ಹರಿಹರದಲ್ಲಿ ವಿಜಂಭಣೆಯ ರಾಮನವಮಿ

harihara-(1)

ಹರಿಹರ (ಹೊಸ ನಾವಿಕ ವಾರ್ತೆ) : ನಗರದ ರಾಜಾರಾಂ ಕಾಲೋನಿಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಶ್ರದ್ಧಾ ಭಕ್ತಿಯಿಂದ ಶ್ರೀರಾಮ ನವಮಿಯನ್ನು ಆಚರಿಸಲಾಯಿತು.
ಬೆಳಗಿನ ಜಾವದಲ್ಲಿ ದೇವರ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ, ನಾನಾ ವಿಧದ ಪುಷ್ಪಾಲಂಕಾರ, ಶಾಸ್ತ್ರೋಕ್ತ ಪೂಜಾ ವಿಧಿವಿಧಾನಗಳು ಜರುಗಿದವು. ದೇವಸ್ಥಾನಕ್ಕೆ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು.
ಮಧ್ಯಾಹ್ನ ಶ್ರೀರಾಮ ತೊಟ್ಟಿ ಲೋತ್ಸವ ಕಾರ್ಯಕ್ರಮದ ಸೇವೆ ಯಲ್ಲಿ ನವರತ್ನ ಜೂವೆಲೆರ್ಸ್ ಮಾಲೀಕ ಶಶಿಕಾಂತ್ ಕುಟುಂಬ ದವರು ಪಾಲ್ಗೊಂಡಿದ್ದರು.
ಆಗಮಿಸಿದ ಸಾವಿರಾರು ಭಕ್ತರಿಗೆ ದೇವಸ್ಥಾನ ವತಿಯಿಂದ ಪಾನಕ, ಕೋಸಂಬರಿ, ಲಾಡು, ಪ್ರಸಾದವನ್ನು ವಿತರಿಸಲಾಯಿತು.
ಸೀತಾರಾಮ್ ಸೇವಾ ಸಮಿತಿ ಅಧ್ಯಕ್ಷ ಎ.ವಾಮಾನಮೂರ್ತಿ, ಟ್ರಸ್ಟಿ ಕೆ.ಟಿ. ದೇಶಪಾಂಡೆ, ಖಜಾಂಚಿ ಎಂ.ಬಿ.ಗಂಗಾಧರ, ಮಾಲತೇಶ್ ಎಸ್.ಕುಲಕರ್ಣಿ, ಅರುಣ್ ಪಾಂಡೆ, ಗೋಪಿನಾಥ್ ಪಾಂಡೆ, ಮೇನೇಜರ್ ಎಚ್, ರಂಗನಾಥ್, ಅರ್ಚಕ ಮೋಹನ್ ಭಟ್, ಎನ್.ಎಚ್.ಅರ್ಪಿತಾ ಇತರರು ಉಪಸ್ಥಿತರಿದ್ದರು.
ಸಾಯಂಕಾಲ ದೇವಸ್ಥಾನದ ಆವರಣದಲ್ಲಿ ಹಿಂದೂಜ್ವಾಲೆ ಯುವಶಕ್ತಿ ಸಂಘದ ವೇದಿಕೆಯಲ್ಲಿ ಪ್ರಖ್ಯಾತ ಅಚ್ಚುತದಾಸರವರ ಶಿಷ್ಯರಾದ ಯಪುರದ ವಿದ್ವಾನ್ ಈಶ್ವರದಾಸ್ ಕೋಪೆಕಾರ್ ಸೀತಾ ರಾಮ ಕಲ್ಯಾಣೋತ್ಸವ ಕುರಿತು ಹರಿಕೀರ್ತನೆ ನಡೆಸಿಕೊಟ್ಟರು. ರಘುನಾಥ್ ನಾಕೋಡರವರ ಶಿಷ್ಯರಾದ ದಾವಣಗೆರೆಯ ರಾಜು ಹಿರೇಮಠ್ ತಬಲಾ ಸಾಥ್ ನೀಡಿದರು. ರಾಮಚಂದ್ರ ಹೆಗಡೆ ಹಾರ್ಮೋನಿಯಂ ಸಾಥ್ ನೀಡಿದರು.
ಇದೇ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ಸೇವರ್ಥಿಗಳಾದ ಅರ್ಪಿತಾ ಎನ್. ಎಚ್. ಮಂಜುಳಾ ಗೋಪಿ ನಾಥ್ ಪಾಂಡೆ, ಹಿಂದೂಜಲೆ ಯುವ ಶಕ್ತಿ ಸಂಘದ ಅಧ್ಯಕ್ಷ ಸುನಿಲ್, ಜ್ಯೋತಿ ಆರ್ಟ್ಸನ ಮಾರುತಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.