ಯುಪಿಎಸ್‌ಸಿ: ರಾಜ್ಯಕ್ಕೆ ಫಸ್ಟ್ ಬಂದ ಸಿದ್ದಗಂಗಾ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಸೌಭಾಗ್ಯ…

upsc-rank-soubhagya

ದಾವಣಗೆರೆ : ದಾವಣಗೆರೆಯ ಸಿದ್ಧಗಂಗಾ ಸಂಸ್ಥೆಯ ವಿದ್ಯಾರ್ಥಿನಿ ಸೌಭಾಗ್ಯ ಬೀಳಗಿಮಠ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ೧೦೧ನೇ ರ್‍ಯಾಂಕ್ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಸಿದ್ಧಗಂಗಾ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿಯ ಸಾಧನೆಯನ್ನು ಶ್ಲಾಘಿಸಿ ಶಾಲಾ- ಕಾಲೇಜಿನ ಸಿಬ್ಬಂದಿವರ್ಗದವರು ಮತ್ತು ಪಿಯುಸಿ ಮಕ್ಕಳು ಸೌಭಾಗ್ಯ ಳನ್ನು ಆತ್ಮೀಯವಾಗಿ ಬರಮಾಡಿ ಕೊಂಡು ಹತ್ಪೂರ್ವಕವಾಗಿ ಅಭಿನಂದಿಸಿದರು. ಸೌಭಾಗ್ಯ ಅವರ ತಂದೆ ಶರಣಯ್ಯಸ್ವಾಮಿ, ತಾಯಿ ಶರಣಮ್ಮ ಹಾಗೂ ಧಾರವಾಡದಲ್ಲಿ ಈ ಪ್ರತಿಭಾನ್ವಿತೆಗೆ ಮಾರ್ಗದರ್ಶನ ನೀಡಿದ ಅಶ್ವಿನಿ ದಂಪತಿಗಳು ಉಪಸ್ಥಿತರಿದ್ದರು.
ಕಿರಿಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸೌಭಾಗ್ಯ ಶ್ರದ್ಧೆ ಮತ್ತು ಗುರಿ ಇದ್ದರೆ ಯಾವುದೂ ಅಸಾಧ್ಯವಲ್ಲ. ಗುರಿ ದೊಡ್ಡದಿರಲಿ. ಗುರಿ ತಲುಪುವಲ್ಲಿ ಅಚಲತೆ ಇರಲಿ ಎಂದರು.
ತಂದೆ ಶರಣಯ್ಯನವರು ಮಾತನಾಡಿ, ಮಧ್ಯಮ ವರ್ಗದ ನಮಗೆ ಸಿದ್ಧಗಂಗಾ ಸಂಸ್ಥೆ ಉಚಿತ ಶಿಕ್ಷಣ ನೀಡುವ ಮೂಲಕ ನೆರವು ನೀಡಿದ್ದು, ಅದಕ್ಕೆ ನಾನು ಋಣಿ ಎಂದರು.
ನಿಮ್ಮಲ್ಲೂ ಅನೇಕರು ಸಾಧನೆಯ ಹಾದಿಯಲ್ಲಿದ್ದೀರಿ. ನಿಮ್ಮ ಕನಸುಗಳು ನನಸಾಗಲಿ ಎಂದು ಮಾರ್ಗದರ್ಶಿ ಅಶ್ವಿನಿ ಅವರು ವಿದ್ಯಾರ್ಥಿಗಳನ್ನು ಶುಭಹಾರೈಸಿದರು.
ಸಮಾರಂಭದಲ್ಲಿ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೋಜ ಅವರು ಪ್ರತಿಭಾನ್ವಿತೆ ಸೌಭಾಗ್ಯ, ಮಾರ್ಗದರ್ಶಕರಾದ ಅಶ್ವಿನಿ ದಂಪತಿ ಹಾಗೂ ಪೋಷಕರಾದ ಶರಣಯ್ಯ ದಂಪತಿಗಳಿಗೆ ಸನ್ಮಾನಿಸಿದರು.
ಡಾ. ಜಯಂತ್ ಅವರು ತಮ್ಮ ಸಂಸ್ಥೆಯ ವಿದ್ಯಾರ್ಥಿನಿಯ ಸಾಧನೆ ಯನ್ನು ಹೆಮ್ಮೆಯಿಂದ ಕಿರಿಯ ವಿದ್ಯಾಥಿಗಳಿಗೆ ತಿಳಿಸುತಾ ಅವಳ ಕಾಲೇಜಿನ ದಿನಗಳನ್ನು ಮೆಲುಕು ಹಾಕಿದರು. ಪ್ರಾಚಾರ್ಯೆ ವಾಣಿಶ್ರೀ, ಸಂಸ್ಥೆಯ ಕಾರ್ಯದರ್ಶಿ ಹೇಮಂತ್ ಮತ್ತ್ತು ಎ ಉಪನ್ಯಾಸಕರು ಸೌಭಾಗ್ಯ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿ ಹರಸಿದರು.