಜೆಟ್ ಅನ್ನು ನೋಡಲಿ. ಆಮೇಲೆ ದಿವಾಳಿಯ ಬಗ್ಗೆ ಮಾತನಾಡಲಿ ಎಂದ ಅವರು, ಬಿಜೆಪಿ ಸರ್ಕಾರದಲ್ಲಿ ಹಿಂದೂಗಳ ಹತ್ಯೆಗಳು ನಡೆದಿಲ್ಲವೇ? ಅಕ್ರಮ ಗಳು ನಡೆದಿಲ್ಲವೇ? ಹಾಗೆ ನೋಡಿದರೆ ಕಾಂಗ್ರೆಸ್ ಸರ್ಕಾರ ದಲ್ಲಿಯೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಅಹಿತಕರ ಘಟನೆ ಗಳು ನಡೆದಿವೆ. ಬಿಜೆಪಿ ಆಡಳಿತ ದಲ್ಲಿ ಅತಿ ಹೆಚ್ಚು ಅಪರಾಧ ಪ್ರಕರಣ ನಡೆದಿದೆ ಎಂದು ಅಂಕಿ ಅಂಶ ಸಮೇತ ವಿವರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ರಾಜ್ಯ ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್, ಪ್ರಮುಖರಾದ ಹೆಚ್.ಸಿ. ಯೋಗೀಶ್, ಎಸ್.ಕೆ. ಮರಿಯಪ್ಪ, ಎಸ್. ಚಿನ್ನಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.