ರಾಷ್ಟ್ರಭಕ್ತ ಬಳಗದಿಂದ ಈಶ್ವರಪ್ಪ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ…

rastrabaktha

ಶಿವಮೊಗ್ಗ: ನೇಹಾ ಹತ್ಯೆ ವಿರೋಧಿಸಿ ಶಿವಮೊಗ್ಗ ಲೋಕ ಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪರ ನೇತೃತ್ವದಲ್ಲಿ ಇಂದು ರಾಷ್ಟ್ರಭಕ್ತರ ಬಳಗದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಘಟನೆಯ ತನಿಖೆಯನ್ನು ಸಿಬಿಐಗೆ ವಹಿಸು ವಂತೆ ಆಗ್ರಹಿಸಿ ಡಿಸಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.


ದೈವಜ್ಞ ಕಲ್ಯಾಣ ಮಂದಿರ ದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ದುರ್ಗಿಗುಡಿ ಮೂಲಕ ಸಾಗಿ ಗೋಪಿ ವೃತ್ತದ ಮೂಲಕ ಮಹಾವೀರ ವೃತ್ತ ಸೇರಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನಾ ಸಭೆ ನಡೆಸಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕೆ.ಎಸ್. ಈಶ್ವರಪ್ಪ ಅವರು, ಇದೊಂದು ದಾರುಣ ಘಟನೆ. ಮಾತನಾಡಲು ದುಃಖ ವಾಗುತ್ತದೆ. ನೇಹಾಳನ್ನು ಕೊಂದ ಮುಸ್ಲಿಂ ಗೂಂಡಾ ಇನ್ನೂ ಜೀವಂತ ವಾಗಿzನೆ. ಆತನನ್ನು ಎನ್‌ಕೌಂಟರ್ ಮಾಡಬೇಕಿತ್ತು. ಇದು ರಾಕ್ಷಸೀಯ ಕೃತ್ಯವಾಗಿದೆ. ಹಿಂದೂಗಳ ಮೇಲೆ ಅದರಲ್ಲೂ ಹೆಣ್ಣುಮಕ್ಕಳ ಮೇಲೆ ಇಂತಹ ಘಟನೆಗಳು ನಡೆಯುತ್ತಲೇ ಇವೆ. ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿ ರಾಜಕಾರಣ ಬಿಟ್ಟು ಆತನನ್ನು ಗಲ್ಲಿಸಗೇರಿಸುವಂತೆ ಮಾಡಬೇಕು ಎಂದರು.
ಮಾಜಿ ಮೇಯರ್ ಸುವರ್ಣಾ ಶಂಕರ್ ಮಾತನಾಡಿ, ಇದೊಂದು ಬರ್ಬರ ಕೃತ್ಯ. ಹಿಂದೂ ಗಳು ಅದರಲ್ಲೂ ಹೆಣ್ಣು ಮಕ್ಕಳು ಕಾಲೇಜಿಗೆ ಹೋಗು ವುದೇ ಕಷ್ಟವಾಗುತ್ತಿದೆ. ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವುದೇ ಕಷ್ಟವಾಗಿರುವಾಗಿದೆ ಎಂದರು.
ರಾಷ್ಟ್ರಭಕ್ತರ ಬಳಗದ ಪಾಂಡೆ ಮಾತನಾಡಿ, ಹಿಂದೂ ಸಮಾಜದ ಮೇಲೆ ನಿರಂತರವಾಗಿ ಇಂತಹ ದಾಳಿಗಳು ನಡೆಯುತ್ತಿರುವುದು ಅತ್ಯಂತ ಖಂಡನೀಯ. ಇದು ರಾಜ್ಯ ಸರ್ಕಾರದ ವೈಫಲ್ಯತೆ ತೋ ರಿಸುತ್ತದೆ. ರಾಜ್ಯ ಸರ್ಕಾರ ಕೂಡ ಲೇ ಈ ಘಟನೆಯನ್ನು ಉನ್ನತ ತನಿಖೆಗೆ ವಹಿಸಬೇಕು. ಮತ್ತು ಆರೋಪಿಗೆ ತಕ್ಕ ಶಿಕ್ಷೆ ನೀಡುವಂತೆ ಮಾಡಬೇಕು ಎಂದರು.
ಪ್ರತಿಭಟನೆಯಲ್ಲಿ ಬಳಗದ ಪ್ರಮುಖರಾದ ಕೆ.ಇ. ಕಾಂತೇಶ್, ಇ. ವಿಶ್ವಾಸ್, ಮಹಾಲಿಂಗ ಶಾಸ್ತ್ರಿ, ಲಕ್ಷ್ಮಿ ಶಂಕರನಾಯ್ಕ್, ಅನಿತಾ, ಬಾಲು, ಆನಂದ್, ಶಂಕರ್ ಗನ್ನಿ, ಸತ್ಯನಾರಾಯಣ್, ಮೋಹನ್, ಸೀತಾಲಕ್ಷ್ಮಿ, ವೆಂಕಟೇಶ್, ಆರತಿ ಆ.ಮ. ಪ್ರಕಾಶ್ ಇದ್ದರು.