ಶರಾವತಿ ಸಂತ್ರಸ್ಥರ ಕುರಿತು ಮಾತನಾಡುವ ನೈತಿಕತೆ ಇದೆಯೇ; ಪರೋಕ್ಷವಾಗಿ ಬಿಜೆಪಿಗೆ ಕುಟುಕಿದ ಆರ್‌ಎಂಎಂ…

manjunath-gowdru

ಶಿವಮೊಗ್ಗ : ನೂರಾರು ಎಕರೆ ಅರಣ್ಯ ಕಂದಾಯ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿಸಿ ಕೊಂಡ ಪುಣ್ಯಾತ್ಮನಿಗೆ ಶರಾವತಿ ಸಂತ್ರಸ್ತರ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ ಎಂದು ಯಾರ ಹೆಸರೂ ಹೇಳದೇ ಎಂಎಡಿಬಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬಿಜೆಪಿಯವರು ಶರಾವತಿ ಸಂತ್ರಸ್ತರ ಬಗ್ಗೆ ಮಾತನಾಡುವುದನ್ನು ನೋಡಿದರೆ ನಗು ಬರುತ್ತದೆ. ಪಾದಯಾತ್ರೆ ಮಾಡಿರುವುದು ನಾವು ಎಂದು ಹೇಳುತ್ತಾರೆ. ಆದರೆ, ಸಂತ್ರಸ್ತರ ಪರವಾಗಿ ಯಾರು ಪಾದ ಯಾತ್ರೆ ಮಾಡಿದ್ದು ಎಂದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಸರ್ಕಾರ ಸಂತ್ರಸ್ತರಿಗೆ ಏನು ಮಾಡಿತು ಎಂದು ಕೇಳುತ್ತಾರೆ. ಹೌದು ಕಾಂಗ್ರೆಸ್ ಸರ್ಕಾರ ಏನೂ ಮಾಡಿಲ್ಲ ಎಂದಿಟ್ಟುಕೊಳ್ಳೋಣ ೧೦ ವರ್ಷ ಇವರಿದ್ದರಲ್ಲ ಹಡಿದು ಕಟ್ಟೆ ಹಾಕಿದ್ದು ಏನು? ಸಂಸದ ರಾಘವೇಂದ್ರ ಅವರು ೩ ತಿಂಗಳಲ್ಲಿ ಸಂತ್ರಸ್ತರ ಸಮಸ್ಯೆ ಬಗೆಹರಿಸುವು ದಾಗಿ ಮಾತು ಕೊಟ್ಟಿದ್ದರಲ್ಲ, ೨೦೧೯ರಲ್ಲಿಯೇ ಮಾಜಿ ಮುಖ್ಯಮಂತ್ರಿಯೊಬ್ಬರು ಗುರುತಿಸುವಿಕೆಯನ್ನು ೭೫ ವರ್ಷಗ ಳಿಂದ ೨೫ ವರ್ಷಕ್ಕೆ ಇಳಿಸುತ್ತೇವೆ ಎಂದಿದ್ದರಲ್ಲ ಏನಾಯಿತು ಎಂದು ಪ್ರಶ್ನೆ ಮಾಡಿದರು.
ಶಿವಮೊಗ್ಗ ಸುತ್ತಮುತ್ತ ನೂರಾರು ಎಕರೆ ಭೂಮಿಯನ್ನು ಡಿ ನೋಟಿಫಿಕೇಷನ್ ಮಾಡಿಸಿ ಕೊಳ್ಳಲು ಈ ಪುಣ್ಯಾತ್ಮರಿಗೆ ಬರುತ್ತೆ. ಶರಾವತಿ ಸಂತ್ರಸ್ತರ ಭೂಮಿಯನ್ನು ಡಿ ನೋಟಿಫಿಕೇಷನ್ ಮಾಡಿಸಲಿಲ್ಲ ಏಕೆ? ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿzಗ ಮೂರು ತಿಂಗಳೊಳಗೆ ಭೂಮಿ ಹಂಚಿಕೆ ಮಾಡಲಾಗುವುದು ಎಂದಿದ್ದರು. ಸರ್ಕಾರದ ಮಟ್ಟದಲ್ಲಿ ಏನಾದರೂ ತೀರ್ಮಾನ ಕೈಗೊಂಡರಾ? ಈ ಬಿಜೆಪಿ ನಾಯಕರಿಗೆ ಸಂತ್ರಸ್ತರ ಪರವಾಗಿ ಮಾತನಾಡುವ ಯಾವ ಹಕ್ಕೂ ಇಲ್ಲ ಎಂದು ಕುಟುಕಿದರು.
ಸಾಕು, ಬಿಜೆಪಿಯವರು ಶರಾವತಿ ಸಂತ್ರಸ್ತರಿಗೆ ಏನೂ ಮಾಡುವುದೂ ಬೇಡ. ಪದೇ ಪದೇ ಬಗೆಹರಿಸುತ್ತೇವೆ ಎಂದು ಹೇಳುತ್ತಾ ಮೊಸಳೆ ಕಣ್ಣೀರು ಸುರಿಸುವುದು ಬೇಡ. ಅವರ ಸುಳ್ಳುಗಳೂ ಬೇಡ. ನಮ್ಮ ಸರ್ಕಾರ ಕೇಂದ್ರದಲ್ಲಿ ಬಂದರೆ ನಾವು ಖಂಡಿತಾ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಕಾಗೋಡು ತಿಮ್ಮಪ್ಪ ಅವರಂತಹವರನ್ನು ಈ ಬಿಜೆಪಿ ಯವರು ಟೀಕಿಸುವುದನ್ನು ನೋಡಿದರೆ ಅಸಹ್ಯವಾಗುತ್ತದೆ. ಅವರು ಭೂ ಸಾಗುವಳಿದಾರರ, ಸಂತ್ರಸ್ತರ ಪರವಾಗಿ ೯೨೦೦ ಎಕರೆ ಭೂಮಿ ಮಂಜೂರು ಮಾಡಿಸಿದ ದೊಡ್ಡ ನಾಯಕ. ಅಂತಹವರ ಬಗ್ಗೆ ಮಾತನಾಡುವ ಯೋಗ್ಯತೆ ಈ ಬಿಜೆಪಿಯವರಿಗೆ ಇಲ್ಲ ಎಂದರು.
ರಾಜ್ಯ ಸರ್ಕಾರದ ಗ್ಯಾರಂಟಿ ಗಳು ಮನೆ ಮನೆಗೆ ತಲುಪುತ್ತಿವೆ. ಇದರ ಜೊತೆಗೆ ರಾಹುಲ್ ಗಾಂಧಿ ಅವರ ೨೫ ಗ್ಯಾರಂಟಿಗಳು ಕಾಂಗ್ರೆಸ್ ಗೆಲುವಿಗೆ ಕಾರಣವಾಗುತ್ತವೆ. ಈಗಾಗಲೇ ರಾಹುಲ್ ಗಾಂಧಿ ಅವರು ರೈತರಿಗೆ ಬಹುದೊಡ್ಡ ಕೊಡುಗೆ ನೀಡುವುದಾಗಿ ಹೇಳಿzರೆ. ಬಿಜೆಪಿಯವರು ರೈತರ ಸಾಲಕ್ಕೂ ಜಿಎಸ್‌ಟಿ ಹಾಕಿzರೆ. ರೈತರು ಸಾಲ ತೆಗೆದುಕೊಂಡು ಉಪಕರಣ ಕೊಳ್ಳಬೇಕು ಎಂದರೆ ಶೇ.೧೫ರಷ್ಟು ಜಿ.ಎಸ್.ಟಿ. ಕಟ್ಟಬೇಕು. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಜಿಎಸ್‌ಟಿ ತೆಗೆದು ಹಾಕಲಾಗುವುದು. ಮಹಿಳೆಯರಿಗೆ ವರ್ಷಕ್ಕೆ ಒಂದು ಲಕ್ಷ ರೂ., ನಿರುದ್ಯೋಗಿಗಳಿಗೆ ಇಡುಗಂಟು ಸೇರಿದಂತೆ ಹಲವು ಗ್ಯಾರಂಟಿಗಳನ್ನು ಕಾಂಗ್ರೆಸ್ ಪ್ರಕಟಿಸಿದೆ. ಮೋದಿ ಗ್ಯಾರಂಟಿಗಳು ಈಗಾಗಲೇ ಸುಳ್ಳು ಎಂದು ಜನರಿಗೆ ಗೊತ್ತಾಗಿದೆ. ಅಕ್ಕಿ ಗ್ಯಾರಂಟಿಯೇ ಇದಕ್ಕೆ ಸಾಕ್ಷಿ ಎಂದು ಛೇಡಿಸಿದರು.
ಕಾಂಗ್ರೆಸ್ ಪಕ್ಷ ಗೀತಾ ಶಿವರಾಜ್ ಕುಮಾರ್ ಗೆಲುವಿಗಾಗಿ ಪ್ರಚಾರವನ್ನು ಮತ್ತಷ್ಟು ಹಿಗ್ಗಿಸಿದೆ. ಬೂತ್ ಮಟ್ಟದಿಂದಲೂ ಪ್ರಚಾರ ನಡೆಯುತ್ತಿದೆ. ಅಭ್ಯರ್ಥಿಯ ಜೊತೆಗೆ ನಾವೆಲ್ಲರೂ ಕೂಡ ಅಭ್ಯರ್ಥಿ ಎಂದೆಯೇ ಪ್ರಚಾರ ಮಾಡುತ್ತಿzವೆ. ನಾಮಪತ್ರ ಸಲ್ಲಿಸುವ ಸಂದರ್ಭಕ್ಕೆ ಡಿ.ಕೆ. ಶಿವಕುಮಾರ್ ಅವರು ಬಂದಿದ್ದು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತಂದಿದೆ. ಶಕ್ತಿ ಬಂದಿದೆ. ಗೀತಾ ಶಿವರಾಜ್ ಕುಮಾರ್ ಗೆz ಗೆಲ್ಲುತ್ತಾರೆ ಎಂದರು.
ಪ್ರಮುಖರಾದ ಆಯನೂರು ಮಂಜುನಾಥ್, ಮರಿಯಪ್ಪ, ರಮೇಶ್ ಹೆಗ್ಡೆ, ಜಿ.ಡಿ. ಮಂಜುನಾಥ್ ಇನ್ನಿತರರಿದ್ದರು.