puttaraja-puja-photo

ದಾವಣಗೆರೆ : ಗದುಗಿನ ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿಯು ಮೇ ೧೨ರಂದು ದಾವಣಗೆರೆಯ ಬಾಡಕ್ರಾಸ್‌ನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ,ಪಂ. ಪುಟ್ಟರಾಜಗುರು ಅಭಿಮಾನಿ ಭಕ್ತರ ರಾಜ್ಯ ಸಮಾವೇಶ ಹಮ್ಮಿಕೊಂಡಿದೆ.
ಈ ಸಮಾವೇಶದಲ್ಲಿ ಸಮೂಹ ಭಕ್ತಿ ಸಂಗೀತ ಮತ್ತು ನತ್ಯ ಕಾರ್ಯಕ್ರಮ ಆಯೋಜಿಸಿದ್ದು, ಈ ಅಧಿವೇಶನದಲ್ಲಿ ಭಾಗವಹಿಸಿ ತಮ್ಮ ಕಲಾ ಸೇವೆಯನ್ನು ಸಮರ್ಪಿಸಲು ಆಸಕ್ತ ಸಂಗೀತ ಮತ್ತು ನತ್ಯ ಶಾಲೆಯ ಗುರುಗಳು ತಮ್ಮ ತಂಡದ ಹೆಸರು ನೋಂದಾಯಿಸಿಕೊಳ್ಳಲು ಕೋರಲಾಗಿದೆ.
ಭಾವಹಿಸಿದ ಕಲಾ ತಂಡದ ಮುಖ್ಯಸ್ಥರಿಗೆ ಅಥವಾ ಕಲಾ ಗುರುಗಳಿಗೆ ಪುಟ್ಟರಾಜ ಗುರುರಕ್ಷೆ ನೀಡಿ ಗೌರವಿಸಲಾಗುವುದು. ತಂಡದ ಸದಸ್ಯರಿಗೆ ಅಭಿನಂದನಾ ಪತ್ರ ನೀಡಲಾಗುವುದು. ತಂಡದಲ್ಲಿ ಕನಿಷ್ಠ ೧೦ ಗರಿಷ್ಠ ೧೫ ಜನ ಕಲಾವಿದರು ಇರಬೇಕು ಜಿಲ್ಲೆಯ ಹೊರಗಿನಿಂದ ಬರುವ ಕಲಾವಿ ದರಿಗೆ ಮತ್ತು ಕಲಾ ತಂಡಗಳಿಗೆ ಊಟ ಮತ್ತು ಸಾಮೂಹಿಕ ವಸತಿ ಒದಗಿಸಲಾಗುವುದು.
ಭಾಗವಹಿಸಲು ಆಸಕ್ತರು ತಮ್ಮ ಪೂರ್ಣ ಹೆಸರು, ಅಂಚೆ ವಿಳಾಸ ತಿಳಿಸಿ, ಗುಣಮಟ್ಟದ ಒಂದು ಭಾವಚಿತ್ರದೊಂದಿಗೆ ಶ್ರೀಮತಿ ಮಮತಾ ನಾಗರಾಜ, ಜಿ ಪ್ರಧಾನ ಕಾರ್ಯದರ್ಶಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಮಹಿಳಾ ಘಟಕ, ದಾವಣಗೆರೆ. ಮೊ: ೯೯೬೪೮೨೯೧೨೨ಗೆ ಕೊಡಬಹುದು.
ಹೆಸರು ನೋಂದಾಯಿಸಿ ಕೊಳ್ಳಲು ಮೇ ೫ ಕೊನೆಯ ದಿನ ಮಾಹಿತಿಗೆ ೯೮೮೬೭೧೭೭೩೨ ಸಂಪರ್ಕಿಸಲು ಕೋರಿದೆ.