sveep-sagara-2

ಶಿವಮೊಗ್ಗ : ಸಾಗರದಲ್ಲಿ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಏ.೧೬ ರಂದು ವಿಕಲಚೇತನರಲ್ಲಿ ಮತದಾನ ಬಗ್ಗೆ ಅರಿವು ಮೂಡಿಸಲಾಯಿತು. ವಿಕಲಚೇತನರುಗಳಿಂದ ಮತದಾನ ಜಾಗೃತಿ ಬೈಕ್ ಜಾಥಾ ನಡೆಸಿ, ಪ್ರತಿe ವಿಧಿ ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಸಾಗರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುನೀತಾ, ಜಿ ಅಂಗವಿಕಲರ ಕಲ್ಯಾಣಾಧಿಕಾರಿ ಶಶಿರೇಖಾ, ಜಿ ವಿಕಲಚೇತನರ ಚುನಾವಣಾ ಐಕಾನ್ ಜ್ಯೋತಿ, ಪಂ.ರಾ. ಸಹಾಯಕ ನಿರ್ದೇಶಕರು ಹಾಗೂ ತಾಲ್ಲೂಕು ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.