ಏ.19: ತಾಲೂಕಿನ ವಿವಿಧೆಡೆ ಕೆ.ಎಸ್. ಈಶ್ವರಪ್ಪರಿಂದ ಭರ್ಜರಿ ಪ್ರಚಾರ

16KSKP1.

(ಹೊಸ ನಾವಿಕ ಸುದ್ದಿ)
ಶಿಕಾರಿಪುರ : ಏ.೧೯ರ ಶುಕ್ರವಾರ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ತಾಲೂಕಿನ ವಿವಿಧೆಡೆ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮತಯಾಚನೆ ಮಾಡಲಿದ್ದು, ಇದರೊಂದಿಗೆ ಪಟ್ಟಣದಲ್ಲಿ ರಾಷ್ಟ್ರಭಕ್ತರ ಬಳಗದ ಕಾರ್ಯಾಲಯ ಉದ್ಘಾಟಿಸಲಿzರೆ ಎಂದು ಬಳಗದ ಕಾರ್ಯಕರ್ತ ಗಂಗ್ಯಾನಾಯ್ಕ ರಾಗಿಕೊಪ್ಪ ಅವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಮಾಜಿ ಸಚಿವ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪನವರು ಸ್ವಾಭಿಮಾನಿ ಹಿಂದೂಗಳ ನಾಯಕರಾಗಿ ಹೊರಹೊಮ್ಮಿದ್ದು ಹಿಂದುತ್ವದ ಅಜೆಂಡಾ ಜೊತೆಗೆ ವಿಶ್ವನಾಯಕ ಮೋದಿ ಅವರ ಕೈಬಲಪಡಿಸುವ ಉದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧಿಸಿzರೆ ಎಂದ ಅವರು, ರಾಜ್ಯದಲ್ಲಿ ಬಿಜೆಪಿ ಪಕ್ಷ ಯಡಿಯೂರಪ್ಪನವರ ಕುಟುಂಬದ ಹಿಡಿತದಲ್ಲಿದ್ದು ಈ ಹಿಡಿತ ತಪ್ಪಿಸಿ ಪಕ್ಷದ ಶುದ್ದೀಕರಣ ಕ್ಕಾಗಿ ಈಶ್ವರಪ್ಪನವರು ಚುನಾವಣ ಕಣದಲ್ಲಿzರೆ. ತಾಲೂಕಿನ ಮತದಾರರು ಪ್ರeವಂತರಿದ್ದು ಅಭ್ಯರ್ಥಿ ಹಿನ್ನಲೆ ಅರಿತು ಮತಚಲಾಯಿಸಲಿzರೆ. ಈ ಬಾರಿ ಚುನಾವಣೆಯಲ್ಲಿ ಈಶ್ವರಪ್ಪನವರು ತಾಲೂಕಿನಲ್ಲಿ ೧ ಲಕ್ಷ ಅಧಿಕ ಮತ ಗಳಿಸಲಿzರೆ ಎಂದು ತಿಳಿಸಿದರು.
ಚುನಾವಣಾ ಹಿನ್ನಲೆಯಲ್ಲಿ ಈಶ್ವರಪ್ಪನವರು ಇದೇ ೧೯ರ ಶುಕ್ರವಾರ ತಾಲೂಕಿನಲ್ಲಿ ಪ್ರವಾಸ ಹಮ್ಮಿಕೊಂಡಿದ್ದು, ಪಟ್ಟಣದ ಶಿರಾಳಕೊಪ್ಪ ರಸ್ತೆಯಲ್ಲಿನ ರಾಘವೇಂದ್ರ ಬಡಾವಣೆಯ ಗಣಪತಿ ಗೋಪುರ ಬಳಿ ರಾಷ್ಟ್ರಭಕ್ತರ ಬಳಗದ ನೂತನ ಕಾರ್ಯಾಲಯ ಉದ್ಘಾಟನೆ ನೆರವೇರಿಸಲಿzರೆ ಎಂದ ಅವರು, ಅಂದು ಬೆಳಿಗ್ಗೆ ೯ ಗಂಟೆಗೆ ಪೂಜೆ ಹೋಮ ಹವನ ೧೧ಕ್ಕೆ ಉದ್ಘಾಟನೆ ನಂತರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಲಿzರೆ ಎಂದರು.
ಅಂದು ಮಧ್ಯಾಹ್ನ ೧೨ ಗಂಟೆಗೆ ಸಾಲೂರು ಮಠಕ್ಕೆ ತೆರಳಿ ಸೈನಾಭಗತ್ ಸ್ವಾಮೀಜಿ ಆಶೀರ್ವಾದ ಪಡೆದು ಜಂಕ್ಷನ್‌ನಲ್ಲಿ ಅಂಜನಾಪುರ ಹೋಬಳಿ ಮತದಾರರ ಪ್ರಚಾರ ಸಭೆಯಲ್ಲಿ ಬಾಷಣ ಮಾಡಲಿzರೆ. ಮದ್ಯಾಹ್ನ ೪ಕ್ಕೆ ಹೊಸೂರು ಹೋಬಳಿ ಮತದಾರರ ಪ್ರಚಾರ ಸಭೆ ಹೊಸೂರು ಜಂಕ್ಷನ್‌ನಲ್ಲಿ ಆಯೋಜಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಬಳಗದ ಕಾರ್ಯಕರ್ತರಾದ ಕುಮಾರ ನಾಯ್ಕ ಗೊದ್ದನಕೊಪ್ಪ, ಮುರುಗೇಶ, ಗಂಗಾಧರ, ಶಿವ್ಯಾನಾಯ್ಕ, ಪುಟ್ಟಪ್ಪ ತಿಮ್ಲಾಪುರ ಮತ್ತಿತರರು ಉಪಸ್ಥಿತರಿದ್ದರು.