ಮೊದಲ ಹಂತದ ಮತದಾನ ಆರಂಭ – ಶೇ.೪೨ರಷ್ಟು ಮತದಾನ
ನವದೆಹಲಿ: ಲೋಕಸಭೆಯ ೧೮ನೇ ಅವಧಿಗೆ ಇಂದು ಮೊದಲ ಹಂತದ ಮತದಾನ ನಡೆದಿದ್ದು, ದೇಶದ ೨೧ ರಾಜ್ಯಗಳ ೧೦೨ ಕ್ಷೇತ್ರಗಳಲ್ಲಿ ೧೬ ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಿzರೆ. ೧,೬೦೦ಕ್ಕೂ ಅಧಿಕ ಅಭ್ಯರ್ಥಿಗಳ ಭವಿಷ್ಯ ಇಂದು ಮತಪೆಟ್ಟಿಗೆಗಳಲ್ಲಿ ಭದ್ರವಾಗಲಿದೆ. ಒಟ್ಟು ೭ ಹಂತಗಳಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಮೊದಲನೆಯ ಹಂತದ ಅತೀ ಹೆಚ್ಚು ಕ್ಷೇತ್ರಗಳಿಗೆ ಇಂದು ಮತದಾನ ನಡೆದಿದೆ.
ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರಾ ಹಾಗೂ ಉತ್ತರ ಪ್ರದೇಶ, ಉತ್ತರಾಖಂಡ, ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿ ಸೇರಿದಂತೆ ೨೧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಆರಂಭವಾಗಿದೆ.
೮.೪ ಕೋಟಿ ಪುರುಷರು ಮತ್ತು ೮.೨೩ ಕೋಟಿ ಮಹಿಳೆಯರು ಸೇರಿದಂತೆ ೧೬.೬೩ ಕೋಟಿ ಮತದಾರರು ೧.೮೭ ಲಕ್ಷ ಮತಗಟ್ಟೆಗಳಲ್ಲಿ ಇಂದು ಮತದಾನ ಮಾಡಲಿzರೆ. ಬೆಳಗ್ಗೆ ೭ ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ ೬ ಗಂಟೆಗೆ ಮುಕ್ತಾಯವಾಗಲಿದೆ.
ಲೋಕಸಭಾ ಚುನಾವಣೆ ೨೦೨೪ರ ಮೊದಲ ಹಂತದ ಮತದಾನ ಆರಂಭ ಗೊಂಡಿದ್ದು ೧೦೨ ಕ್ಷೇತ್ರಗಳಲ್ಲಿ ಈ ವರೆಗೂ ಮಧ್ಯಾಹ್ನ ೩.೨೦ರ ವೇಳೆಗೆ ಸುಮಾರು ಶೇ.೪೨ರಷ್ಟು ಮತದಾನ ನಡೆದಿದೆ.
೨೧ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ೧೮ನೇ ಲೋಕಸಭೆಗೆ ಮತದಾನ ಪ್ರಗತಿಯಲ್ಲಿದೆ. ಮೊದಲ ಹಂತದಲ್ಲಿ ತಮಿಳುನಾಡು (೩೯), ರಾಜಸ್ಥಾನ (೧೨), ಉತ್ತರ ಪ್ರದೇಶ (೮), ಮಧ್ಯಪ್ರದೇಶ (೬), ಉತ್ತರಾಖಂಡ (೫), ಅರುಣಾ ಚಲ ಪ್ರದೇಶ (೨), ಮೇಘಾಲಯ (೨), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (೧), ಮಿಜೋರಾಂ (೧), ನಾಗಾಲ್ಯಾಂಡ್ (೧), ಪುದುಚೇರಿ (೧), ಸಿಕ್ಕಿಂ (೧) ಮತ್ತು ಲಕ್ಷದ್ವೀಪ (೧). ಅಲ್ಲದೆ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ ೫, ಬಿಹಾರದಲ್ಲಿ ೪, ಪಶ್ಚಿಮ ಬಂಗಾಳದಲ್ಲಿ ೩, ಮಣಿಪುರದಲ್ಲಿ ಎರಡು ಮತ್ತು ತ್ರಿಪುರಾ, ಜಮ್ಮು ಮತ್ತು ಕಾಶ್ಮೀರ ಮತ್ತು ಛತ್ತೀಸ್ ಗಢದಲ್ಲಿ ತಲಾ ೧ ಸ್ಥಾನಗಳಲ್ಲಿ ಚುನಾವಣೆ ನಡೆಯುತ್ತಿದೆ.
ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಈ ಲೋಕಸಭಾ ಚುನಾವಣೆಯ ಜೊತೆಗೆ ವಿಧಾನಸಭೆಗಳಿಗೂ ಚುನಾವಣೆ ನಡೆಯುತ್ತಿದೆ. ಇವುಗಳ ಪೈಕಿ ಅರುಣಾಚಲ ಪ್ರದೇಶದ ೬೦ ಸ್ಥಾನಗಳು ಮತ್ತು ಸಿಕ್ಕಿಂ ೩೨ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
ತಮಿಳುನಾಡಿನಲ್ಲಿ ಮಧ್ಯಾಹ್ನ ೧ ಗಂಟೆ ವರೆಗೆ ಶೇ.೩೯.೫ ರಷ್ಟು ಮತದಾನ ನಡೆದಿದ್ದರೆ, ರಾಜಸ್ಥಾನ ದಲ್ಲಿ ಶೇ.೩೩.೭ ರಷ್ಟು, ಉತ್ತರ ಪ್ರದೇಶದಲ್ಲಿ ಶೇ.೩೭, ಮಧ್ಯ ಪ್ರದೇಶದಲ್ಲಿ ಶೇ.೪೪.೪ ರಷ್ಟು ಮತದಾನ ನಡೆದಿದೆ. ಮಹಾ ರಾಷ್ಟ್ರದಲ್ಲಿ ಅತಿ ಕಡಿಮೆ ಅಂದರೆ, ೩೦.೬ರಷ್ಟು ಮತದಾನ ನಡೆದಿ ದ್ದರೆ, ತ್ರಿಪುರಾದಲ್ಲಿ ಶೇ.೫೨.೬೭ ರಷ್ಟು ಮಂದಿ ಮತ ಚಲಾವಣೆ ಮಾಡಿದ್ದು ಗರಿಷ್ಠ ಪ್ರಮಾಣದಲ್ಲಿ ಮತದಾನ ನಡೆದಿದೆ.