ಬಿಜೆಪಿ ಅಂದರೆ ಸಮೃದ್ಧಿ ; ಕಾಂಗ್ರೆಸ್ ಅಂದರೆ ಬರ : ಗಾಯಿತ್ರಿ ಸಿದ್ದೇಶ್ವರ್
ಹೊನ್ನಾಳಿ : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲ ಬರ ತಾಂಡವ ವಾಡುತ್ತದೆ. ಅದೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಮಳೆ, ಬೆಳೆ ಸಮೃದ್ಧಿಯಾಗುತ್ತದೆ. ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಶಾಪವಿದ್ದಂತೆ, ಕಳೆಯಿದ್ದಂತೆ. ಅದನ್ನು ಬುಡ ಸಮೇತ ಕಿತ್ತುಹಾಕಬೇಕು ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಕರೆ ನೀಡಿದರು.
ಹೊನ್ನಾಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕುಂಬಳೂರು, ಕುಂದೂರು, ಯಕ್ಕನಹಳ್ಳಿ, ತಿಮ್ಲಾಪುರ ಗ್ರಾಮಗಳಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಮತಯಾಚಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೆ ಜನ ನೆಮ್ಮಯಿಂದ ಜೀವನ ನಡೆಸುವುದು ಕಷ್ಟ. ಈ ನಿಟ್ಟಿನಲ್ಲಿ ಮತದಾರರು ಯೋಚಿಸಿ ಮತ ನೀಡಬೇಕು. ನೀವು ನೀಡುವ ಒಂದೊಂದು ಮತವೂ ನಿಮ್ಮನ್ನು ಸಮೃದ್ಧಿಯತ್ತ ಕೊಂಡೊ ಯ್ಯತ್ತದೆ. ದೇಶವನ್ನು ಸುರಕ್ಷಿತವಾಗಿ ಡಲಿದೆ. ದೇಶ ಎಲ್ಲ ದೃಷ್ಟಿಯಿಂದ ಸಮೃದ್ಧವಾಗಿರಬೇಕು ಅಂದರೆ ನೀವು ನಿಮ್ಮ ಅಮೂಲ್ಯ ಮತಗಳನ್ನು ಕಮಲದ ಗುರುತಿಗೆ ನೀಡುವ ಮೂಲಕ ನನಗೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಸಂಸದ ಜಿ.ಎಂ.ಸಿದ್ದೇಶ್ವರ್ ಹಾಗೂ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಜೊತೆಯಾಗಿ ಹೊನ್ನಾಳಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿzರೆ. ೨೭ ಕೋಟಿ ವೆಚ್ಚದಲ್ಲಿ ಗ್ರಾಮ ಸಡಕ್ ಯೋಜನೆಯಲ್ಲಿ ರಸ್ತೆಗಳ ನಿರ್ಮಾಣ, ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆ ಅಡಿ ೧೮ ಗ್ರಾಮಗಳ ಅಭಿವೃದ್ಧಿ ಮಾಡಲಾಗಿದೆ. ಫಸಲ್ ಭೀಮಾ ಯೋಜನೆ ಅಡಿ ಪ್ರಸಕ್ತ ಸಾಲಿನಲ್ಲಿ ಹೊನ್ನಾಳಿ ತಾಲೂಕಿನ ರೈತರಿಗೆ ೧೫ ಕೋಟಿ ವಿಮೆ ಹಣ ಬಂದಿದೆ. ಲೋಕೋಪಯೋಗಿ ಇಲಾಖೆ ಗಳಿಂದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಪ್ರತಿಯೊಂದು ಗ್ರಾಮಗಳಲ್ಲಿ ಸಮುದಾಯ ಭವನ, ಅಂಗನವಾಡಿ ಕಟ್ಟಡ, ರಂಗಮಂದಿರ, ಶಾಲಾ ಕೊಠಡಿ, ಪ್ರಯಾಣಿಕರ ತಂಗುದಾಣ, ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ, ಶುದ್ಧ ಕುಡಿವ ನೀರಿನ ಘಟಕಗಳಿಗೆ ಅನುದಾನ ನೀಡಿzರೆ ಎಂದರು.
ದೇಶಕ್ಕೆ ಮೋದಿಜೀ ಗ್ಯಾರಂಟಿಗಳು ಮಾತ್ರ ನಿಜವಾದ ಗ್ಯಾರಂಟಿಗಳು. ಮೋದಿಜೀ ನುಡಿದಂತೆ ನಡೆದಿzರೆ. ೬೦ ವರ್ಷಗಳಿಂದ ದೇಶವನ್ನಾಳಿದ ಕಾಂಗ್ರೆಸ್ಸಿಗರು ಈಗ ಜನರ ಬಳಿ ಬಂದು ರಸ್ತೆ ಮಾಡಿಸುತ್ತೇವೆ, ಕುಡಿಯುವ ನೀರು ಕೊಡುತ್ತೇವೆ ಎಂದು ಹೇಳುತ್ತಾರೆ. ಇಷ್ಟು ವರ್ಷಗಳ ಕಾಲ ಇವರು ಮಾಡಿzದರು ಏನು? ಜನರ ಹಣವನ್ನು ಲೂಟಿ ಮಾಡುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಈ ಭೂಮಿ ಮೇಲೆ ಸೂರ್ಯ, ಚಂದ್ರ ಇರುವುದು ಎಷ್ಟು ಸತ್ಯವೋ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆಗುವುದು, ಗಾಯಿತ್ರಿ ಅಕ್ಕ ದಾವಣಗೆರೆ ಸಂಸದರಾಗುವುದು ಅಷ್ಟೇ ಸತ್ಯ. ನೀವೆಲ್ಲ ಹೇಗೆ ಗ್ರಾಪಂ ಚುನಾವಣೆಯಲ್ಲಿ ಮನೆ ಮನೆಗೂ ತೆರಳಿ ಮತ ಕೇಳುತ್ತೀರೋ ಅದೇ ರೀತಿ ಈಗಲೂ ಮನೆ ಮನೆಗೆ ಹೋಗಿ ಗಾಯಿತ್ರಿ ಸಿದ್ಧೇಶ್ವರ್ ಅಕ್ಕನ ಪರ ಮತ ಕೇಳಬೇಕು. ನಮ್ಮ ವಿರೋಧಿಗಳ ಬಳಿ ಹೋಗಿ ಇದು ದೇಶದ ಚುನಾವಣೆ, ರಾಷ್ಟ್ರ ರಕ್ಷಣೆಯ ಚುನಾವಣೆ ಎಂದು ಹೇಳುವ ಮೂಲಕ, ಮೋದಿ ಅವರ ಸಾಧನೆಗಳನ್ನು ಮನವರಿಕೆ ಮಾಡಿಕೊಟ್ಟು ಮತಗಳ ಪರಿವರ್ತನೆ ಮಾಡಿ ಗಾಯಿತ್ರಿ ಸಿದ್ದೇಶ್ವರ್ ಅವರ ಕಮಲದ ಗುರುತಿಗೆ ಮತ ಹಾಕಿಸಬೇಕು ಎಂದು ಕರೆ ನೀಡಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್, ಯುವ ಮುಖಂಡ ಜಿ.ಎಸ್.ಅನಿತ್ ಕುಮಾರ್, ಕುಬೇರಪ್ಪ, ಹನುಮಂತಪ್ಪ, ಅರಕೆರೆ ನಾಗರಾಜ್, ರಂಗನಾಥ್, ಸುರೇಂದ್ರ, ಮಾರುತಿ, ಮುರುಗೇಂ ದ್ರಪ್ಪ, ಯೋಗೇಶ್, ವಿರೂಪಾಕ್ಷಪ್ಪ, ಮಂಡಲ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಬೂತ್ ಆಧ್ಯಕ್ಷರು, ಬಿಜೆಪಿ ಮುಖಂಡರು, ಕಾರ್‍ಯಕರ್ತರು ಸಾಥ್ ನೀಡಿದರು.