ಗ್ಯಾರೆಂಟಿ ಯೋಜನೆ ನೀಡಿ ಅವರ ಜೇಬಿನಿಂದಲೇ ಹಣ ಸುಲಿಗೆ ಮಾಡುವ ಸರ್ಕಾರ: ಕುಮಾರಸ್ವಾಮಿ ಕಿಡಿ

bjp-3

ಶಿವಮೊಗ್ಗ: ರಾಜ್ಯದಲ್ಲಿ ಪಿಕ್‌ಪ್ಯಾಕೇಟ್ ಸರ್ಕಾರ ಇದೆ. ಜನರಿಗೆ ಗ್ಯಾರಂಟಿ ಯೋಜನೆಗಳನ್ನು ನೀಡಲು ಬಡ ಜನರ ಜೇಬಿ ನಿಂದಲೇ ದುಡ್ಡು ಪಡೆಯುತ್ತಿದೆ. ಇಂತಹ ಸರ್ಕಾರದ ವಿರುದ್ಧ ಮತ ಚಲಾಯಿಸಿ, ರೈತರು, ಮಹಿಳೆಯರ ಪರ ಇರುವ ಬಿಜೆಪಿಗೆ ಮತ ನೀಡಿ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯಾಗಿಸಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕರೆ ನೀಡಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಅವರ ನಾಮಪತ್ರ ಸಲ್ಲಿಕೆ ನಂತರ ಟಿ.ಸೀನಪ್ಪಶೆಟ್ಟಿ ವೃತ್ತದ ಬಳಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು.
ಗ್ಯಾರಂಟಿ ಯೋಜನೆಯಡಿ ಮಹಿಳೆಯರಿಗೆ ಸರ್ಕಾರ ೨ ಸಾವಿರ ರೂ. ನೀಡುತ್ತಿದೆ. ಇದಕ್ಕಾಗಿ ಅವರ ಗಂಡಂದಿರು ಕುಡಿಯುವ ಮಧ್ಯದ ಬೆಲೆ ಏರಿಸಿದೆ, ಖರೀದಿಸುವ ಆಸ್ಥಿಯ ರಿಜಿಸ್ಟ್ರರ್ ಶುಲ್ಕ ಹೆಚ್ಚಿಸಿದೆ. ಇದರ ಮೂಲಕವೇ ಪ್ರತಿ ಮನೆ ಯಿಂದ ೫ ರಿಂದ ೬ ಸಾವಿರರೂ. ಹೆಚ್ಚು ಹಣವನ್ನು ಸರ್ಕಾರ ಪಿಕ್ ಪ್ಯಾಕೇಟ್ ಮಾಡುತ್ತಿದೆ ಎಂದು ಟೀಕಿಸಿದರು. ಗ್ಯಾರಂಟಿ ಯೋಜನೆ ಗಳು ಸಹ ಎಲ್ಲರಿಗೂ ತಲುಪುತ್ತಿಲ್ಲ, ಇದರ ಹೆಸರಿನಲ್ಲಿ ಅಭಿವೃದ್ಧಿ ನಿಂತಿದೆ, ಬರ ಪರಿಹಾರವೂ ನೀಡುತ್ತಿಲ್ಲ, ಕೇವಲ ರೈತರಿಗೆ ೨ ಸಾವಿರರೂ. ನೀಡಿದೆ. ಇದೇ ಯಡಿಯೂರಪ್ಪನವರ ಅವಧಿಯಲ್ಲಿ ರೈತರಿಗೆ ೨೪ ಸಾವಿರ ರೂ. ಪರಿಹಾರ ನೀಡಲಾಗಿತ್ತು. ಇದಲ್ಲದೇ ಈಗ ಲೋಕಸಭೆ ಚುನಾವಣೆಯಲ್ಲಿ ಮಹಿಳೆಯರಿಗೆ ಪ್ರತಿ ವರ್ಷ ೧ ಲಕ್ಷ ರೂ. ಕೊಡುವು ದಾಗಿ ಕಾಂಗ್ರೆಸ್ ಹೇಳುತ್ತಿದೆ. ಆದರೆ ದೇಶದಲ್ಲಿ ಬಜೆಟ್ ೪೨ಲಕ್ಷ ಕೋಟಿ ರೂ. ಆಗಿದೆ. ದೇಶದಲ್ಲಿ ೭೫ ಕೋಟಿ ಮಹಿಳೆಯರಿದ್ದಾರೆ, ಇವರಿಗೆ ೭೫ ಲಕ್ಷ ಕೋಟಿ ನೀಡುವು ದಾದರೋ ಹೇಗೆ ಎಂದು ಪ್ರಶ್ನಿಸಿದರು.
ರೈತರು ಹಾಗೂ ಮಹಿಳೆಯರಿ ಗಾಗಿ ಬಿಜೆಪಿ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಅನೇಕ ಕಾರ್ಯಕ್ರಮ ನೀಡಲಾಗಿತ್ತು. ರೈತರಿಗೆ ಕೇವಲ ೫ ಸಾವಿರ ರೂಗೆ ಟಿ.ಸಿ. ನೀಡಲಾಗುತ್ತಿತ್ತು, ಈಗ ಅದಕ್ಕೆ ೨ ಲಕ್ಷ ರೂ. ನೀಡಬೇಕು, ಯಡಿಯೂರಪ್ಪನವರ ಭಾಗ್ಯಲಕ್ಷ್ಮಿ ಯೋಜನೆ ಹೆಣ್ಣು ಮಕ್ಕಳಿಗೆ ಸಹಕಾರಿ ಯಾಗಿತ್ತು. ಪ್ರಸ್ತುತ ಎರಡು ಪಕ್ಷಗಳು ಹಾಲು ಜೇನಿನಂತೆ ಸೇರಿವೆ.ಮೈತ್ರಿಗೆ ಬೆಂಬಲಿಸಿ ರಾಘವೇಂದ್ರ ಅವರನ್ನು ಗೆಲ್ಲಿಸಿ ಎಂದು ಕರೆ ನೀಡಿದರು.
ಮಾಜಿ ಸಚಿವರಾದ ಕುಮಾರ್ ಬಂಗಾರಪ್ಪ, ಸಿ.ಟಿ. ರವಿ, ಆರಗ eನೇಂದ್ರ, ಶಾಸಕಿ ಶಾರದಾ ಪೂರ್‍ಯ ನಾಯ್ಕ, ಪ್ರಮುಖರಾದ ಕೆ.ಬಿ. ಪ್ರಸನ್ನಕುಮಾರ್, ಡಾ| ಧನಂಜಯ ಸರ್ಜಿ, ದೀಪಕ್‌ಸಿಂಗ್, ನಿಖಿಲ್, ನರಸಿಂಹ ಗಂಧದಮನೆ, ತ್ಯಾಗರಾಜ್, ದಾದಾಪೀರ್ ಧನುಷ್ ಇನ್ನಿತರರಿದ್ದರು.