ಬಿವೈ ರಾಘವೇಂದ್ರ ಮತ್ತೆ ಗೆದ್ದರೆ ಮತ್ತಷ್ಟು ಭೂಮಿ ಖರೀದಿಗೆ ಅವಕಾಶ ಕಲ್ಪಿಸಿದಂತೆ…
ಬೈಂದೂರು: ‘ಕ್ಷೇತ್ರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಮತ ನೀಡಿ ಗೆಲ್ಲಿಸಿದ ಪರಿಣಾಮ ಇಲ್ಲಿ ೫೦೦ಕ್ಕೂ ಎಕ್ಕರೆ ಭೂಮಿ ಖರೀದಿಸಿzರೆ. ಈ ಭಾರಿಯ ಚುನಾವಣೆಯಲ್ಲಿ ಪುನಃ ಗೆಲ್ಲಿಸಿದರೆ, ೧೦೦೦ಕ್ಕೂ ಹೆಚ್ಚು ಎಕ್ಕರೆ ಜಗ ಖರಿದೀಸಲು ಅವಕಾಶ ನೀಡಿ ದಂತಾಗುತ್ತದೆ’ ಎಂದು ಮಾಜಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಹೇಳಿದರು.
ಬೈಂದೂರು ಮತ್ತು ವಂಡ್ಸೆ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಪಂಗಡ (ಎಸ್‌ಟಿ) ಘಟಕ ವತಿಯಿಂದ ಇಲ್ಲಿನ ಗೋಳಿಹೊಳೆಯ ಮಹಿಷಿ ಮರ್ಧಿನಿ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಮರಾಠಿ ಸಮುದಾಯದ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಲ್ಲಿ ೨೦ ಸಾವಿರಕ್ಕೂ ಹೆಚ್ಚು ಮರಾಠಿ ಸಮುದಾಯದವರು ವಾಸವಾಗಿzರೆ. ಮರಾಠಿ ಸಮುದಾಯದವರು ಧರ್ಮ ನಿಷ್ಠರು ಹಾಗೂ ಮಾನವೀಯ ಮಲ್ಯಗಳನ್ನು ರೂಢಿಸಿಕೊಂಡಿ zರೆ. ಈ ಹಿಂದೆ ಇಲ್ಲಿ ಸಮಾಜಕ್ಕೆ ೨ ಕೋಟಿ ಅನುದಾನ ಸರ್ಕಾರ ದಿಂದ ಬಿಡುಗಡೆಗೊಳಿಸಲಾಗಿತ್ತು. ಇದರಿಂದ, ಮರಾಠಿ ಸಮುದಾ ಯದ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರು.
ಗೀತಾ ಶಿವರಾಜಕುಮಾರ ಅವರು ಪ್ರಮಾಣಿಕ ಹಾಗೂ ಸಾತ್ವಿಕ ಮಹಿಳೆ. ಅವರಿಗೆ ಮತ ನೀಡಿದರೆ, ಈ ಭಾಗದಲ್ಲಿ ಪ್ರಾಮಾಣಿಕವಾಗಿ ಉತ್ತಮ ಕೆಲಸ ಕಾರ್ಯಗಳು ನಡೆಯುತ್ತದೆ. ಇದಕ್ಕೆ ಜನರು ಅವಕಾಶ ಕಲ್ಪಿಸಿಕೊಡಬೇಕು ಎಂದು ಕೋರಿದರು.
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಮಾತನಾಡಿ, ಬಿಜೆಪಿಯಿಂದ ಕಳೆದ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಪರಿಶಿಷ್ಟ ಸಮುದಾಯದಿಂದ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ ಬಿಜೆಪಿಯ ಸುಳ್ಳು ಭರವಸೆಯ ಆಡಳಿತ. ಆದ್ದರಿಂದ, ಈ ಭಾರಿ ನನಗೆ ಅವಕಾಶ ಕಲ್ಪಿಸಿಕೊಡಿ, ನನ್ನ ತಂದೆಯ ಹಾದಿಯಲ್ಲಿ ಸಾಗಿ, ಜನ ಸಮಾನ್ಯರಿಗೆ ಪೂರಕವಾದ ಆಡಳಿತ ನಡೆಸುತ್ತೇನೆ ಎಂದರು.
ಬೈಂದೂರು ಕ್ಷೇತ್ರಕ್ಕೆ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರು ಅನೇಕ ಯೋಜನೆಗಳನ್ನು ಜರಿಗೊಳಿಸಿ ದ್ದರು. ಪ್ರಸ್ತುತ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ಬಡವರು ಹಾಗೂ ಅಶಕ್ತರ ಕೈ ಹಿಡಿದು ನಡೆಸುತ್ತಿದೆ. ಅದೇ ರೀತಿ, ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಮರಾಠಿ ಸಮುದಾಯಕ್ಕೆ ಸಿಗಬೇಕಾದ ಎ ಸೌಲಭ್ಯಗಳನ್ನು ಕಲ್ಪಿಸಲು ಒತ್ತು ನೀಡಲಾಗುವುದು ಎಂದರು.
ಮಾಜಿ ಶಾಸಕ ಕೆ.ಗೋಪಾಲ ಪೂಜರಿ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಎಸ್‌ಟಿ ಸಮುದಾಯದವರು ಅಪಾರ ಕೊಡುಗೆ ನೀಡಿzರೆ. ಈ ಲೋಕಸಭಾ ಚುನಾವಣೆ ಸಹೋದರಿ ಗೀತಾ ಅವರನ್ನು ಗೆಲ್ಲಿಸಬೇಕಿದೆ. ಕಾರಣ, ಬಹುಕಾಲ ಆಡಳಿತದ ಚುಕ್ಕಾಣಿ ಹಿಡಿದ ಸಂಸದ ಬಿ.ವೈ.ರಾಘವೇಂದ್ರ ಅವರು ಈ ಭಾಗದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ನಡೆಸಿಲ್ಲ. ಆದ್ದರಿಂದ, ಇಲ್ಲಿ ಗೀತಾ ಶಿವರಾಜಕುಮಾರ ಪರ ಮತಯಾಚಿಸಲು ನೈತಿಕ ಹಕ್ಕಿದೆ ಎಂದರು.
ಮಾಜಿ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ ಅವರ ಸಾಮಾಜಿಕ ಕಾರ್ಯಗಳು ಇಂದಿಗೂ ಜೀವಂತವಾಗಿವೆ. ಆ ಕಾರ್ಯಗಳಿಗೆ ಜೀವ ತುಂಬಲು ಗೀತಾ ಶಿವರಾಜಕುಮಾರ ಅವರಿಗೆ ಮತ ನೀಡಿ ಹರಸಬೇಕಿದೆ ಎಂದರು.
ಬೈಂದೂರು ಬ್ಲಾಕ್ ಕಾಂಗ್ರೆಸ್ ಎಸ್ ಟಿ ಘಟಕ ಅಧ್ಯಕ್ಷ ಮಹಾ ಲಿಂಗ ನಾಯ್ಕ್ ಮಾತನಾಡಿ, ಈ ಭಾಗದಲ್ಲಿ ಅನೇಕ ವರ್ಷದಿಂದ ತಾಲ್ಲೂಕು ಪಂಚಾಯಿತಿಯ ಅಧಿಕಾರ ಹಿಡಿಯಲು ಕೂಡ ಮರಾಠಿ ಸಮುದಾಯಕ್ಕೆ ಆಗಿಲ್ಲ. ಹಿಂದಿ ನಿಂದಲೂ ಸಮುದಾಯದ ಕುರಿತ ತಾರತಮ್ಯ ನಡೆಯುತ್ತಲೇ ಇದೆ. ಇದಕ್ಕೆ ಉತ್ತರವಾಗಿ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ ಅವರಿಗೆ ಮತ ನೀಡಿ ಆರಿಸಬೇಕಿದೆ. ಸಮುದಾಯದ ಸಮಸ್ಯೆಗಳ ಆಹ್ವಾಲುಗಳನ್ನು ಸರ್ಕಾರದ ಮುಂದೆ ಇಡಲು ಗೀತಾ ಶಿವರಾಜ ಕುಮಾರ್ ಅವರು ವೇದಿಕೆ ಆಗಲಿzರೆ ಎಂದರು.
ಲೋಕಸಭಾ ಚುನಾವಣೆ ಜಿ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ನಟ ಶಿವರಾಜಕುಮಾರ, ಉಡುಪಿ ಎಸ್ಟಿ ಘಟಕ ಅಧ್ಯಕ್ಷ ಜೈರಾಮ ನಾಯ್ಕ್, ಶೇಷು ನಾಯ್ಕ್, ರಾಜು ಪೂಜರಿ, ಅನಿತಾ ಪುಟ್ಟನಾಯ್ಕ್, ಗೌರಿ ದೇವಾಡಿಗ, ಬೋಜ ನಾಯ್ಕ್, ಸಂತೋಷ ನಾಯ್ಕ್ ಚಂದ್ರ ನಾಯ್ಕ್ ಮುತ್ತಣಗಿ, ಬಾಚುಕೂಳಿ ಸೇರಿ ಗಣ್ಯರು ಇದ್ದರು.