ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿಯಲು ನಂಜೇಶ್ ನಿರ್ಧಾರ…

19-pi-1

ಶಿವಮೊಗ್ಗ: ನೈಋತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್‌ನ ಮುಂಬರುವ ಚುನಾವಣೆಗೆ ತಾನು ಅಭ್ಯರ್ಥಿಯಾಗಿ ಕಣಕ್ಕಿಳಿಯುವು ದಾಗಿ ಚಿಕ್ಕಮಗಳೂರಿನ ಆದಿಚುಂಚನಗಿರಿ ಇಂಜಿನಿಯ ರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಬಿ ಆರ್. ನಂಜೇಶ್ ಸುದ್ದಿಗೋಷ್ಟಿಯಲ್ಲಿ ಹೇಳಿzರೆ.
ಕಳೆದ ೧೦ ವರ್ಷಗಳಿಂದ ಸಹಾಯಕ ಪ್ರಾಧ್ಯಾಪಕನಾಗಿರುವ ತನಗೆ ಶಿಕ್ಷಕರ ಕ್ಷೇತ್ರದ ಸಮಸ್ಯೆಗಳ ಅರಿವಿದೆ. ಆದ್ದರಿಂದ ಈ ಬಾರಿ ಶಿಕ್ಷಕರು ಸೂಕ್ತ ಶಿಕ್ಷಕನನ್ನು ಬೆಂಬಲಿಸಿ ಆಯ್ಕೆಯಾಗುವಂತೆ ಮಾಡುತ್ತಾ ರೆಂಬ ನಂಬಿಕೆ ತನಗಿದೆ ಎಂದರು.
ಸರಕಾರವು ಅನುದಾನಿತ ಶಾಲಾ-ಕಾಲೇಜು ನೌಕರರ ಮಾರ್ಚ್ ತಿಂಗಳ ವೇತನವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಕೂಡಲೇ ಬಿಡುಗಡೆ ಮಾಡಬೇಕು. ಸಂಬಳವಿಲ್ಲದೆ ಜೀವನ ಸಾಗಿಸು ವುದು ಕಷ್ಟವಾಗುತ್ತದೆ. ಮೊದಲೇ ಅನೇಕ ಸವಲತ್ತುಗಳಿಂದ ಈ ಶಿಕ್ಷಕರನ್ನು ವಂಚಿಸಲಾಗಿದೆ. ಸರಕಾರಿ ಶಿಕ್ಷಕರಂತೆಯೇ ಸಕಲ ಸವಲತ್ತು ಕೊಡಬೇಕೆಂದು ಆಗ್ರಹಿಸಿದರು.
ಅನುದಾನಿತ ಶಾಲಾ- ಕಾಲೇಜಿನ ಶಿಕ್ಷಕರು ಸರಕಾರದ ಎ ಯೋಜನೆಗಳನ್ನು ಪೂರೈಸುವಲ್ಲಿ ಭಾಗಿಯಾಗುತ್ತಾರೆ. ಮಲ್ಯ ಮಾಪನ, ಚುನಾವಣಾ ಕರ್ತವ್ಯ, ಜನಗಣತಿ ಮೊದಲಾದವುಗಳಲ್ಲಿ ತೊಡಗಿಸಿಕೊಳ್ಳುತ್ತಿzರೆ. ಆದ್ದರಿಂದ ಸಕಾಲದಲ್ಲಿ ತಿಂಗಳ ವೇತನ ಬಿಡುಗಡೆ ಮಾಡಬೇಕು ಮತ್ತು ಎ ಸವಲತ್ತು ಕಲ್ಪಿಸಬೇಕೆಂದು ಮನವಿ ಮಾಡಿದರ.
ಈಗಾಗಲೇ ಶಿಕ್ಷಕರನ್ನು ಮತದಾರರ ಪಟ್ಟಿಗೆ ಸೇರಿಸುವಲ್ಲಿ ಸಾಕಷ್ಟು ಶ್ರಮಿಸಿzನೆ. ಅವರ ಸಂಘಟನೆ ಮಾಡಿzನೆ. ಶಿಕ್ಷಕರ ಧ್ವನಿಯಾಗಲು ನಿರ್ಧರಿಸಿ ಕಣಕ್ಕಿಳಿದಿ zನೆ. ಅವರು ನನ್ನ ಮೇಲಿಟ್ಟ ವಿಶ್ವಾಸ ಉಳಿಸಿಕೊಳುತ್ತೇನೆ. ಆದ್ದರಿಂದ ಮುಂದಿನ ಚುನಾವಣೆ ಯಲ್ಲಿ ತನ್ನನ್ನು ಬೆಂಬಲಿಸುವಂತೆ ಮನವಿ ಮಾಡುವುದಾಗಿ ವಿವರಿಸಿದರು.