ಮತದಾನ ದೇಶದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನ ನೀಡಿರುವ ಹಕ್ಕು…

sweepa21p2

ನ್ಯಾಮತಿ: ಮತದಾನ ಪವಿತ್ರ ಕಾರ್ಯ ಕಡ್ಡಾಯ ಮತಚಲಾ ವಣೆ ಯಿಂದ ಸದೃಢ ದೇಶ ನಿಮಾ ಣ ಸಾಧ್ಯವೆಂದು ಇಒ ಎಚ್.ವಿ. ರಾಘವೆಂದ್ರ ಕರೆ ನೀಡಿದರು.


ನ್ಯಾಮತಿ ತಾಪಂ ವತಿಯಿಂದ ಕೆಂಚಿಕೊಪ್ಪ ಮತ್ತು ಗುಡ್ಡೇಹಳ್ಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಹಮ್ಮಿ ಕೊಳ್ಳಲಾಗಿದ್ದ ಬೈಕ್ ರ್‍ಯಾಲಿ ಮತ್ತು ಮತದಾನ ಜಗೃತಿ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಮತದಾನದ ಮಹತ್ವವನ್ನು ಪ್ರತಿ ಯೊಬ್ಬರೂ ಅರಿತು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು, ಈ ನಿಟ್ಟಿನಲ್ಲಿ ಗ್ರಾಮಗಳಲ್ಲಿ ಜನಸಂದಣಿ ಇರುವೆಡೆ ಮತ್ತು ಅಂಗಡಿ ಹಾಗೂ ಮನೆಗಳಿಗೆ ತೆರಳಿ ಮತದಾನದ ಜಗತಿಯನ್ನು ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕೆಲವರು ನಾನೊಬ್ಬ ಮತ ಹಾಕದಿದ್ದರೆ ಏನಾಗುತ್ತದೆ ಎಂಬ ಮನೋಭಾವನೆ ಹೊಂದಿರುತ್ತಾರೆ, ಮತದಾನ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ನೀಡಿರುವ ಹಕ್ಕಾಗಿದ್ದು ದೇಶದ ಎಂತಹ ಮಹಾನ್ ವ್ಯಕ್ತಿಯೇ ಆಗಿದ್ದರೂ ಚುನಾವಣೆ ಸಮಯದಲ್ಲಿ ಮತ ಯಾಚಿಸಲೇಬೇಕು, ಇದು ಮತಕ್ಕಿರುವ ಶಕ್ತಿ ಹಾಗಾಗಿ ಚುನಾವಣಾ ದಿನ ಪ್ರeವಂತ ಮತದಾರರು ತಮ್ಮ ಕುಟುಂಬ, ಗ್ರಾಮಗಳಲ್ಲೂ ಮತದಾನದ ಬಗ್ಗೆ ಅರಿವು ಮೂಡಿಸಬೇಕೆಂದರು. ಎಲ್ಲರೂ ಕಡ್ಡಾಯವಾಗಿ ತಾವು ಮತ ಹಾಕುವುದರ ಜೊತೆಗೆ ಅಕ್ಕ-ಪಕ್ಕದ ಮನೆಗಳವರಿಗೂ ಮಾಹಿತಿ ತಿಳಿಸಿ ಮತ ಚಲಾಯಿ ಸುವ ನಿಟ್ಟಿನಲ್ಲಿ ಕಾರ್ಯಪ್ರವತ್ತ ರಾಗಬೇಕೆಂದು ಮನವಿ ಮಾಡಿ ದರು.
ಆಯಾ ಗ್ರಾಮಗಳ ಪ್ರಮುಖ ರಸ್ತೆಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಪ್ರತಿe ವಿಧಿ ಬೋಧಿಸಲಾಯಿತು.
ಸ್ವೀಪ್ ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಳಾದ ವಿಜಯ್‌ಕುಮಾರ್, ಯೋಗೇಶ್ ನಾಯ್ಕ್, ಸುರೇಶ್, ಸತೀಶ್, ಪ್ರದೀಪ್, ಜಯಪ್ಪ, ಮಂಜುನಾಥ್, ಅಂಜುನಾಯ್ಕ್, ಆಶಾ, ವೇದಾವತಿ, ರಶ್ಮಿ, ಜ್ಯೋತಿ ಶೆಟ್ಟಿ ನ್ಯಾಮತಿ ತಾಲ್ಲೂಕಿನ ಪಂಚಾಯತ್ ಅಭಿವದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಪಂಚಾಯತ್ ಸಿಬ್ಬಂದಿಗಳು, ಆಶಾ ಮತ್ತು ಅಂಗನವಾಡಿ ಕಾರ್‍ಯ ಕರ್ತರುಗಳು, ಸ್ವ-ಸಹಾಯ ಸಂಘ ದ ಮಹಿಳೆಯರು ಹಾಗೂ ಸಾರ್ವ ಜ ನಿಕರು ಭಾಗವಹಿಸಿದ್ದರು.