ಶ್ರೀರಾಮನ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಆದರ್ಶ ಬದುಕನ್ನು ಸಾಗಿಸಬೇಕು..

D22-HLRP1

ಹೊನ್ನಾಳಿ : ಭಗವಾನ್ ಶ್ರೀರಾಮನ ಆದರ್ಶಗಳನ್ನು ಎಲ್ಲರೂ ಮೈಗೂ ಡಿಸಿಕೊಂಡು ಆದರ್ಶ ಬದುಕನ್ನು ಸಾಗಿಸಬೇಕು ಎಂದು ಯಕ್ಕನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ವೈ.ಪಿ. ದಿನೇಶ್ ಹೇಳಿದರು.
ಶ್ರೀರಾಮನವಮಿ ಪ್ರಯುಕ್ತ ಹೊನ್ನಾಳಿ ತಾಲೂಕಿನ ಯರೇಹಳ್ಳಿ ಗ್ರಾಮದ ಶ್ರೀ ದುಂಡಿ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಹಮ್ಮಿ ಕೊಂಡ ವಿಶೇಷ ಪೂಜೆ ವೇಳೆ ಅವರು ಮಾತನಾಡಿದರು.
ಯರೇಹಳ್ಳಿ ಗ್ರಾಮದ ಶ್ರೀ ದುಂಡಿ ರಂಗನಾಥ ಸ್ವಾಮಿ ದೇವ ಸ್ಥಾನದಲ್ಲಿ ಪ್ರತಿ ವರ್ಷ ಶ್ರದ್ಧಾ- ಭಕ್ತಿಗಳಿಂದ ಶ್ರೀರಾಮನವಮಿ ಆಚರಿಸಿಕೊಂಡು ಬರಲಾಗುತ್ತಿದೆ. ಗ್ರಾಮಸ್ಥರು ಒಗ್ಗಟ್ಟಿನಿಂದ ಅನ್ನ ಸಂತರ್ಪಣೆ ಏರ್ಪಡಿಸುತ್ತಾರೆ. ಇದು ಅನುಕರಣೀಯ ಎಂದು ತಿಳಿಸಿದರು.
ಶ್ರೀ ದುಂಡಿ ರಂಗನಾಥ ಸ್ವಾಮಿ ದೇವಸ್ಥಾನದ ಅರ್ಚಕರಾದ ಕೆ. ಕರಿಬಸಪ್ಪ, ಮುಖಂಡರಾದ ಕೆ.ಎಚ್. ಕೃಷ್ಣಮೂರ್ತಿ, ಜಿ. ಆರ್. ನಾಗೇಶ್, ಜಿ.ಎನ್. ರಂಗ ನಾಥ್, ಜೆ.ಕೆ. ಹರೀಶ್, ಎಂ.ವಿ. ಕಿರಣ್, ಎಂ.ಆರ್. ರಮೇಶ್, ಎಂ.ವಿ. ಹರೀಶ್, ಕಾಂತಾಚಾರಿ ಇತರರು ಇದ್ದರು.
ಭಕ್ತರಿಗೆ ಕೋಸುಂಬರಿ, ಪಾನಕ, ಬಾಳೆಹಣ್ಣು ವಿತರಿಸಲಾ ಯಿತು. ಎಲ್ಲರಿಗೂ ಅನ್ನಸಂತ ರ್ಪಣೆ ಏರ್ಪಡಿಸಲಾಗಿತ್ತು.