ರೈಲಿಗೆ ಸಿಲುಕಿ ಪ್ರಾಣ ಕಳೆದುಕೊಂಡ ಯುವಕ…!
ಶಿವಮೊಗ್ಗ : ಕಳೆದು ಹೋದ ಮೊಬೈಲ್ ಹುಡುಕುತ್ತಾ ಹೋದ ಯುವಕನೋರ್ವ ತಾಳಗುಪ್ಪ ರೈಲಿಗೆ ಸಿಲುಕಿ ನಿಧನ ಹೊಂದಿ ರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ಶಿವಮೊಗ್ಗ ವಲಯದ ಸೋಮಿನಕೊಪ್ಪ ವೈದ್ಯಕೀಯ ಕಾಲೇಜು ಬಳಿ ನಾಲ್ವರು ಗೆಳೆಯ ರು ರಾತ್ರಿ ಹೋಗಿದ್ದು, ಅಲ್ಲಿ ಒಬ್ಬ ರ ಮೊಬೈಲ್ ಕಳೆದು ಹೋಗಿದೆ.
ಅದನ್ನು ಹುಡುಕುತ್ತಿzಗ ಶಿವಮೊಗ್ಗ ವಿನೋಬನಗರ ಕರಿ ಯಣ್ಣ ಕ್ರಾಸ್ ಬಳಿಯ ಹೇಮಂತ್ (೨೪) ವರ್ಷದ ಯುವಕ ರೈಲಿಗೆ ಸಿಲುಕಿ ಸಾವು ಕಂಡಿzನೆ. ಗೋಪಾಲ್ ಎಂಬುವರ ಮಗ ನಾದ ಹೇಮಂತ್ ಎಂದು ಗೊತ್ತಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಶಿವಮೊಗ್ಗ ಮೆಗಾನ್ ಆಸ್ಪತ್ರೆ ಯಲ್ಲಿ ಶವಪರೀಕ್ಷೆ ನಡೆಯುತ್ತಿದ್ದು, ಮುಂದಿನ ಕ್ರಮವನ್ನು ರೈಲ್ವೆ ಪೊಲೀಸರು ಕೈಗೊಂಡಿzರೆ.
ಸಂತಾಪ: ಹೇಮಂತ್ ಅವರ ನಿಧನಕ್ಕೆ ಕರ್ನಾಟಕ ಕರಾಟೆ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ವಿನೋದ್ ಸಂತಾಪ ಸೂಚಿಸಿzರೆ.